ಬಿಸಿಲು-ಮಳೆ ಆಡುತ್ತಿದ್ದರೆ ಸೊಳ್ಳೆಗೆ ಎಲ್ಲಿಲ್ಲದ ಆನಂದ. ಇಂಥ ಹವಾಮಾನದಲ್ಲಿ ತನ್ನ ಸಂತಾನಾಭಿವೃದ್ಧಿಯನ್ನು ಮಾಡಿಕೊಳ್ಳುವ ಇವುಗಳ ಕಾಟ ಅಷ್ಟಿಷ್ಟಲ್ಲ. ಇಂಥ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ.
ಮಳೆ ಬಂದು ನಿಂತಿದೆ. ಅದರಲ್ಲಿಯೂ ಕೊಡಗು ಹಾಗೂ ಕೇರಳದಲ್ಲಿ ಪ್ರವಾಹ ಬಂದು ಹೋದ ಮೇಲೆ ಕಾಡುವ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರಿದ್ದಾರೆ. ಪ್ರವಾಹ ಕಡಿಮೆಯಾದರೂ, ಉಲ್ಬಣಿಸುವ ಸೊಳ್ಳೆ ಕಾಟ, ಕಾಡೋ ರೋಗದ್ದೇ ಚಿಂತೆ ಜನರಿಗೆ.
ಅದರಲ್ಲಿಯೂ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ...ಒಂದಾ? ಎರಡಾ? ಸಾಕಷ್ಟು ರೋಗಗಳಿಂದ ಜನರು ಮತ್ತಷ್ಟು ನೋವು ಅನುಭವಿಸುತ್ತಾರೆ. ಎಷ್ಟೇ ಸ್ವಚ್ಛತೆ ಕಾಪಾಡಿದರೂ, ಆದ ಅನಾಹುತವನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಸೊಳ್ಳೆಗಳೇ ಕಚ್ಚದಂತೆ ಎಚ್ಚರವಹಿಸುವುದೊಳಿತು. ಸೊಳ್ಳೆ ಕಚ್ಚದಂತೆ ಕೇರ್‌ಫುಲ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್...
""
- ನೀಲಗಿರಿ ಎಣ್ಣೆಯನ್ನು ಮೈಗೆ ಹಚ್ಚಿಕೊಂಡರೆ, ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಹಾಗಂಥ ಇದು ಪುಟ್ಟ ಪುಟ್ಟ ಮಕ್ಕಳಿಗೆ ಸೂಟ್ ಆಗುವುದಿಲ್ಲ. ದೊಡ್ಡವರು ಬಳಸಬಹುದಷ್ಟೆ.
- ಮನೆಯೊಳಗೆ ಧೂಪ ಹಾಕಿ. ಧೂಪದ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಅಲ್ಲದೇ ನೆಗಟಿವ್ ಶಕ್ತಿಯನ್ನು ಹೋಗಿಸುತ್ತದೆ ಎನ್ನಲಾಗುತ್ತದೆ.

- ಸೊಳ್ಳೆ ಪರದೆಯನ್ನು ತಪ್ಪದೇ ಬಳಸಿ. ಸುವಾಸನಾ ಭರಿತ ಲ್ಯಾವೆಂಡರ್ ಪ್ಯಾಕನ್ನು ಮನೆಯ ಅಲ್ಲಲ್ಲಿ ಇಟ್ಟರೆ, ಸುವಾಸನಾಭರಿತವಾಗಿಯೂ ಇರುತ್ತದೆ. ಅಲ್ಲದೇ ಸೊಳ್ಳೆಯೂ ಓಡಿ ಹೋಗುತ್ತದೆ.
- ಬೇವು ಸೊಳ್ಳೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೈಗೆ ಹಚ್ಚಿಕೊಂಡರೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.
- ಟೀ ಟ್ರೀ ಎಣ್ಣೆಯನ್ನು ಮಕ್ಕಳೂ ಬಳಸಬಹುದಾಗಿದ್ದು, ಸೊಳ್ಳೆಯನ್ನು ಓಡಿಸಬಹುದು.
ಸೊಳ್ಳೆಯಿಂದ ಕಾಡೋ ಜ್ವರ, ಮನೆ ಮದ್ದು,,,ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
