ಯಾವುದೇ ಕೆಲಸವಿರಲಿ ನಾಳೆ ಮಾಡ್ತೇನೆ, ಹಬ್ಬ ಮುಗಿದ ಮೇಲೆ ಮಾಡ್ತೆನೆ ಅಂತಾ ದಿನ ಫಿಕ್ಸ್ ಮಾಡೋನು ಸೋಮಾರಿ. ನಮ್ಮ ಸಾಮರ್ಥ್ಯ ನಮಗೆ ತಿಳಿದಿರುತ್ತದೆ. ಹಾಗಿರುವಾಗ ಸಾಧ್ಯವಿಲ್ಲದ ನಿರ್ಣಯಗಳನ್ನು ಹೊಸ ವರ್ಷಕ್ಕೆ ತೆಗೆದುಕೊಳ್ಳೋದು ತಪ್ಪು.  

ಹೊಸ ವರ್ಷ ಹತ್ತಿರ ಬರ್ತಿದೆ. 2022ನ್ನು ಮುಗಿಸಿ 2023ಕ್ಕೆ ಕಾಲಿಡುವ ಸಮಯ ಹತ್ತಿರವಾಗ್ತಿದೆ. ಈಗಾಗಲೆ ಹೊಸ ವರ್ಷದಲ್ಲಿ ಏನು ಮಾಡ್ಬೇಕೆಂದು ಜನರು ಪ್ಲಾನ್ ಶುರು ಮಾಡಿದ್ದಾರೆ. ಹೊಸ ವರ್ಷ ಬರ್ತಿದ್ದಂತೆ ಅನೇಕರು ಕೆಲ ವಿಷ್ಯಗಳ ಪಟ್ಟಿ ಮಾಡ್ತಾರೆ. ಈ ವರ್ಷ ಆಗದ ಕೆಲಸವನ್ನು ಮುಂದಿನ ವರ್ಷ ಮಾಡ್ಬೇಕು ಎನ್ನುವುದ್ರಿಂದ ಹಿಡಿದು, ಹೊಸ ವರ್ಷದಲ್ಲಿ ದಿನಚರಿ ಹೇಗಿರಬೇಕು ಎನ್ನುವವರೆಗೆ ರೆಸಲ್ಯೂಷನ್ ಮಾಡ್ತಾರೆ. ಆದ್ರೆ ಉತ್ಸಾಹದಲ್ಲಿ ರೆಸಲ್ಯೂಷನ್ ಮಾಡಿರ್ತೇವೆ ನಿಜ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಆ ಎಲ್ಲವೂ ಠುಸ್ ಆಗುತ್ತೆ. ಕೆಲವೊಂದು ರೆಸಲ್ಯೂಷನ್ ನಮ್ಮಿಂದ ಸಾಧ್ಯವಾಗುವುದಿಲ್ಲ. ಆಗ ಬೇಸರಪಟ್ಟುಕೊಳ್ಳುವ ಬದಲು ಅಂಥ ರೆಸಲ್ಯೂಷನ್ ತೆಗೆದುಕೊಳ್ಳುವ ಮುನ್ನ ಅದು ನನ್ನಿಂದ ಸಾಧ್ಯವೆ ಎಂದು ನೀವು ಆಲೋಚನೆ ಮಾಡಬೇಕು. ಇಂದು ನಾವು ಯಾವ ನಿರ್ಣಯ ತೆಗೆದುಕೊಳ್ಳಬಾರದು ಎಂಬುದನ್ನು ನಿಮಗೆ ಹೇಳ್ತೇವೆ.

ಹೊಸ ವರ್ಷ (New Year) ದಲ್ಲಿ ಈ ರೆಸಲ್ಯೂಷನ್ (Resolution) ಬೇಡ :
ಮುಂಜಾನೆ (Morning) ಬೇಗ ಏಳ್ತೇನೆ :
ಹೊಸ ವರ್ಷದಿಂದ ನನ್ನ ರುಟೀನ್ ಚೇಂಜ್ ಆಗುತ್ತೆ. ನಾನು ಪ್ರತಿ ದಿನ ಬೇಗ ಏಳ್ತೆನೆ ಎಂದು ಕೆಲವರು ನಿರ್ಣಯಿಸ್ತಾರೆ. ಆದ್ರೆ ಹೊಸ ವರ್ಷದ ಮೊದಲೇ ದಿನವೇ ಅವರ ಈ ನಿರ್ಣಯ ಮಣ್ಣು ಪಾಲಾಗಿರುತ್ತದೆ. ನವ ವರ್ಷವನ್ನು ಸ್ವಾಗತಿಸಲು ತಡರಾತ್ರಿಯವರೆಗೆ ಪಾರ್ಟಿ ಮಾಡಿರುವ ಜನರಿಗೆ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ಈ ನಿರ್ಣಯ ತೆಗೆದುಕೊಳ್ಳದಿದ್ದರೆ ಒಳ್ಳೆಯದು. 

ಮದ್ಯಪಾನ (Alcohol) ಮಾಡೋದಿಲ್ಲ : ಮದ್ಯಪಾನ ಮಾಡದಿರುವುದು ಒಳ್ಳೆಯದು. ಮದ್ಯಪಾನ ಆರೋಗ್ಯ ಹಾಳು ಮಾಡುತ್ತದೆ. ಹಾಗಂತ ಪ್ರತಿ ದಿನ ಮದ್ಯಪಾನ ಮಾಡುವವರು ಏಕಾಏಕಿ ಮದ್ಯಪಾನ ಬಿಡ್ತೆನೆ ಅಂದ್ರೆ ಸಾಧ್ಯವಿಲ್ಲ. ಅದನ್ನು ನಿಧಾನವಾಗಿ ಕಡಿಮೆ ಮಾಡ್ತಾ ಬರಬೇಕಾಗುತ್ತದೆ. ಹೊಸ ವರ್ಷದಿಂದ ಮದ್ಯಪಾನ ಬಿಡ್ತೆನೆ ಎಂದು ನಿರ್ಣಯ ತೆಗೆದುಕೊಳ್ಳುವ ಬದಲು ಕಡಿಮೆ ಮಾಡ್ತೇನೆ ಎಂಬ ರೆಸಲ್ಯೂಷನ್ ಇಟ್ಕೊಳ್ಳಿ.

ಧೂಮಪಾನ (Smoking) ತ್ಯಜಿಸ್ತೇನೆ : ಇದು ಕೂಡ ಮದ್ಯಪಾನದಂತೆಯೆ. ಒಮ್ಮೆ ಅಂಟಿಕೊಂಡ ಚಟವನ್ನು ಬೇಗ ಬಿಡಲು ಸಾಧ್ಯವಿಲ್ಲ. ನಿಧಾನವಾಗಿ ನೀವು ಸಿಗರೇಟ್ ಸಂಖ್ಯೆಯನ್ನು ಕಡಿಮೆ ಮಾಡ್ತಾ ನಂತ್ರ ಶೂನ್ಯಕ್ಕೆ ಬರಬೇಕಾಗುತ್ತದೆ. ಒಂದೇ ಬಾರಿ ಈ ಚಟ ಬಿಡಲು ಸಾಧ್ಯವಾಗದೆ, ನಿಮ್ಮ ರೆಸಲ್ಯೂಷನ್ ಹಾಳಾದ್ರೆ ಬೇಸರಪಟ್ಟುಕೊಳ್ಳುವ ಬದಲು ಆಲೋಚಿಸಿ ನಿರ್ಣಯಕ್ಕೆ ಬರುವುದು ಒಳ್ಳೆಯದು.

Shiva Purana : ಶಿವನ ಐದು ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಗೊತ್ತಾ?

ಆರೋಗ್ಯಕರ ಆಹಾರ ಸೇವನೆ : ಯುವಕರ ಹೊಸ ವರ್ಷದ ರೆಸಲ್ಯೂಷನ್ ಇದೇ ಇರುತ್ತದೆ. ಹೊಸ ವರ್ಷದಿಂದ ಆರೋಗ್ಯಕ ಆಹಾರ ಸೇವನೆ ಮಾಡ್ತೇನೆ ಎಂದುಕೊಳ್ತಾರೆ. ಆದ್ರೆ ಅದನ್ನು ಮಾಡಲು ಸಾಧ್ಯವಾಗೋದಿಲ್ಲ. ಫಾಸ್ಟ್ ಫುಡ್ ನೋಡ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ರೆಸಲ್ಯೂಷನ್ ಕೆಲವೇ ದಿನಗಳಲ್ಲಿ ಮುರಿಯುತ್ತದೆ. ಬಾಯಿರುಚಿ ಹೆಚ್ಚಿದೆ, ಆಹಾರ ನೋಡಿದ ತಕ್ಷಣ ಮನಸ್ಸು ನಿಯಂತ್ರಣ ಕಳೆದುಕೊಳ್ಳುತ್ತೆ ಎನ್ನುವವರು ಅಪ್ಪಿತಪ್ಪಿಯೂ ಈ ರೆಸಲ್ಯೂಷನ್ ಇಟ್ಕೊಳ್ಳಬೇಡಿ. 

ಭಲೇ ನಾರಿ..ಸೀರೆ ಧರಿಸಿನೂ ಜಿಮ್‌ನಲ್ಲಿ ವರ್ಕೌಟ್ ಮಾಡ್ಬೋದು ನೋಡಿ

ಸಮಯಕ್ಕೆ ಸರಿಯಾಗಿ ಕೆಲಸ ಮಾಡ್ತೆನೆ : ಸರಿದು ಹೋಗುವ ಸಮಯವನ್ನು ಮತ್ತೆ ಹಿಡಿಯಲು ಸಾಧ್ಯವಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸ ಮಾಡೋದು ಬಹಳ ಮುಖ್ಯ. ನಾಳೆ ಮಾಡಬೇಕಾದ್ದನ್ನು ಇಂದೇ ಮಾಡಿದ್ರೆ ಒಳ್ಳೆಯದು ನಿಜ. ಆದ್ರೆ ಸೋಮಾರಿಗಳಿಗೆ ಇದು ಎಂದಿಗೂ ಸಾಧ್ಯವಿಲ್ಲ. ಸೋಮಾರಿಯಾದ ಅನೇಕರು, ಹೊಸ ವರ್ಷದಿಂದ ಸಮಯಕ್ಕೆ ಸರಿಯಾಗಿ ಕೆಲಸ ಮಾಡ್ತೇನೆ ಎಂಬ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಸಮಯ ಸರಿದಿದ್ದು ಅವರಿಗೆ ತಿಳಿಯೋದೇ ಇಲ್ಲ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದ್ರೆ ನಿರ್ಣಯ ಆರಂಭದಲ್ಲಿಯೇ ಮುರಿದು ಬಿದ್ದಿರುತ್ತದೆ.