ಪ್ರಶಾಂತ ಜಿ ಹೂಗಾರ

ಜಗತ್ತಿನ ಅತಿ ದೊಡ್ಡ ಆಸ್ತಿಯೆಂದರೆ ಅದು ತಾಯಿ. ನನಗೆ ನನ್ನ ಹೆತ್ತವ್ವ ಎಂದರೆ ಎರಡು ಕಣ್ಣುಗಳಿದ್ದಂತೆ, ನಾನು ಗರ್ಭದಲ್ಲಿದ್ದಾಗ ಒಂಬತ್ತು ತಿಂಗಳೂ ತನ್ನ ಹೊಟ್ಟೆಯಲ್ಲಿ ತುಂಬಿಕೊಂಡು ನೋವು ತಿಂದು ಹೆರುವಾಗ ಸಾವಿನೊಂದಿಗೆ ಹೋರಾಡಿ ಪುನರ್ಜನ್ಮ ಪಡೆದು ನನ್ನನ್ನ ಹೆತ್ತವಳು ನನ್ನವ್ವ .

ಹುಟ್ಟಿಚಿಕ್ಕವನಿದ್ದಾಗ ಮೊದಲ ಅಕ್ಷರ ಕಲಿಸಿದ ಮೊದಲ ಗುರು. ಬೆಳೆದಂತೆಲ್ಲ ನಮ್ಮ ತಪ್ಪುಗಳನ್ನ ತಿದ್ದಿ ಬುದ್ದಿ ಹೇಳೆ ಸಮಾಜದಲ್ಲಿ ಯಾರ ಕೈ ಗೊಂಬೆಯಾಗದಂತೆ ಬದುಕಲು ಕಲಿಸಿದ ಮಹಾ ಗುರುಮಾತೆ ನೀನು. ಭುಜದೆತ್ತರಕ್ಕೆ ಬೆಳೆದು ನಿಂತಾಗ ಬಡತನದಲ್ಲಿ ನಮ್ಮ ಕುಟುಂಬವನ್ನ ನಿರ್ವಹಿಸಲು ಹೂವು ವ್ಯಾಪರಕ್ಕೆ ಕಳಿಸಿ ಬದುಕಲು ದಾರಿಮಾಡಿ ಕೊಟ್ಟವಳು ನೀನು. ಬೆಳೆದಂತೆಲ್ಲಾ ಕೃಷಿ, ಕಲಿಕೆ, ಪಾಠ, ಪ್ರವಚನ, ಸಾಧಕರ ಕಥೆಗಳನ್ನ ಹೇಳಿ ಅವರಂತೆ ಬದುಕಲು ಕಲಿಸಿ ಆತ್ಮಸ್ತೈರ್ಯ ತುಂಬಿ ಬದುಕಲು ಕಲಿಸಿದ ಅವ್ವಾ ನಿನಗೆ ಶರಣು.

ಅಮ್ಮ -ಮಗಳು ತಾನನನ ತೋಂತನನ!

ಅಮ್ಮಾ, ನಿನ್ನಂಥ ತಾಯಿ ಪ್ರಪಂಚದಲ್ಲಿ ಎಲ್ಲೂ ಇಲ್ಲ. ಇಡೀ ಪ್ರಪಂಚವನ್ನ ಸುತ್ತಿ ಬಂದ್ರು ಆ ನಿನ್ನ ಕೈ ರೊಟ್ಟಿಊಟ, ಅಣ್ಣ ತುತ್ತನ್ನ ಎಂದಿಗೂ ಮರೆಯಲಾಗದು. ನಿನ್ನಂತಹ ತಾಯಿ ಎಲ್ಲೂ ಇಲ್ಲ. ನನ್ನಿಂದ ಎಷ್ಟುಕಷ್ಟಪಟ್ಟೆಅಲ್ವಾ ನೀನು...? ಅಂದು ಕಾಲೇಜು ಪರೀಕ್ಷೆ ಬರೆದು ಬಂದಾಗ ಫಲಿತಾಂಶದ ಆತಂಕದಲ್ಲಿದ್ದಾಗ ನನಗಿಂತ ಹೆಚ್ಚು ನೀನೆ ಆತಂಕಗೊಂಡಿದ್ದು. ಕಾಲೇಜು ದಿನಗಳಲ್ಲಿ ಒಂದೆರಡು ದಿನ ಮನೆಗೆ ಬರದಿದ್ದಾಗ ಮಗ ಯಾವಾಗ ಬರ್ತಾನೊ ಎಂದು ಮನೆಯ ಬಾಗಿಲಲ್ಲಿ ಕಾದದ್ದು ಇಂದೀಗು ನನಗೆ ನೆನಪಿದೆ. ಅತ್ಯಂತ ಅಪರೂಪದ ಜೀವ ಅಂದ್ರೆ ನೀನೆ ಹಡೆದವ್ವಾ . ನೀನು ನನ್ನ ಮೇಲಿಟ್ಟಪ್ರೇಮ ಆ ಭಗವಂತನ ಪ್ರೇಮಕ್ಕಿಂತ ಹೆಚ್ಚು. ಅಪ್ಪಾ, ಅಮ್ಮಾ ನೀವಿಬ್ಬರೂ ನಿಮ್ಮ ಜೀವ ಒತ್ತೆಇಟ್ಟು, ದುಡಿದು ನಮ್ಮನ್ನ ಸಾಕಿದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಕಣ್ಣಲ್ಲಿ ನೀರು ಜಿನುಗಿ ಎರಡು ಕಣ್ಣುಗಳು ಕೆಂಪಾಗುತ್ತವೆ. ಅಮ್ಮಾ ನನ್ನ ಜೀವನಪರಿಯಂತ ನನ್ನ ಜೀವನ ಸವಿಸಿದರುಕೂಡಾ, ನಿನ್ನ ಋುಣ ತಿರಸಲು ಆಗಲ್ಲಾ, ನಾನು ನಿನ್ನ ರುಣದಲ್ಲೇ ಪ್ರಪಂಚತೊರೆಯುತ್ತೇನೆ.

ನನ್ನನ್ನ ಮನುಷ್ಯನನ್ನಾಗಿ ಮಾಡೋದಕ್ಕೆ ತಾಯಿ ಸಾಕಷ್ಟುಕೆಲಸಮಾಡುತ್ತಾಳೆ. ಆ ಕೆಲಸಕ್ಕೆ ಮಕ್ಕಳಾದ ನಮ್ಮ ಮೇಲೆ ಎಷ್ಟುದೊಡ್ಡ ಋುಣ ಇದೆ ಅಂದ್ರೆ ನಮ್ಮ ಚರ್ಮ ತಗೆದು ತಾಯಿಯ ಕಾಲಿಗೆ ಚಪ್ಪಲಿಮಾಡಿದರೂ ಸಹ ಅವಳ ಋುಣ ತೀರಿಸಲಾಗದು. ಅಂತಹ ತಾಯಿಗೆ ಕೃತಜ್ಞತೆಯಿಂದ ಅವಳು ಬದುಕಿರುವಷ್ಟುದಿನ ಸಂತೋಷವಾಗಿ ನೋಡಿಕೊಂಡರೆ ಅದಕ್ಕಿಂತ ಹೇಚ್ಚೇನೂ ಬೇಕಿಲ್ಲ. ಇರುವಷ್ಟುದಿನ ಗೌರವದಿಂದ, ಪ್ರೀತಿಯಿಂದ ನೋಡಿಕೊಂಡರೆ ತಾಯಿಯ ಋುಣ ತೀರಿಸಿದಂತಾಗುತ್ತದೆ.

ಅಮ್ಮನೇ ಒಲ್ಲದ ಅಮ್ಮನ ಗುಣ!

ನನಗೆ ನನ್ನ ತಾಯಿಯೇ ಸ್ಪೂರ್ತಿ, ನನ್ನ ಹುಟ್ಟು ಹಬ್ಬಕ್ಕೆ ನನಗೆ ಸಾಹಿತಿಗಳ ಪುಸ್ತಕವನ್ನ ಕೊಡುಗೆಯಾಗಿ ನೀಡುತ್ತಿದ್ದರು. ಆ ಆದರ್ಶಮಾತೆ. ದೈವ ಸಹಾಯ ಒಂದಿದ್ದರೆ ಮೂಗ ಹಾಡಬಲ್ಲ, ಕುರುಡ ಓದಬಲ್ಲ, ಹೆಳವ ನಡೆಯಬಲ್ಲ, ದೈವ ಎಂದರೆ ಅದು ಅದೃಷ್ಟದ ಶಕ್ತಿ ಅಲ್ಲಾ. ನಿತ್ಯವು ನಮ್ಮೊಡನಿದ್ದು ನಮ್ಮನ್ನು ಸಾಕಿ ಸಲುಹುವ ತಾಯಿಯೇ ದೈವ ಎಂಬ ನಂಬಿಕೆ ಇಂದ ಬದುಕುತ್ತಿದ್ದೇನೆ .

ತಾಯಿ ವಿದ್ಯೆ ಅನ್ನೋ ಜ್ಯೋತಿಯನ್ನ ಮೂಡಿಸಿದ್ದಾರೆ. ಅದೇ ನನಗೆ ಗೌರವ ತಂದುಕೊಟ್ಟಿದೆ. ತಾಯಿಯ ಆಸರೆ ಇಲ್ಲದಿದ್ದರೆ ನನ್ನ ಬದುಕು ಕತ್ತಲಾಗುತ್ತಿತ್ತು. ಹೀಗಾಗಿ ತಾಯಿಯ ರುಣ ತೀರಿಸಲಾಗದು ಬೇರೆ ಎಲ್ಲ ವಸ್ತುಗಳನ್ನ ಕೊಂಡಿಕೊಳ್ಳಬಹುದು ಆದರೆ ತಾಯಿಯನ್ನ ಯಾವತ್ತು ಕೊಂಡುಕೊಳ್ಳಲಾಗದು. ತಾಯಿಗಿಂತ ಬಂಧು, ಇಲ್ಲ ಉಪ್ಪಿಗಿಂತ ರುಚಿ ಇಲ್ಲ, ಇದು ನನ್ನ ಜೀವನದಲ್ಲಿ ಸತ್ಯವಾಗಿದೆ. ತಾಯಿಯೂ ಕರ್ತವ್ಯಕ್ಕೂ ಮೀರಿ ನನ್ನನ್ನ ನೋಡಿಕೊಂಡಿದ್ದಾಳೆ ಅವಳ ಮಮತೆ, ಮಮಕಾರವನ್ನು ಯಾವತ್ತೂ ಯಾರಿಂದಲೂ ಕಸಿದುಕೊಳ್ಳಲಾಗದು. ಯಾರು ತಮ್ಮ ತಾಯಂದಿರನ್ನ ದೂರಬೇಡಿ ಕಳೆದುಕೊಂಡರೆ ಮತ್ತೆ ಸಿಗಲಾರದ ವಸ್ತು ತಾಯಿ.