ಇತ್ತೀಚೆಗೆ ರೆಡ್ಡಿಟ್‌ನಲ್ಲಿ ನೆಲಕ್ಕೆ ಬಿದ್ದ ಬರ್ಗರ್ ಅನ್ನು ವ್ಯಕ್ತಿಯೊಬ್ಬ ತಿಂದ ಬಗ್ಗೆ ಚರ್ಚೆ ನಡೆಯುತ್ತಿದೆ. ಬರ್ಗರ್ ಕೆಳಗೆ ಬಿದ್ದ ತಕ್ಷಣ ಆತ ಅದನ್ನು ಎತ್ತಿಕೊಂಡು ತಿಂದಿದ್ದಾನೆ. ಇದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಆತನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆ ಐದು ಸೆಕೆಂಡ್ ನಿಯಮದ ಬಗ್ಗೆ ನೆನಪಿಸುತ್ತದೆ. ಆದರೆ, ನೆಲಕ್ಕೆ ಬಿದ್ದ ಆಹಾರವನ್ನು ತಕ್ಷಣ ಎತ್ತಿಕೊಂಡರೂ ಅದು ಸುರಕ್ಷಿತವಲ್ಲ ಎಂದು ತಜ್ಞರು ಹೇಳುತ್ತಾರೆ.
ಚಾಕೋಲೇಟ್ (Chocolate) ರ್ಯಾಪರ್ ತೆಗೆದು ಇನ್ನೇನು ಬಾಯಿಗೆ ಹಾಕ್ಬೇಕು, ಚಾಕೋಲೇಟ್ ಕೆಳಗೆ ಬೀಳುತ್ತೆ. ಅತ್ತ – ಇತ್ತ ನೋಡುವ ಹುಡುಗ ಫಟ್ ಅಂತ ಚಾಕೋಲೇಟ್ ಎತ್ತಿಕೊಂಡು, ತನ್ನ ಡ್ರೆಸ್ ನಲ್ಲಿ ಒಮ್ಮೆ ಒರೆಸಿಕೊಂಡು ಬಾಯಿಗೆ ಹಾಕ್ತಾನೆ. ಅದನ್ನು ನೋಡಿದ ಅಮ್ಮ ಛೀಮಾರಿ ಹಾಕ್ತಾಳೆ. ಹಿಂದೆ ಬಹುತೇಕ ಮಕ್ಕಳು ಈ ಕೆಲ್ಸ ಮಾಡ್ತಿದ್ರು. ಈಗಿನ ಕಾಲದಲ್ಲಿ ಹೈಜಿನ್ ಎನ್ನುವ ಕಾರಣಕ್ಕೆ ಮಕ್ಕಳು ನೆಲಕ್ಕೆ ಬಿದ್ದ ವಸ್ತುವನ್ನು ಮುಟ್ಟೋದಿಲ್ಲ. ಎತ್ತಿಕೊಂಡ್ರೆ ಅಮ್ಮನಿಂದ ಒದೆ ಬೀಳೋದು ಗ್ಯಾರಂಟಿ, ಹೊಟ್ಟೆ ಹಾಳಾಗೋದು ನಿಶ್ಚಿತ ಅಂತ ಮಕ್ಕಳಿಗೆ ಗೊತ್ತು. ಈಗ ರೆಡ್ಡಿಟ್ ನಲ್ಲಿ ಇಂಥದ್ದೇ ಘಟನೆಯೊಂದು ಚರ್ಚೆಯಲ್ಲಿದೆ. ಕೆಳಗೆ ಬಿದ್ದ ಬರ್ಗರನ್ನು ವ್ಯಕ್ತಿ ಏನು ಮಾಡಿದ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಕೆಳಗೆ ಬಿದ್ದ ಬರ್ಗರ್ (Burger), ಮುಂದೆ ಆತ ಮಾಡಿದ್ದು ಏನು? : ರೆಡ್ಡಿಟ್ ನಲ್ಲಿ MotorKaleidoscope260 ಹೆಸರಿನ ಬಳಕೆದಾರರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಒಬ್ಬ ವ್ಯಕ್ತಿ ಬರ್ಗರ್ ಕೈ ಜಾರಿ ನೆಲಕ್ಕೆ ಬಿತ್ತು. ಮುಂದಿನ ಕ್ಷಣದಲ್ಲಿ ಅವನು ಮಾಡಿದ ಕೆಲಸ ನನ್ನ ಆಲೋಚನೆಯನ್ನು ಬದಲಾಯಿಸಿತು ಎಂದು ಆತ ಶೀರ್ಷಿಕೆ ಹಾಕಿದ್ದಾನೆ. ಮುಂದಿನ ಭಾಗದಲ್ಲಿ, ಆತ ಬರ್ಗರ್ ಏನು ಮಾಡಿದ ಎಂಬುದನ್ನು ವಿವರಿಸಿದ್ದಾರೆ. ರೆಡ್ಡಿಟ್ ಪೋಸ್ಟ್ ಪ್ರಕಾರ, ಬರ್ಗರ್ ಕೆಳಗೆ ಬೀಳಿಸಿಕೊಂಡ ವ್ಯಕ್ತಿ ಒಂದು ಕ್ಷಣ ಬರ್ಗರ್ನನ್ನೇ ದಿಟ್ಟಿಸಿ ನೋಡಿದ್ದಾನೆ. ಯಾವುದೇ ಆತಂಕ, ವಿಷಾದವಿಲ್ಲದೆ ಕೇವಲ ಆಲೋಚನೆಯಲ್ಲಿ ಮುಳುಗಿದ್ದಾನೆ. ನಂತ್ರ ಹಿಂಜರಿಕೆ ಇಲ್ಲದೆ ಬರ್ಗರ್ ಎತ್ತಿಕೊಂಡು, ಅದನ್ನು ಹುಟ್ಟುಹಬ್ಬದ ಕೇಕ್ನಂತೆ ಒಂದು ಬೈಟ್ ತಿಂದಿದ್ದಾನೆ.
ಜಿಮ್‌ನಲ್ಲಿ ನೀಡಿದ ಸಪ್ಲಿಮೆಂಟರಿ ಪ್ರೊಟೀನ್ ಸೇವಿಸಿದ ಯುವಕ ಸಾವು: ಕುಟುಂಬಸ್ಥರ ಆಕ್ರಂದನ
ಹತ್ತಿರ ನಿಂತಿದ್ದ ಮಹಿಳೆ ಆಶ್ಚರ್ಯದಿಂದ ಆತನನ್ನು ನೋಡಿದ್ದಾಳೆ. ಮಗು, ಈತನ ಕೆಲಸಕ್ಕೆ ಪ್ರೇರೇಪಿತವಾದಂತೆ ಕಾಣಿಸಿದೆ. ನೆಲಕ್ಕೆ ನಾಚಿಕೆಯಾದಂತೆ ಭಾಸವಾಯ್ತು. ಆದ್ರೆ ಆ ವ್ಯಕ್ತಿ ತಿನ್ನುತ್ತಲೇ ಇದ್ದ. ಸರಿಯಾಗಿ ಮಾಡಿದ್ದೇನೆ ಎಂಬಂತೆ ತಲೆಯಾಡಿಸುತ್ತಿದ್ದ. ನಂತರ ಆರಾಮವಾಗಿ ತಿನ್ನೋದನ್ನು ಮುಂದುವರೆಸಿದ್ದಾನೆ. ಇದು ಆತ್ಮವಿಶ್ವಾಸವೋ ಅಥವಾ ನಿರಾತಂಕವೋ ನನಗೆ ತಿಳಿದಿಲ್ಲ. ಆದ್ರೆ ನಾನು ಅವನನ್ನು ಗೌರವಿಸುತ್ತೇನೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ಗೆ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕೆಲವರು ಆತನ ಕೆಲಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆತನ ಮಾಡಿದ ಕೆಲಸ ಸರಿಯಾಗಿದೆ ಎಂದಿದ್ದಾರೆ. 100 ರೂಪಾಯಿ ಬರ್ಗರ್ ವ್ಯರ್ಥವಾಗೋದನ್ನು ಯಾರು ಬಯಸ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಅದಕ್ಕೆ ಬರ್ಗರ್ ಬೆಲೆ 100 ಅಲ್ಲ ಇನ್ನೂರು ಎಂಬ ಪ್ರತಿಕ್ರಿಯೆ ಬಂದಿದೆ. ತಿಂಗಳಲ್ಲಿ ಮೊದಲ ಬಾರಿ ಆತನಿಗೆ ಬರ್ಗರ್ ಸಿಕ್ಕಿರಬೇಕು. ಅವನ ಸ್ಥಿತಿಯಲ್ಲಿ ನಾನಿದ್ದರೂ ಅದನ್ನೇ ಮಾಡ್ತಿದ್ದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನು ಕೆಲವರು, ಆ ವ್ಯಕ್ತಿ ಐದು ಸೆಕೆಂಡ್ ನಿಯಮ ಪಾಲನೆ ಮಾಡ್ತಿರೋದಾಗಿ ಕಾಣ್ತಿದೆ ಎಂದಿದ್ದಾರೆ. ಆತನ ಮನಸ್ಸಿನಲ್ಲಿ ಏನಿತ್ತು ಯಾರಿಗೂ ತಿಳಿದಿಲ್ಲ, ಆದ್ರೆ ಈ ಐದು ಸೆಕೆಂಡ್ ನಿಯಮ ಅಂದ್ರೆ ಏನು ಅನ್ನೋದು ನಿಮಗೆ ಗೊತ್ತಾ?.
2 ವಾರಗಳ ಕಾಲ ಸ್ವಲ್ಪವೂ ಎಣ್ಣೆಯಂಶವಿರುವ ಆಹಾರ ತಿನ್ನದೇ
ಐದು ಸೆಕೆಂಡ್ ನಿಯಮ : ಐದು ಸೆಕೆಂಡ್ ನಿಯಮ ಅನ್ನೋದು ಜನಪ್ರಿಯ ನಂಬಿಕೆ. ಅದ್ರ ಪ್ರಕಾರ, ನೆಲಕ್ಕೆ ಬಿದ್ದ ಐದು ಸೆಕೆಂಡಿನಲ್ಲಿ ನೀವು ಆಹಾರ ಪದಾರ್ಥವನ್ನು ಎತ್ತಿಕೊಂಡ್ರೆ ಆಹಾರ ಸ್ವಚ್ಛವಾಗಿರುತ್ತದೆ ಎಂದರ್ಥ. ಆದ್ರೆ ಈ ನಂಬಿಕೆ ಸುಳ್ಳು. ನೆಲಕ್ಕೆ ಬಿದ್ದ ತಕ್ಷಣ ಆಹಾರ ಕೊಳಕಾಗುತ್ತದೆ. ಬ್ಯಾಕ್ಟೀರಿಯಾ ಬೆಳವಣಿಗೆ ಶುರುವಾಗುತ್ತದೆ. ನೆಲಕ್ಕೆ ಬಿದ್ದ ತಕ್ಷಣ ನೀವದನ್ನು ಎತ್ತಿಕೊಂಡ್ರೂ ಆಹಾರ ಸುರಕ್ಷಿತವಲ್ಲ. ನೆಲದ ಮೇಲಿನ ಕೊಳಕು ನಿಮ್ಮ ಆರೋಗ್ಯ ಹದಗೆಡಿಸಬಹುದು.
