Canada Pet Dog School : ಮನುಷ್ಯರಿಗೆ ಆಸ್ಪತ್ರೆ, ಪಾರ್ಕ್ ಇದ್ದಂತೆ ಸಾಕು ಪ್ರಾಣಿಗಳಿಗೂ ಆಸ್ಪತ್ರೆ, ಪಾರ್ಕ್ ಇರೋದು ನಮಗೆಲ್ಲ ಗೊತ್ತು. ಆದ್ರೆ ಮಕ್ಕಳಿಗಿರುವಂತೆ ನಾಯಿಗಳಿಗೆ ಸ್ಕೂಲ್ ಇದೆ. ಅಲ್ಲಿಗೆ ಹೋಗೋ ನಾಯಿಗಳು ಏನು ಮಾಡುತ್ವೆ? ಯಾಕೆ ಸ್ಕೂಲ್ ಓಪನ್ ಆಗಿದೆ ಗೊತ್ತಾ?
ಕುಟುಂಬಸ್ಥರೆಲ್ಲ ಕೆಲ್ಸಕ್ಕೆ ಹೋಗೋರಾದ್ರೆ ನಾಯಿ (dog), ಬೆಕ್ಕು ಸಾಕೋದು ದೊಡ್ಡ ತಲೆನೋವು. ಸಾಕುಪ್ರಾಣಿ ಮೇಲೆ ಪ್ರೀತಿ ಇರುತ್ತೆ, ಆದ್ರೆ ಅವುಗಳನ್ನು ಆಫೀಸ್ ಗೆ ಹೋದಾಗ ನೋಡಿಕೊಳ್ಳೋರು ಯಾರು ಎನ್ನುವ ಪ್ರಶ್ನೆ ಕಾಡುತ್ತದೆ. ಅನೇಕರು ನಾಯಿಯನ್ನು ಮನೆಯೊಳಗೆ ಕೂಡಿಹಾಕಿ, ಆಫೀಸ್ ಗೆ ಹೋಗ್ತಾರೆ. ಇಡೀ ದಿನ ಮನೆಯಲ್ಲಿ ಯಾರೂ ಇಲ್ದೆ, ಒಂದೇ ಜಾಗದಲ್ಲಿ ಇರೋ ನಾಯಿಗಳಿಗೆ ಬೇಸರ ಬರೋದು ಗ್ಯಾರಂಟಿ. ನಾಯಿ ಮಾಲೀಕರಿಗೆ ಬೇರೆ ದಾರಿ ಇಲ್ಲ. ಕೆನಡಾದ ನಾಯಿ ಪ್ರೇಮಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಮನೆಯಲ್ಲಿ ಸಾಕಿದ ನಾಯಿಗಳನ್ನು ಮಕ್ಕಳಂತೆ ಶಾಲೆಗೆ ಕಳಿಸ್ತಿದ್ದಾರೆ.
ಶಾಲೆ (school) ಗೆ ಹೋಗುತ್ವೆ ನಾಯಿಗಳು :
ಈಗಿನ ದಿನಗಳಲ್ಲಿ ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ನಾಯಿ ಚಿಕಿತ್ಸೆ, ಆರೈಕೆ, ಆಹಾರ ಅಂತ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಈಗ ನಾಯಿಯನ್ನು ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ. ಮನೆಯಲ್ಲಿ ನಾಯಿ ಒಂಟಿಯಾಗಿ ಕಾಲ ಕಳೆಯಬಾರದು ಎನ್ನುವ ಕಾರಣಕ್ಕೆ ನಾಯಿಗಳನ್ನು ಶಾಲೆಗೆ ಕಳುಹಿಸ್ತಾರೆ.
ಕೆನಡಾದಲ್ಲಿ ನಾಯಿ ಶಾಲೆಗಳ ಸಂಖ್ಯೆ ಹೆಚ್ಚಾಗ್ತಿದೆ. ಡೇ ಶಾಲೆಗಳಿಗೆ ಬರುವ ನಾಯಿಗಳ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ನಾಯಿಮರಿಗಳಿಗೆ ಗಂಟೆಗಟ್ಟಲೆ ಮನೆಯಲ್ಲಿ ಕಾಯುವ ಬದಲು ಕಲಿಯಲು, ಆಟವಾಡಲು, ಬೆರೆಯಲು ಮತ್ತು ಕೆಲವು ಬಾರಿ ನಿದ್ದೆ ಮಾಡಲು ಇಲ್ಲಿ ಅವಕಾಶವಿದೆ.
ಹುಡುಗಿಯರ ಈ 3 ಅಭ್ಯಾಸ ಹುಡುಗರಿಗೆ ಇಷ್ಟವಾಗಲ್ವಂತೆ, ನೀವೂ ಆ ತಪ್ಪನ್ನ ಮಾಡ್ಬೇಡಿ
ಅತಿ ಬೇಗ ಕೋಪಗೊಳ್ಳುವ ಅಥವಾ ಆಕ್ರಮಣಕಾರಿ, ಹೆಚ್ಚು ಶಕ್ತಿ ಪ್ರದರ್ಶಿಸುವ ನಾಯಿಗಳನ್ನು ಇಲ್ಲಿ ಬದಲಾಯಿಸಲಾಗುತ್ತೆ. ಶಾಲೆಗೆ ಬರುವ ನಾಯಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ನಡವಳಿಕೆ ಸುಧಾರಿಸುತ್ತದೆ. ಅನೇಕ ನಾಯಿಗಳು ಒಂದೇ ಕಡೆ ಇರೋದ್ರಿಂದ ಅವುಗಳಿಗೆ ಒಂಟಿತನ ಕಾಡೋದಿಲ್ಲ. ನಾಯಿಮರಿಗಳು ಶಾಲೆಗೆ ಹೋಗ್ತಿದ್ದಂತೆ ಅವುಗಳ ಸ್ವಭಾವ ಬದಲಾಗಿದೆ. ಮನೆಯಲ್ಲಿ ಒಂಟಿಯಾಗಿ, ಸದಾ ಬೇಸರದಲ್ಲಿರುತ್ತಿದ್ದ ನಾಯಿಗಳು ಈಗ ಸಂತೋಷವಾಗಿರುತ್ವೆ ಎಂದು ನಾಯಿ ಮಾಲೀಕರು ಹೇಳ್ತಿದ್ದಾರೆ.
ಕೆನಡಾದಲ್ಲಿರುವ ನಾಯಿಗಳಿಗೆ ವಿಶೇಷ ವ್ಯವಸ್ಥೆ ಇದೆ. ಮಾಲೀಕರು, ನಾಯಿಗಳನ್ನು ಶಾಲೆಗೆ ಬಿಡೋ ಸಮಸ್ಯೆ ಇಲ್ಲ. ಮನೆ ಮನೆಗೆ ನಾಯಿ ಬಸ್ ಬರುತ್ತೆ. ಮನೆ ಮುಂದೆ ಬಸ್ ಗೆ ಕಾಯುವ ನಾಯಿಗಳು, ಬಸ್ ಬರ್ತಿದ್ದಂತೆ ಓಡಿ ಬಂದು ಬಸ್ ಹತ್ತಿ, ತಮ್ಮ ಸೀಟಿನಲ್ಲಿ ಕುಳಿತುಕೊಳ್ಳುತ್ವೆ.
ನಾಯಿಗಳು ಸಮುದಾಯ, ಆರೈಕೆ ಮತ್ತು ಸಂತೋಷಕ್ಕೆ ಅರ್ಹವಾಗಿವೆ. ಜನರ ಜೊತೆ ಬೆರೆಯುತ್ತಿದ್ದರೆ ಅವರು ಸಂತೋಷವಾಗಿರುತ್ವೆ. ಬಾಗಿಲನ್ನು ದಿಟ್ಟಿಸಿ ನೋಡುತ್ತಾ, ಸುಮ್ಮನಿರುವ ನಾಯಿಗಳು ಹೆಚ್ಚು ದಿನ ಬದುಕೋದಿಲ್ಲ ಎನ್ನುವ ನಂಬಿಕೆ ಒಂದಿದೆ. ಅದನ್ನು ಹೋಗಲಾಡಿಸಿ, ನಾಯಿಗಳನ್ನು ಸದಾ ಖುಷಿಯಾಗಿಡೋದು ಇದ್ರ ಉದ್ದೇಶವಾಗಿದೆ.
ಆಸ್ತಿಗಾಗಿ ಹೇಮಾ ಮಾಲಿನಿ ಧಮೇಂದ್ರರನ್ನ ಮದ್ವೆ ಆಗಿದ್ದಾ? ಈ ಭಾರೀ ಸೀಕ್ರೆಟ್ ಬಟಾಬಯಲು ಮಾಡಿದ್ಯಾರು?
ಇತ್ತೀಚಿನ ದಿನಗಳಲ್ಲಿ ನಾಯಿ ಸ್ಕೂಲ್ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಅನೇಕ ವರ್ಷಗಳಿಂದಲೂ ಇಂಥ ಶಾಲೆಗಳು ಚಾಲ್ತಿಯಲ್ಲಿವೆ. ಸೋಶಿಯಲ್ ಮೀಡಿಯಾದಲ್ಲಿ ನಾಯಿ ಟ್ರೈನಿಂಗ್ ಸ್ಕೂಲ್ ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೋಲಂಬಿಯಾದಲ್ಲಿ ಅನೇಕ ವರ್ಷಗಳಿಂದ ನಾಯಿ ಸ್ಕೂಲ್ ನಡೆಯುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಂಥ ಸ್ಕೂಲ್ ಬಗ್ಗೆ ನಾವು ಕೇಳಿಲ್ಲ, ಇದ್ರ ಬೆಲೆ ದುಬಾರಿಯಾಗಿರುತ್ತೆ ಹಾಗಾಗಿ ಸಾಮಾನ್ಯರಿಗೆ ಇದ್ರ ಬಗ್ಗೆ ಹೆಚ್ಚು ಜ್ಞಾನ ಇಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಭಾರತದಲ್ಲೂ ಇಂಥ ಸ್ಕೂಲ್ ಶುರು ಮಾಡಿ ಎನ್ನುವ ಬೇಡಿಕೆಯನ್ನಿಟ್ಟಿದ್ದಾರೆ.


