Asianet Suvarna News Asianet Suvarna News

ಸುಂದರ ಉಗುರಿಗೆ ಇಷ್ಟುಮಾಡಿ ಸಾಕು

ಸುಂದರ ಉಗುರಿಗೆ ಇಷ್ಟುಮಾಡಿ ಸಾಕು

Safety measures for Nails

-ಪ. ನಾ. ಹಳ್ಳಿ ಹರೀಶ್‌ ಕುಮಾರ್‌

- ನೈಲ್‌ ಪಾಲಿಶ್‌ ತೆಗೆದ ಬಳಿಕ ತಪ್ಪದೇ ಕೈ ಮತ್ತು ಉಗುರಿಗೆ ಮಾಯಿಶ್ಚರೈಸರ್‌ ಕ್ರೀಮ್‌ ಲೇಪಿಸಿ ನಿಮ್ಮ ಕೈಗಳನ್ನು ನಿಧಾನವಾಗಿ ಸೋಪಿನಿಂದ ಉಜ್ಜಿ ತೊಳೆಯಿರಿ.
- ಹೆಚ್ಚು ಬಾರಿ ಪೆಡಿಕ್ಯೂರ್‌ ಮತ್ತು ಮ್ಯಾನಿಕ್ಯೂರ್‌ ಮಾಡಿಕೊಳ್ಳುತ್ತಿದ್ದರೆ ನಿಮ್ಮದೇ ಸ್ವಂತ ಪೆಡಿಕ್ಯೂರ್‌, ಮ್ಯಾನಿಕ್ಯೂರ್‌ ಸೆಟ್‌ ಮನೆಯಲ್ಲಿ ತಂದಿಟ್ಟುಕೊಳ್ಳುವುದು ವಾಸಿ.

- ನೀವು ಬಳಸುವ ಉಪಕರಣಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

- ತೇವ ಮತ್ತು ಕೊಳೆಯಿಂದಾಗಿ ಉಗುರುಗಳಡಿಯಲ್ಲಿ ಬ್ಯಾಕ್ಟೀ ರಿಯಾ, ಫಂಗಸ್‌ಗಳು ಬೆಳೆಯುತ್ತವೆ. ಇವು ನೋವುಸಹಿತ ಸೋಂಕಿಗೆ ಕಾರಣವಾಗುತ್ತವೆ.

- ಅಡುಗೆ ಮಾಡುವಾಗಲೂ ಉಗುರುಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
- ಉಗುರುಗಳನ್ನು ಟ್ರಿಮ್‌ ಮಾಡದಿದ್ದರೆ ಹೊರಕ್ಕೆ ತಳ್ಳಲ್ಪಟ್ಟ ಜೀವಕೋಶಗಳು ತುಂಡಾಗಿ ತೊಂದರೆ ನೀಡಬಹುದು.

- ಟ್ರಿಮ್‌ ಮಾಡುತ್ತಿದ್ದರೆ ಅದು ಆಕರ್ಷಕವಾಗಿಯೂ ಕಾಣುತ್ತದೆ. ಸೂಕ್ತವಾದ ಮಾಯಿಶ್ಚರೈಸಿಂಗ್‌ ಅನ್ನು ಕೈಗಳಿಗೆ ಹಾಗೂ ಉಗುರುಗಳಿಗೆ ಹಚ್ಚುತ್ತಿರಿ.

- ಉಗುರಿನ ಬೆಳವಣಿಗೆಗಾಗಿ ಕ್ಯಾಲ್ಸಿಯಂ ಜೊತೆಗೆ ವಿಟಮಿನ್‌ ಎ, ಸಿ, ಇ ಮತ್ತು ಬಿ12 ಫೋಲಿಕ್‌ ಆಮ್ಲ ಅಧಿಕವಿರುವ ಆಹಾರವನ್ನು ಸೇವಿಸಿರಿ.
- ಅತ್ಯಧಿಕ ತೇವಾಂಶ, ರಾಸಾಯನಿಕಗಳು ಹಾಗೂ ಮಾರ್ಜಕಗಳಿಗೆ ಉಗುರುಗಳನ್ನು ಒಡ್ಡದಿರಿ. ಅಗತ್ಯವಿದ್ದಾಗ ಕೈಗ್ಲೌಸ್‌ ಧರಿಸಿಕೊಳ್ಳಿ.
- ಹಣ್ಣಿನರಸ ಮತ್ತು ಸಾಕಷ್ಟುನೀರು ಉಗುರನ್ನು ಉತ್ತಮವಾಗಿ ಬೆಳೆಸುವಲ್ಲಿ ಸಹಕಾರಿ.
- ಧೂಮಪಾನವು ಉಗುರಿನ ಆರೋಗ್ಯಕ್ಕೂ ಹಾನಿಕರ ಎಂಬುದು ತಿಳಿದಿರಲಿ.

(ಕೃಪೆ: ಕನ್ನಡ ಪ್ರಭ)

Follow Us:
Download App:
  • android
  • ios