ನೆಮ್ಮದಿಯ ನಿದ್ರೆಗೆ ಇಲ್ಲಿವೆ ಬೆಸ್ಟ್ 12 ಸೂತ್ರಗಳು
ಈಗೀಗ ಮಕ್ಕಳು, ದೊಡ್ಡವರಾದಿಯಾಗಿ ಎಲ್ಲರಿಗೂ ನಿದ್ರೆಯದ್ದೇ ಸಮಸ್ಯೆ. ಹಲವರು ನಿದ್ರೆ ಮಾತ್ರೆಗೆ ಅಡಿಕ್ಟ್ ಸಹ ಆಗುತ್ತಾರೆ. ಆದರೆ, ಕೆಲವು ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಾಗಿ ನಿದ್ರಿಸಬಹುದು. ಹೇಗೆ?
ಕೆಲವರಿಗೆ ಹಾಸಿಗೆ ಮೇಲೆ ತಲೆಯಿಟ್ಟರೆ ಸಾಕು, ಕೂಡಲೇ ನಿದ್ದೆ ಬರುತ್ತದೆ. ಇನ್ನು ಕೆಲವರಿಗೆ ಎಷ್ಟು ಸಲ ಮಗ್ಗುಲು ಬದಲಿಸಿದರೂ ನಿದ್ದೆ ಹತ್ತಿರವೂ ಸುಳಿಯೋಲ್ಲ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. ಆದರೆ, ಈ ಜೀವನ ಕ್ರಮವನ್ನು ಬದಲಾಯಿಸಿಕೊಂಡರೆ ಕುಂಭಕರ್ಣನಂತೆ ನಿದ್ದೆ ಬರೋದು ಖಂಡಿತಾ. ಅದಕ್ಕೇನು ಮಾಡಬೇಕು?
- ಪ್ರತಿದಿನ ಒಂದೇ ಸಮಯಕ್ಕೆ ಸರಿಯಾಗಿ ಮಲಗಿ, ಏಳುವದುನ್ನು ರೂಢಿಸಿಕೊಳ್ಳಿ.
- ರಜೆ ಇದ್ದಾಗ ಲೇಟ್ ಮಲಗಿ, ಲೇಟ್ ಏಳಬೇಡಿ.
- ಸಾತ್ವಿಕ ಆಹಾರವನ್ನು ನಿಯಮಿತ ಅಂತರದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಆಗ ನಿದ್ರೆಯೂ ಬರುತ್ತದೆ.
- ಮನಸಿಗೆ ಮುದ ನೀಡುವಂಥ ಹದವಾದ ಪರಿಮಳ ಸೂಸುವ ಸುಗಂಧ ದ್ರವ್ಯ ಅಥವಾ ಎಸೆನ್ಷಿಯಲ್ ಆಯಿಲ್ ಹಚ್ಚಿಕೊಳ್ಳಿ.
- ರಾತ್ರಿ ಟೀವಿ, ಮೊಬೈಲ್ ಫೋನ್, ಲ್ಯಾಪ್ ಟಾಪ್ ಮೊದಲಾದ ಇಲೆಕ್ಟ್ರಾನಿಕ್ ವಸ್ತುಗಳಿಂದ ದೂರವಿರಿ.
- ಬೆಳಗ್ಗಿನ ಸಮಯದಲ್ಲಿ ಸೂರ್ಯನಿಗೆ ಹೆಚ್ಚಾಗಿ ಮೈಯೊಡ್ಡಿ. ಇದರಿಂದ ಆಯಾಸವಾಗಿ ಬೇಗ ನಿದ್ರೆ ಬರುತ್ತದೆ.
- ರಾತ್ರಿ ಹೊತ್ತು ಆಫೀಸ್ ಕೆಲಸ ಮಾಡಬೇಡಿ. ಇದರಿಂದ ಟೆನ್ಷನ್ ಹೆಚ್ಚಾಗಿ ನಿದ್ದೆ ಬಾರದಿರಬಹುದು.
- ಸಂಜೆ ಯೋಗ, ವಾಕಿಂಗ್, ವ್ಯಾಯಾಮದಿಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
- ರಾತ್ರಿ ಊಟವಾದ ಮೇಲೆ ಸ್ವಲ್ಪ ವಾಕ್ ಮಾಡುವುದೂ ನಿದ್ರೆಗೆ ಬೆಸ್ಟ್ ಮದ್ದು.
- ಮಲಗುವ ಜಾಗ ಕತ್ತಲಿರಲಿ.
- ಕೆಫೆನ್ ಯುಕ್ತ ಆಹಾರ, ಪಾನೀಯ ಸೇವಿಸಬೇಡಿ. ರಾತ್ರಿ ಹೆಚ್ಚು ಊಟ ಮಾಡಬೇಡಿ, ಡ್ರಿಂಕ್ಸ್ ಅಂತೂ ಬೇಡವೇ ಬೇಡ, ಸಕ್ಕರೆ ಅಂಶವಿರುವಂತಹ ಆಹಾರದಿಂದ ದೂರವಿರಿ.
- ಮಲಗುವ ಬೆಡ್ ಹಾಗೂ ದಿಂಬು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಸ್ವಲ್ಪ ಅಡೆ ತಡೆ ಇದ್ದರೂ ನಿದ್ರೆಗೆ ಕುತ್ತು ಗ್ಯಾರಂಟಿ.
- ರಾತ್ರಿ ಮಲಗುವ ಮುನ್ನ ಬಿಸಿ ಬಿಸಿ ಹಾಲು ಕುಡಿಯುವುದೂ ಒಳ್ಳೆಯ ಅಭ್ಯಾಸ.
ಸೆಕ್ಸ್ ಆದ್ಮೇಲ್ ನಿದ್ರೆ:ಸತ್ಯ ಮಿಥ್ಯಗಳನೇನು?