ಈ ಸಿಂಪಲ್ ಫುಡ್ ಹೆಚ್ಚಿಸುತ್ತೆ ಲೈಂಗಿಕ ಸಾಮರ್ಥ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 7:37 PM IST
Simple foods which improves sexual health
Highlights

ಲೈಂಗಿಕ ಜೀವನವೇ ದಾಂಪತ್ಯದ ಯಶಸ್ಸಿಗೆ ಕಾರಣವಲ್ಲದೇ ಹೋದರೂ, ಅದೂ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಬದಲಾದ ಜೀವನ ಶೈಲಿ, ಸೇವಿಸುವ ಆಹಾರ ಮುಂತಾದ ಕಾರಣಗಳಿಂದ ದಂಪತಿಯಲ್ಲಿ ಲೈಂಗಿಕ ಆಸಕ್ತಿ ಕುಂದುತ್ತಿದೆ. ಆದರೆ, ಮನೆಯಲ್ಲಿಯೇ ಇರುವ ಅಥವಾ ಕಡಿಮೆ ಬೆಲೆಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳು ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಸಹಕರಿಸುತ್ತದೆ. ಅವುಗಳಲ್ಲಿ ಕೆಲವು ಇವು...

ದಾಂಪತ್ಯ ಜೀವನ ಸುಖವಾಗಿರಲು ಲೈಂಗಿಕ ತೃಪ್ತಿಯೂ ಮುಖ್ಯ. ಆದರೆ, ವಿವಿಧ ಕಾರಣಗಳಿಂದ ದಂಪತಿಗಳಲ್ಲಿಂದು ಲೈಂಗಿಕ ಸಾಮರ್ಥ್ಯ ಕುಸಿಯುತ್ತಿದೆ. ಆದರೆ, ಮನೆಯಲ್ಲಿಯೇ ಇರುವ ಸಿಂಪಲ್ ಆಹಾರಗಳಿಂದ ಉತ್ತಮ ಲೈಂಗಿಕ ಜೀವನ ನಡೆಸಬಹುದಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ....

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವಿದೆ. ಇದು ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಕರಿಸುತ್ತದೆ.

ಸೇಬು ಹಣ್ಣು: ವೈದ್ಯರಿಂದ ದೂರುವಿಡುವಂತೆ ಮಾಡುವ ಸೇಬು, ಲೈಂಗಿಕ ಸಾಮರ್ಥ್ಯ ಹೆಚ್ಚಿಸಬಲ್ಲದು.

ಸ್ಟ್ರಾಬೆರಿ: ಕೇವಲ ಹೃದಯಕ್ಕೆ ಮಾತ್ರವಲ್ಲ, ಉತ್ತಮ ಲೈಂಗಿಕ ಕ್ರಿಯೆಗೂ ಪೂರಕವಾಗಿದೆ.  ಪ್ರತಿದಿನ ಸ್ಟ್ರಾಬೆರಿ ಜ್ಯೂಸು ಸೇವಿಸಿದರೆ ಕಾಮೋತ್ತೇಜನವಾಗುತ್ತದೆ. 

ಶುಂಠಿ: ಇದು ಲೈಂಗಿಕ ಜೀವನವನ್ನು ಸುಧಾರಿಸುವಲ್ಲಿ ನೆರವಾಗುತ್ತದೆ. ಅದರಲ್ಲಿಯೂ ನಿಮಿರುವಿಕೆಯನ್ನು ಹೆಚ್ಚಿಸಬಲ್ಲದು. ಜೊತೆಗೆ ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. 

ಸಾಲ್ಮೊನ್ ಮೀನು: ಸಾಲ್ಮೊನ್  ಮೀನು ಆರೋಗ್ಯಕ್ಕೆ  ಉತ್ತಮವಾದ ಮೀನು. ಇದರಲ್ಲಿ ಒಮೇಗಾ ಫ್ಯಾಟಿ 3 ಆ್ಯಸಿಡ್ ಇದೆ. ಇದು ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ. 

ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಬ್ರೊಮೆಲೈನ್ ಎಂಬ ಕಿಣ್ವಗಳಿವೆ. ಇವು ಲೈಂಗಿಕ ಬಯಕೆ ಹೆಚ್ಚಿಸುತ್ತವೆ. 

ಓಟ್ಸ್: ಓಟ್ಸ್‌ನಲ್ಲಿರುವ ಟೆಸ್ಟೋಸ್ಟೆರಾನ್ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.

ಡಾರ್ಕ್ ಚಾಕಲೇಟ್: ಡಾರ್ಕ್ ಚಾಕಲೇಟ್‌ನಲ್ಲಿರುವ ಫಿನೈಲ್ ಇಥೈಲಿಮೈನ್ ಪೋಷಕಾಂಶಗಳು ಪುರುಷರ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ವೃದ್ದಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಅನಾದಿ ಕಾಲದಿಂದಲೂ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಬಳಸಲಾಗುತ್ತದೆ. ಅದಕ್ಕೆ ಸರ್ವ ಸಂಗ ಪರಿತ್ಯಾಗಿಗಳೂ ಇದನ್ನು ವರ್ಜಿಸಿರುತ್ತಾರೆ. 

ರೆಡ್ ವೈನ್: ಲೈಂಗಿಕ ಜೀವನ ಇನ್ನಷ್ಟು ಸುಖಮಯವಾಗಿರಲು ರೆಡ್ ವೈನ್ ಸೇವನೆ ಉತ್ತಮ. 

ಏಲಕ್ಕಿ: ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಏಲಕ್ಕಿಯೂ ಮುಖ್ಯವಾಗಿದೆ.  ನಿಮಿರುವಿಕೆಗೂ ಏಲಕ್ಕಿ ಅದ್ಭುತ ಆಹಾರವಾಗಿದೆ.

ನೀವು ಪ್ರೆಗ್ನೆಂಟ್ ಎಂದು ಗೊತ್ತಾಗಿದ್ದು ಯಾವಾಗ?
ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಮೀನು ಮದ್ದು
ಮಿಲನದಿಂದ ಖಿನ್ನತೆ ದೂರ
ಮಂಚದ ಮೇಲೆ ದಪ್ಪದ ಗಂಡಸರೇ ಸ್ಟ್ರಾಂಗು

 


 

loader