ಹಣೆ ಮೇಲೆ ತಿಲಕ: ವೈಜ್ಞಾನಿಕ ಕಾರಣ ಏನು?
ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಕುಂಕುಮವನ್ನು ಇಡುವುದರಿಂದ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಏನಿದು ಈ ನಂಬಿಕೆ?
ಪುರುಷರಾಗಲಿ, ಮಹಿಳೆಯರಾಗಲಿ ಹಿಂದೂ ಧರ್ಮದಲ್ಲಿ ಹಣೆಗೆ ಕುಂಕುಮ ಇಡುವುದು ಕಾಮನ್. ಅದರಲ್ಲಿಯೂ ವಿಶೇಷ ಕಾರ್ಯಕ್ರಮಗಳು ಅರಿಷಿಣ-ಕುಂಕುಮ ಇಲ್ಲದೇ ಸಂಪನ್ನವಾಗುವುದೇ ಇಲ್ಲ. ಏನಿದರ ಮಹತ್ವ?
- ತಿಲಕವನ್ನು ಯಾವಾಗಲೂ ಹಣೆಯ ಕೇಂದ್ರ ಭಾಗದಲ್ಲಿ ಹಚ್ಚಲಾಗುತ್ತದೆ. ನಮ್ಮ ಶರೀರದಲ್ಲಿ ಏಳು ಸಣ್ಣ ಶಕ್ತಿ ಕೇಂದ್ರಗಳಿವೆ. ತಿಲಕವನ್ನು ಮಸ್ತಿಷ್ಕದ ಮಧ್ಯದಲ್ಲಿ ಆಜ್ಞಾ ಚಕ್ರವಿದ್ದು, ಇದನ್ನು ಗುರು ಚಕ್ರ ಎಂದೂ ಕರೆಯಲಾಗುತ್ತದೆ. ಇದು ಮಾನವ ಶರೀರದ ಕೇಂದ್ರ ಭಾಗವಾಗಿದ್ದು, ಇದರಿಂದ ಏಕಾಗ್ರತೆ ಮತ್ತು ಜ್ಞಾನ ಹೆಚ್ಚುತ್ತದೆ.
- ಯಾವಾಗಲೂ ಉಂಗುರ ಬೆರಳಿನಿಂದ ತಿಲಕವನ್ನು ಹಚ್ಚಲಾಗುತ್ತದೆ. ಉಂಗುರ ಬೆರಳು ಸೂರ್ಯನ ಪ್ರತೀಕ. ಈ ಬೆರಳಿನಿಂದ ತಿಲಕ ಹಚ್ಚಿದರೆ, ಯಶಸ್ಸು ಸಿಗುತ್ತದೆ. ಇದಲ್ಲದೇ ಗೌರವದ ಪ್ರತೀಕವಾಗಿ ಹೆಬ್ಬೆಟ್ಟಿನಿಂದ ತಿಲಕವನ್ನು ಇಡಲಾಗುತ್ತದೆ. ವಿಜಯದ ಪ್ರತೀಕವಾಗಿ ತೋರು ಬೆರಳಿನಿಂದ ತಿಲಕವಿಡಲಾಗುತ್ತದೆ.
- ಯಾವುದೇ ಬಣ್ಣದ ತಿಲಕ ಹಚ್ಚಿದರೂ ಅದರಿಂದ ಶಕ್ತಿ ಹೆಚ್ಚುತ್ತದೆ. ಆದರೆ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಬಿಳಿ ಅಥವಾ ಗಂಧದ ತಿಲಕ ಸೌಮ್ಯತೆಯ ಸಂಕೇತವಾದರೆ, ಕೆಂಪು ಶಕ್ತಿಯ ಸಂಕೇತ. ಅದೇ ರೀತಿ ಹಳದಿ ಬಣ್ಣದ ತಿಲಕ ಸಂತೋಷದ ಸಂಕೇತ.