ಊಟಕ್ಕೆ ಹಪ್ಪಳ, ಉಪ್ಪಿನಕಾಯಿ ಇದ್ದರಿನ್ನೇನು ಬೇಕು ಹೇಳಿ? ಇವರೆಡರಿದ್ದರೆ ಮಜ್ಜಿಗೆ ಅನ್ನ ತಿಂದಲೂ ಮೃಷ್ಟಾನ್ನ ಭೋಜನ ಸವಿದಷ್ಟು ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲಿಯೂ ಹಲ್ಲಿಲ್ಲದವರೂ ತಿನ್ನುವಂಥ ಅಕ್ಕಿ ಹಪ್ಪಳವನ್ನು ಹಸಿದಾಗ ಕರಿದುಕೊಂಡು ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇಂಥ ಹಪ್ಪಳವನ್ನು ಮಾಡುವುದು ಹೇಗೆ?

ಬೇಕಾಗುವ ಸಮಾಗ್ರಿ :

  • 250 ಗ್ರಾಂ ಅಕ್ಕಿ
  • ಅರ್ಧ ಸ್ಪೂನ್ ಇಂಗು
  • 2 ನಿಂಬೆ ಹಣ್ಣಿನ ರಸ
  • ರುಚಿಗೆ ತಕ್ಕಷ್ಟು ಉಪ್ಪು
  • 4 ಚಮಚ ಎಣ್ಣೆ

ಮಾಡುವ ವಿಧಾನ :

  • ಒಂದು ಲೀಟರ್ ನೀರಿನಲ್ಲಿ ಅಕ್ಕಿಯನ್ನು 5 ನಿಮಿಷ ಕುದಿಸಿ. ನಂತರ ನೀರು, ಅಕ್ಕಿಯನ್ನು ಬೇರ್ಪಡಿಸಿ. ನೀರು ಆರುವ ತನಕ ಬಟ್ಟೆ ಮೇಲೆ ಹರಗಿಡಿ.
  • ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಈ ಅಕ್ಕಿಯನ್ನು ಹುರಿಯಬೇಕು. 
  • ಅಕ್ಕಿ ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಿ.
  • ಪುಡಿಗೆ ಇಂಗು, 1/4 ಚಮಚ ಎಣ್ಣೆ , ನಿಂಬೆರಸ ಮತ್ತು ಅಗತ್ಯದಷ್ಟು ನೀರು ಸೇರಿಸಿಕೊಳ್ಳಿ.
  • ಕೈಗೆ ಎಣ್ಣೆ ಹಚ್ಚಿಕೊಂಡು, ಚೆನ್ನಾಗಿ ಕಲಸಿಕೊಳ್ಳಿ.
  • ಚಪಾತಿ ಹಿಟ್ಟಿನಂತೆ ಕಲಸಿದ ಹಿಟ್ಟನ್ನು, ಉಂಡೆ ಮಾಡಿಕೊಂಡು, ಲಟ್ಟಿಸಿ.
  • ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಹಪ್ಪಳವನ್ನು ಏರ್ ಟೈಟ್ ಆಗಿರೋ ಡಬ್ಬಿಯಲ್ಲಿ ಹಾಕಿ ಮುಚ್ಚಿಟ್ಟರೆ ಯಾವಾಗ ಬೇಕಾದರೂ ಕರಿದುಕೊಂಡು ತಿನ್ನಬಹುದು. ಬಾಯಲ್ಲಿಟ್ಟರೆ ಕರಗುವಂಥ ಅಕ್ಕಿ ಹಪ್ಪಳವನ್ನು ಸವಿಯಬಹುದು.