ಮಕಾಡೆ ಮಲಗೋದು ಎಂದ್ರೆ ಸುಮ್ಮನಲ್ಲ

First Published 16, Jun 2018, 4:33 PM IST
Sleeping tips and tricks
Highlights

'ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ' ಎನ್ನುವ ಮಾತಿದೆ. ನಾವು ಆಕಳಿಸಿದರೆ ನಮ್ಮ ದೇಹ ವಿಶ್ರಾಂತಿ ಬೇಡುತ್ತಿದೆ ಎಂದರ್ಥ. ದೇಹಕ್ಕೆ  ಏಳರಿಂದ ಎಂಟು ಗಂಟೆ ನಿದ್ದೆ ಮಾಡುವುದರಿಂದ ಸುಂದರವಾಗಿ ಕಾಣಿಸುವುದಲ್ಲದೆ, ಕೂದಲು ಹಾಗೂ ದೇಹದ ಇತರೆ ಭಾಗಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಲೂ ನೆರವಾಗುತ್ತದೆ. ರಾತ್ರಿ 10 ರಿಂದ ಬೆಳಗ್ಗೆ7ರ ಅವಧಿಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ನಿದ್ರಿಸಬೇಕು. 

ನೆಮ್ಮದಿಯಿಂದ ಮಾಡೋ ನಿದ್ರೆ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ, ದೈಹಿಕ ಸೌಂದರ್ಯವನ್ನೂ ಕಾಪಾಡಿಕೊಳ್ಳಲೂ ಅನಿವಾರ್ಯ. ಇಂಥ ನೆಮ್ಮದಿಯ ನಿದ್ರೆ ನಿಮ್ಮದಾಗಲು ನೀವಿದನ್ನು ಫಾಲೋ ಮಾಡಬೇಕು...

- ಮಲಗುವ ಮುನ್ನ ಟಿವಿ ನೋಡಬಾರದು. ನಿಮ್ಮಲ್ಲಿಯೋ ಗ್ಯಾಜೆಟ್‌ಗೆಲ್ಲ ವಿರಾಮ ನೀಡಿ, ಮಲಗಿ. 

- ತುಸು ಸಮಯವನ್ನು ವ್ಯಾಯಾಮ, ಜಾಗಿಂಗ್ ಹಾಗೂ ಯೋಗಕ್ಕಾಗಿ ಮೀಸಲಿಟ್ಟರೆ, ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ. ಕೆಲವರು ನಿದ್ರೆ ಬರೋಲ್ಲವೆಂದು ಸಕ್ಕರೆ ತಿನ್ನುವ ಅಭ್ಯಾಸ ಇಟ್ಟಿಕೊಂಡಿರುತ್ತಾರೆ. ಇವೆಲ್ಲ ಮಾಡದಿದ್ದರೆ ಒಳಿತು.

- ಮೆತ್ತಗಿರುವ ಹಾಸಿಗೆಯಿಂದ ಬೆನ್ನು ನೋವು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ತುಸು ಗಟ್ಟಿ ಹಾಸಿಗೆ ಮೇಲೆ ಮಲಗಿದರೆ ಒಳ್ಳೆಯದು. ಏಳೆಂಟು ವರ್ಷಕ್ಕೊಮ್ಮೆಯಾದರೂ ಹಾಸಿಗೆಯನ್ನು ಬದಲಿಸಿ. 

- ಹಾಸಿಗೆಯಷ್ಟೇ ದಿಂಬಿನೆಡೆಗೂ ಗಮನ ಹರಿಸಬೇಕು. ಗಟ್ಟಿ ದಿಂಬು ಕುತ್ತಿಗೆ ನೋವು ತರಿಸುತ್ತದೆ. ಗಲ್ಲ ಹಾಸಿಗೆಗೆ ಸಮಾನಾಂತರವಾಗಿರುವಂತೆ ದಿಂಬಿರಬೇಕು. 

-ನಿಮಗೆ ಯಾವ ಕಡೆ ಮಲಗಿದರೆ ಕಂಫರ್ಟ್ ಎನಿಸುತ್ತದೋ, ಹಾಗೆ ಮಾಡಿ. ನೇರವಾಗಿ ಮಲಗಿದರೆ ಒಳಿತು. 

- ಹೊಟ್ಟೆ ಕೆಳಗೆ ಮಾಡಿ ಮಲಗೋ ಅಭ್ಯಾಸ ಅಷ್ಟು ಒಳ್ಳೆಯದಲ್ಲ. ಕತ್ತು ಮತ್ತು ಬೆನ್ನಿಗೆ ಕಷ್ಟವಾಗುವುದು ಗ್ಯಾರಂಟಿ.

ರಾತ್ರಿ ಗಾಢವಾಗಿ ನಿದ್ರೆ ಮಾಡದೇ ಹೋದರೆ, ಬೆಳಗ್ಗೆ ಆಯಾಸದಿಂದಲೇ ಏಳಬೇಕಾಗುತ್ತದೆ. ಆದ್ದರಿಂದ ಗಾಢ ನಿದ್ರಿಗೆ ಅಗತ್ಯವಿರುವ ವ್ಯವಸ್ಥೆಯನ್ನೂ ಪ್ರತಿಯೊಬ್ಬರೂ ಮಾಡಬೇಕು.

loader