ಮಿಲನದಿಂದ ಖಿನ್ನತೆ ದೂರ!

life | Monday, March 19th, 2018
Suvarna Web Desk
Highlights

ಸುಖೀ ಲೈಂಗಿಕತೆಗೆ ಯೋಗ ಪ್ರಮುಖ ಚಿಕಿತ್ಸೆ ಎಂಬುದೀಗ ವಿಶ್ವಮಟ್ಟದಲ್ಲಿ ಸಾಬೀತಾಗಿದೆ. ಹನ್ನೆರಡು ವಾರಗಳ ಯೋಗಾಭ್ಯಾಸದ ಫಲವನ್ನು ಅಧ್ಯಯನ  ಮಾಡಿದಾಗ ಅಚ್ಚರಿಯ ಫಲಿತಾಂಶ ಬಂದಿತು ಎನ್ನುತ್ತಾರೆ ಅಲ್ಟರ್‌ನಿಟ್ ಹೆಲ್ತ್‌ಕೇರ್ ಸಂಸ್ಥಾಪಕರಾದ ವೈದ್ಯಕೀಯ ನಿರ್ದೇಶಕ ಡೆಸ್ಮಾಂಡ್ ಹೆಬಾಂಕ್.

- ಪ.ರಾಮಕೃಷ್ಣ ಶಾಸ್ತ್ರಿ

ಸುಖೀ ಲೈಂಗಿಕತೆಗೆ ಯೋಗ ಪ್ರಮುಖ ಚಿಕಿತ್ಸೆ ಎಂಬುದೀಗ ವಿಶ್ವಮಟ್ಟದಲ್ಲಿ ಸಾಬೀತಾಗಿದೆ. ಹನ್ನೆರಡು ವಾರಗಳ ಯೋಗಾಭ್ಯಾಸದ ಫಲವನ್ನು ಅಧ್ಯಯನ  ಮಾಡಿದಾಗ ಅಚ್ಚರಿಯ ಫಲಿತಾಂಶ ಬಂದಿತು ಎನ್ನುತ್ತಾರೆ ಅಲ್ಟರ್‌ನಿಟ್ ಹೆಲ್ತ್‌ಕೇರ್ ಸಂಸ್ಥಾಪಕರಾದ ವೈದ್ಯಕೀಯ ನಿರ್ದೇಶಕ ಡೆಸ್ಮಾಂಡ್ ಹೆಬಾಂಕ್.

'ಲೈಂಗಿಕ ಸಾಮರಸ್ಯದ ಕೊರತೆಯಿಂದ ದೀರ್ಘಕಾಲದ ಖಿನ್ನತೆಗೊಳಗಾದವರು, ಆತಂಕಗೊಂಡವರು ಯೋಗಾಭ್ಯಾಸದಿಂದ ಅಚ್ಚರಿಯ ಅನ್ಯೋನ್ಯ ದಾಂಪತ್ಯ ನಡೆಸಿದರು. ಧ್ಯಾನದ ಮೂಲಕ ಉಸಿರಾಟದ ನಿಯಂತ್ರಣ ಸಾಧಿಸಿದ ಬಳಿಕ ಮಹಿಳೆಯರು ಆವರೆಗೆ ಆರ್ಗೆಸಮ್ ಎಂದರೆ ಏನೆಂದು ತಿಳಿಯದವರೂ ಸುಖೋತ್ತುಂಗ ಶಿಖರದಲ್ಲಿ ತೇಲಿದರು' ಎಂದು ಹೇಳುತ್ತಾರೆ.

ಮಹಿಳೆಯರಿಗೇ ಹೆಚ್ಚು ತೃಪ್ತಿ 

ಅರ್ಧ ತಾಸು ಸೆಕ್ಸ್‌ನಲ್ಲಿ ತೊಡಗಿದರೆ ದೇಹ 150 ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತದೆ. ಆದರೆ ಅರ್ಧ ತಾಸು ಯೋಗಾಭ್ಯಾಸ ಮಾಡಿದರೆ ನಷ್ಟವಾಗುವುದು 129
ಕೆಲೊರಿಗಳು ಮಾತ್ರ. ಇದರ ಪರಿಣಾಮ ಬಹು ಅದ್ಭುತ ಎನ್ನುತ್ತದೆ ಸೆಕ್ಸ್ ಮೆಡಿಸಿನ್ ಜರ್ನಲ್ ವರದಿ. 

ಗಂಡ ಮತ್ತು ಹೆಂಡತಿ ಏಕಾಂತದ ಕೋಣೆಯಲ್ಲಿ ಇಂಥ ಯೋಗಾಸನಗಳನ್ನು ಮಾಡುವುದು ಪರಸ್ಪರರ ದೇಹ ವೀಕ್ಷಣೆಗೂ ಹೆಚ್ಚು ಅನುಕೂಲ. ಅನ್ಯೋನ್ಯತೆಯೂ
ಹೆಚ್ಚುತ್ತದೆ. ಇದರಿಂದ ಶ್ವಾಸಕೋಶದ ಮೇಲೆ ಹಿಡಿತ ಸಿಗುತ್ತದೆ. ದೇಹವನ್ನು ಬೇಕಾದಂತೆ ಮಣಿಸಬಹುದು, ಕಾಲುಗಳನ್ನು ಬೇಕಾದ ಹಾಗೆ ಮಡಚಿ ಭುಜದ ತನಕ
ಬಾಗಿಸಬಹುದು. ಈ ಮೂಲಕ ತೊಡೆ ಸಂದು, ಸೊಂಟ ಸೇರಿದಂತೆ ದೇಹದ ಎಲ್ಲ ಭಾಗಗಳ ಸ್ನಾಯುಗಳಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಇದು ಪುರುಷನಿಗಿಂತಲೂ ಮಹಿಳೆಗೆ ಮಿಲನದಲ್ಲಿ ಹೆಚ್ಚು ತೊಡಗಿಕೊಳ್ಳುವುದಕ್ಕೆ ಅನುಕೂಲ. ಅವಳ ಲೈಂಗಿಕ ಸ್ಥಾನಗಳು, ಗರ್ಭಕಂಠ ಎಲ್ಲವೂ ಕ್ರಿಯೆಯಲ್ಲಿ ಲೀನಗೊಂಡು ಅವಳು ಬೇಗನೆ ತೃಪ್ತಳಾಗಲು ನೆರವಾಗುತ್ತವೆ ಎಂದು ವರದಿ ಹೇಳುತ್ತದೆ.

ಲೈಂಗಿಕ ಜೀವನದಲ್ಲಿ ಬದಲಾವಣೆ 

ಪುರುಷರಿಗೂ ಯೋಗಾಭ್ಯಾಸದಿಂದಾಗಿ ಮೂತ್ರ ವಿಸರ್ಜನೆಯಲ್ಲಿ ನಿಯಂತ್ರಣ ಸಾಧ್ಯವಾಗುತ್ತದೆ. ಮಿಲನವನ್ನು ದೀರ್ಘಕಾಲ ಸಂಗಾತಿಯ ತೃಪ್ತಿಯವರೆಗೂ ಸಾಗಿಸಬಹುದು ಎನ್ನುತ್ತವೆ ಹಲವು ಸಂಶೋಧನೆಗಳು. ಯೋಗಾಸನದ ಹಲವು ಭಂಗಿಗಳ ಅಭ್ಯಾಸವು ತೀವ್ರ ಪರಾಕಾಷ್ಠೆಗೆ ತಲಪಲು ನೆರವಾಗುತ್ತವೆಯಂತೆ. ರಕ್ತದ  ಒತ್ತಡ, ಎದೆ ಬಡಿತ, ರಕ್ತದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಸಹಕರಿಸುವ ಯೋಗವನ್ನು ದಿನಕ್ಕೊಂದು ತಾಸಿನ ಪ್ರಕಾರ ಹನ್ನೆರಡು ವಾರಗಳ ಕಾಲ 22 ರಿಂದ 55 ವಯಸ್ಸಿನೊಳಗಿನ ವಿವಾಹಿತ ಮಹಿಳೆಯರು ಕೈಗೊಂಡ ಫಲವಾಗಿ ಶೇ. 15 ಮಹಿಳೆಯರ ಲೈಂಗಿಕ ಜೀವನದಲ್ಲಿ ಅಭೂತಪೂರ್ವ ಬದಲಾವಣೆಗಳಾದವಂತೆ.

ಅದರಲ್ಲಿಯೂ ಹದ್ದಿನ ಭಂಗಿಯಲ್ಲಿ ನಿಂತು ಮಾಡುವ ಯೋಗಾಸನ ಮಹಿಳೆಯರಿಗೆ ಹೆಚ್ಚು ಸುಖವನ್ನು ತಂದಿತೆಂದು ಡಾ. ಬ್ರೂಕರ್ ಶೈನ್ ಹೇಳುತ್ತಾರೆ. ನೆಲದ ಮೇಲೆ ಕಾಲುಗಳನ್ನು ಒತ್ತಿ ತೊಡೆಯ ಸ್ನಾಯುಗಳನ್ನು ಬಲಪಡಿಸುವ ಆಸನ, ಕಾಲುಗಳನ್ನು ಮೇಲೆತ್ತಿ ತಲೆಯನ್ನು ನೆಲಕ್ಕೆ ಚಾಚುವ ಆಸನ, ಬೆನ್ನು ಮೇಲಾಗಿ ಮಲಗಿ ಕಾಲುಗಳನ್ನು ಮಡಚಿ ಕೈಗಳನ್ನು ಮುಂದಕ್ಕೆ ಚಾಚುವ ಭಂಗಿಗಳು ಹೆಚ್ಚು ಫಲಪ್ರದವೆಂದು ಅವರೆನ್ನುತ್ತಾರೆ. ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ಯೋಗ ಶಿಕ್ಷಕ ಕೇಟ್ ಹಾನ್ಲೆ ಪ್ರಕಾರ ಎಂಟು ವಾರ ಸರಳ ಯೋಗ ಮಾಡಿದ್ರೆ ನಿದ್ರೆ ಹೆಚ್ಚು, ಸುಖೀ ನಿದ್ರೆಯಿಂದ ಲೈಂಗಿಕ ಸಾಮರ್ಥ್ಯ ದಿಗುಣಿತವಾಗುತ್ತದೆ. ಉಪವಿಷ್ಠ ಕೋನಾಸನವನ್ನು ಮಹಿಳೆಯರು ಅಭ್ಯಸಿಸುವುದರಿಂದ ಗರ್ಭಾಶಯವು ಬಲಗೊಳ್ಳುತ್ತದೆ. ಮೂತ್ರ ಮತ್ತು ಗರ್ಭಾಶಯದ ಕಾಯಿಲೆಗಳು ಬರುವುದಿಲ್ಲ, ಇದು ಹೆಚ್ಚು ಉನ್ಮಾದದ ಮಿಲನಕ್ಕೂ ಸಹಾಯಕ. ಪುರುಷರು ಅಂತಿಮ ಹಂತದಲ್ಲಿಯೂ ಸ್ಖಲನವನ್ನು ತಡೆ ಹಿಡಿಯುವುದರ ಮೂಲಕ ಹೇಗೆ ಸಂಗಾತಿಯನ್ನು ಖುಷಿಪಡಿಸಬಹುದೆಂಬುದನ್ನು ಯೋಗದ ಮೂಲಕ ಕೆಲವರು ಕಲಿಸಿಕೊಡುತ್ತಾರೆ. 

ಯಾವೆಲ್ಲ ಆಸನಗಳು?


ಡಾ. ಬ್ಲೈರ್ ಮಹಿಳೆಯರ ದಾಂಪತ್ಯ ಜೀವನ ವೃದ್ಧಿಗಾಗಿ 12 ವಾರಗಳ ಯೋಗ ತರಗತಿಗಳನ್ನು ನಡೆಸುತ್ತಾರೆ. ಅಲ್ಲಿ ಸುಖೀ ಲೈಂಗಿಕ ಜೀವನಕ್ಕೆ ಸಾಧಕವಾಗುವ ಆಸನಗಳನ್ನು ಹೇಳಿಕೊಡುತ್ತಾರೆ.

ತ್ರಿಕೋನಾಸನ, ಭುಜಂಗಾಸನ, ಬದ್ಧಕೋನಾಸನ ಮತ್ತು ಅರ್ಧ ಮತ್ಸ್ಯೇಂದ್ರ ಭಂಗಿಗಳು ಈ ದೃಷ್ಟಿಯಿಂದ ಫಲಪ್ರದ. ಮೂಲಬಂಧಾಸನದಿಂದ  ಪುರುಷರಿಗೆ ಜನನಾಂಗ ಪ್ರದೇಶದಲ್ಲಿ ರಕ್ತದ ಹರಿವು ಅಧಿಕವಾಗಿ ಕಾಮಾಸಕ್ತಿಗೆ ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ. ಒಟ್ಟು 22 ಭಂಗಿಗಳು ಲೈಂಗಿಕ ಬದುಕಿನ ಸುಖಕ್ಕೆ ಸಾಧಕವೆಂಬ ಅಭಿಮತ ಅವರದು.

ಸೆಕ್ಸ್‌ನಿಂದ ರೋಗ ದೂರ

ಪೆನ್ಸಿಲ್ವೇನಿಯಾದ ವಿಲ್ಕೆಸ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ವಾರದಲ್ಲಿ ಎರಡು ಸಲ ಅಥವಾ ಅದಕ್ಕಿಂತ ಹೆಚ್ಚು ಸಲ ಮಿಲನ ಹೊಂದುವವರಲ್ಲಿ ಮಾರಣಾಂತಿಕ ಹೃದಯಾಘಾತದ ಭಯ ಕಡಮೆ. ಪ್ರತಿ ರಕ್ಷಣಾ ವ್ಯವಸ್ಥೆ ದೇಹದಲ್ಲಿ ಎಷ್ಟು ಜಾಗೃತವಾಗಿರುತ್ತದೆಂದರೆ ಫ್ಲೂವಿನಂತಹ ರೋಗಗಳೂ ಬಳಿಗೆ ಬರುವುದು ವಿರಳ. ನಿದ್ರೆ ಅಧಿಕ. ಯೋಗದಿಂದ ಅಧಿಕ ಸಲ ಮಿಲನ ಹೊಂದಬಹುದು. ಮೂಳೆ ಮತ್ತು ಸ್ನಾಯುಗಳಿಗೆ ಬಲ ಹೆಚ್ಚಾಗಿ ಟೆಸ್ಟೊಸ್ಟೆರಾನ್ ಹಾರ್ಮೋನಿನ ಸ್ರಾವವೂ ಅಧಿಕಗೊಂಡು ಸುಖೀ ದಾಂಪತ್ಯ ನಡೆಸಬಹುದು.
 

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk