Published : Oct 31 2016, 06:24 PM IST| Updated : Apr 11 2018, 12:41 PM IST
Share this Article
FB
TW
Linkdin
Whatsapp
headache
ಕೆಲವೊಮ್ಮೆ ನಿದ್ರೆಯೇ ಬರುವುದಿಲ್ಲ. ಕೆಎಎಸ್‌ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ದೈಹಿಕವಾಗಿ ತುಂಬಾ ದುರ್ಬಲವಾಗಿದ್ದೇನೆ.
1) ನನ್ನ ವಯಸ್ಸು 23. ತೂಕ 44 ಕಿಲೋ. 15ನೇ ವಯಸ್ಸಿನಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ಕಳೆದೊಂದು ವರ್ಷದಿಂದ ಇದನ್ನು ನಿಲ್ಲಿಸಿದ್ದೇನೆ. ಆದರೆ, ಸ್ವಪ್ನಸ್ಖಲನ ಜಾಸ್ತಿ ಆಗಿದೆ. ಕೆಲವೊಮ್ಮೆ ನಿದ್ರೆಯೇ ಬರುವುದಿಲ್ಲ. ಕೆಎಎಸ್ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ದೈಹಿಕವಾಗಿ ತುಂಬಾ ದುರ್ಬಲವಾಗಿದ್ದೇನೆ. ಯಾವ ಸಂಗತಿಯಲ್ಲೂ ಆಸಕ್ತಿಯಿಲ್ಲ ಎಂಬಂತಾಗಿದೆ. ನನ್ನ ಸಮಸ್ಯೆಗಳಿಗೆ ಪರಿಹಾರ ತಿಳಿಸಿ. - ಹನುಮಂತ ಎಚ್ಎಂ, ಊರುಬೇಡ
ಉತ್ತರ : ಸ್ವಪ್ನಸ್ಖಲನದಿಂದ ಯಾವ ತೊಂದರೆಯೂ ಆಗದು. ಉತ್ಪತ್ತಿಯಾಗುವ ವೀರ್ಯ, ಸಂಭೋಗ, ಹಸ್ತಮೈಥುನ ಇಲ್ಲವೇ ಸ್ವಪ್ನಸ್ಖಲನ, ಈ ಯಾವುದಾದರೊಂದು ರೀತಿಯಿಂದ ಹೊರಹೋಗಲೇಬೇಕು. 25ರಿಂದ 40 ವರ್ಷದವರಲ್ಲಿ ಇವು ಹೆಚ್ಚಾಗಿ ಆಗುತ್ತಿರುತ್ತದೆ. ಈ ವಯಸ್ಸಿನಲ್ಲಿ ಲೈಂಗಿಕ ಹಾರ್ಮೋನುಗಳ ಪ್ರಭಾವ ಹೆಚ್ಚಾಗಿದ್ದು, ಲೈಂಗಿಕ ಬಯಕೆಗಳೂ ಅಧಿಕ. ನೀವು ಹಸ್ತಮೈಥುನವನ್ನು ಬಿಟ್ಟಿದ್ದರೂ ಲೈಂಗಿಕ ಬಯಕೆಗಳು ತೀರದೇ ಒತ್ತಡ ಹೆಚ್ಚಿಸಿ, ಸ್ವಪ್ನಸ್ಖಲನ ಆಗುತ್ತದೆ. ಅಲ್ಲದೆ, ಸ್ವಪ್ನಸ್ಖಲನದ ಬಗ್ಗೆ ಅತಿಯಾಗಿ ಚಿಂತಿಸುತ್ತಾ ಲೈಂಗಿಕ ಬಯಕೆಗಳನ್ನು ತಡೆಯಲೆತ್ನಿಸಿದರೂ ಅದು ಹೆಚ್ಚುತ್ತದೆ. ಹಾಗಾಗಿ ಲೈಂಗಿಕ ಬಯಕೆಗಳನ್ನು ಬಲವಂತವಾಗಿ ತಡೆಯದೇ ಅವನ್ನು ಒಳ್ಳೆಯ ಹವ್ಯಾಸಗಳತ್ತ ವರ್ಗಾಯಿಸಬೇಕು. ಪ್ರೇಮ, ಪ್ರೀತಿಯ ಬಗೆಗಿನ ಕಲ್ಪನೆಗಳೂ ತಪ್ಪಲ್ಲ. ಇವುಗಳಿಗೆ ಸಂಬಂಧಿಸಿದ ಕಥೆ, ಕಾದಂಬರಿ, ಚಿತ್ರ, ಕಲೆ ಇತ್ಯಾದಿಗಳ ಆಸ್ವಾದನೆಯೂ ಒಳ್ಳೆಯದೇ. ಲೈಂಗಿಕತೆಯ ಬಯಕೆಯನ್ನು ಹೀಗೆ ಸಕಾರಾತ್ಮಕವಾಗಿ ಸ್ವೀಕರಿಸಿದರೆ ಎಲ್ಲ ವಿಷಯಗಳಲ್ಲೂ ಆಸಕ್ತಿಯಿರುತ್ತದೆ. ಸ್ವಪ್ನಸ್ಖಲನವೂ ಕಡಿಮೆಯಾಗುತ್ತದೆ. ಇಷ್ಟಕ್ಕೂ ಸ್ವಪ್ನಸ್ಖಲನದಿಂದ ನಿಶ್ಶಕ್ತಿ ಮೊದಲಾದ ತೊಂದರೆಗಳೂ ಆಗದು. ಹಾಗಾಗಿ ಸ್ವಪ್ನಸ್ಖಲನವಾದರೂ ಚಿಂತಿಸದೇ ಪರೀಕ್ಷೆಗೆ ತಯಾರಾಗಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.