ಬಹು ದಿನಗಳಿಂದ ಕಾಯುತ್ತಿದ್ದ ಆ ರಾತ್ರಿ, ಸುಮ್ಮನೆ ಕಳೆದು ಹೋದರೆ ಹೇಗೆ? ಆ ರಾತ್ರಿ ಮಧುರವಾಗಿರಬೇಕು ಅಂದ್ರೆ ಕೆಲವೊಂದು ಆಹಾರ ಪದಾರ್ಥಗಳನ್ನು ಅವೈಯ್ಡ್ ಮಾಡಲೇ ಬೇಕು. ಅದರಲ್ಲಿಯೂ ಕೆಲವು ಪಾನೀಯಗಳನ್ನು ಬಿಡಲೇ ಬೇಕು.

ಸೋಡಾ: ಸೆಕ್ಸ್ ವೇಳೆ ಸೋಡಾ ಕುಡಿಯೋ ಯೋಚನೆ ಮಾಡಬೇಡಿ. ಸೋಡಾದಲ್ಲಿರೋ ಆಸ್ಪರ್ಟಮೆ ಎನ್ನುವ ಕೃತಕ ಸಿಹಿ ವಸ್ತು ಸೆಕ್ಸ್ ಹಾರ್ಮೋನ್‌ಗಳನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ ತಲೆನೋವೂ ತರಿಸುತ್ತದೆ. ಇದರಿಂದ ಆ ರಾತ್ರಿ ಹಾಳಾಗೋದು ಖಂಡಿತಾ. 

ನೆಮ್ಮದಿಯ ನಿದ್ರೆಗೆ ಇಲ್ಲಿವೆ ಬೆಸ್ಟ್ 12 ಸೂತ್ರಗಳು

ಆಲ್ಕೋಹಾಲ್: ಡ್ರಿಂಕ್ಸ್ ಮಾಡುವುದರಿಂದಲ ಲೈಂಗಿಕ ಅನುಭವ ಚೆನ್ನಾಗಿರುತ್ತದೆ ಎಂದು ಬಹುತೇಕರು ಸಿನಿಮಾಗಳನ್ನು ನೋಡಿ ತಪ್ಪು ತಿಳಿದುಕೊಂಡಿದ್ದಾರೆ. ಆದರಿದು ತಪ್ಪು. ಲೈಂಗಿಕ ತೃಪ್ತಿಗೆ ಮಾತ್ರವಲ್ಲ, ಆಲ್ಕೋಹಾಲ್‌ನಂತ ಪಾನೀಯಗಳಿಂದ ಯಾವುದೇ ನೈಜ ಸುಖವೂ ಸಿಗುವುದಿಲ್ಲ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. 

ಗಂಡಿನ ವೀರ್ಯವೇ ಹೆಣ್ಣಿಗೆ ಅಲರ್ಜಿ ತರಬಹುದು!

ಕಾಫಿ: ಸ್ವಲ್ಪ ಸ್ವಲ್ಪ ಕಾಫಿ ಸೇವನೆ ಓಕೆ. ಆದರೆ, ಅದೇ ಚಟವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಕಾಫಿ ಬದಲು ಲೈಟ್ ಟೀ ಕುಡಿದರೆ ಓಕೆ.  
ಬಿಯರ್: ಬಿಯರ್ ಕುಡಿದರೆ ಮನಸು ಸ್ಥೀಮಿತ ಕಳೆದುಕೊಳ್ಳುತ್ತದೆ. ಅಲ್ಲದೆ ಲಿಬಿಡೊ ಮೇಲೆ ಪರಿಣಾಮ ಬೀರುತ್ತದೆ. ಹಾರ್ಮೋನ್ ಮೇಲೆ ಪರಿಣಾಮ ಉಂಟಾದರೆ ಸೆಕ್ಸ್ ಲೈಫ್ ಎಂಜಾಯ್ ಮಾಡುವುದು ಕಷ್ಟ.