Asianet Suvarna News Asianet Suvarna News

ಕೂಲ್‌ ಕೂಲ್‌ ವೆದರ್, ಪಬ್‌-ಪಾರ್ಟಿ; ಯಾವ ಕಾರಣಕ್ಕೆ 'ನಮ್ಮ ಬೆಂಗಳೂರು' ನಿಮಗಿಷ್ಟ?

ಸಿಲಿಕಾನ್ ಸಿಟಿ ಬೆಂಗಳೂರು ಎಲ್ಲರಿಗೂ ಅಚ್ಚುಮೆಚ್ಚು. ದೇಶದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಶಿಕ್ಷಣ, ಉದ್ಯೋಗದ ಉದ್ದೇಶವನ್ನಿಟ್ಟುಕೊಂಡು ಬರುತ್ತಾರೆ. ಯಾವಾಗಲೂ ಹಿತವಾಗಿರುವ ಕೂಲ್‌ ಕೂಲ್ ವೆದರ್‌, ಶಾಪಿಂಗ್ ಏರಿಯಾಗಳು, ಪಬ್‌-ಮಾಲ್‌ಗಳು, ಕಲರ್‌ಫುಲ್‌ ಲೈಫ್‌ ಎಲ್ಲರನ್ನು ಸೆಳೆಯುತ್ತದೆ.

Reasons Why Silicon city Bengaluru Is Just Awesome,Why do you love Namma Bengaluru Vin
Author
First Published Feb 3, 2024, 9:25 AM IST

ಸಿಲಿಕಾನ್ ಸಿಟಿ ಬೆಂಗಳೂರು ಎಲ್ಲರಿಗೂ ಅಚ್ಚುಮೆಚ್ಚು. ದೇಶದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಶಿಕ್ಷಣ, ಉದ್ಯೋಗದ ಉದ್ದೇಶವನ್ನಿಟ್ಟುಕೊಂಡು ಬರುತ್ತಾರೆ. ಯಾವಾಗಲೂ ಹಿತವಾಗಿರುವ ಕೂಲ್‌ ಕೂಲ್ ವೆದರ್‌, ಶಾಪಿಂಗ್ ಏರಿಯಾಗಳು, ಪಬ್‌-ಮಾಲ್‌ಗಳು, ಕಲರ್‌ಫುಲ್‌ ಲೈಫ್‌ ಎಲ್ಲರನ್ನು ಸೆಳೆಯುತ್ತದೆ. ಹೀಗಾಗಿಯೇ ಇಲ್ಲಿ ದಿನದಿಂದ ದಿನಕ್ಕೆ ಬಂದು ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಎಲ್ಲಾ ಭಾಷೆಯನ್ನು ಮಾತನಾಡುವ ಜನರು ಇಲ್ಲಿದ್ದಾರೆ. ಎಲ್ಲಾ ರಾಜ್ಯಗಳ, ದೇಶಗಳ ರುಚಿಕರವಾದ ಫುಡ್ ಸಹ ಇಲ್ಲಿ ಸಿಗುತ್ತದೆ. ಹೀಗಾಗಿ ಬೆಂಗಳೂರು ಹಲವರ ಫೇವರಿಟ್ ಪ್ಲೇಸ್. 

ನಾನಾ ನೆಪದಲ್ಲಿ ಈ ಊರಿಗೆ ಬಂದವರ ಪಾಲಿಗೆ ಬೆಂಗಳೂರು ನೆಚ್ಚಿನ ಊರಾಗಿ ಬಿಟ್ಟಿದೆ. ಉದ್ಯೋಗ, ಶಿಕ್ಷಣ ಎಂದು ಬಂದವರು ಇಲ್ಲಿಯೇ ಸೆಟಲ್ ಆಗಿದ್ದಾರೆ. ಅವಕಾಶಗಳನ್ನು ಹುಡುಕಿಕೊಂಡು ಬರುವವರ ಪಾಲಿಗೆ ಬೆಂಗಳೂರು ಆಶಾದಾಯಕ. ಶೂನ್ಯದಿಂದ ಬಂದು ಲಕ್ಷಾಧಿಪತಿಗಳಾದವರು ಇಲ್ಲಿದ್ದಾರೆ. ತುತ್ತು ಅನ್ನಕ್ಕಾಗಿ ಅರಸಿ ನಗರ ಸೇರಿದವರು ದೊಡ್ಡ ಬಿಸಿನೆಸ್ ಕಟ್ಟಿಕೊಂಡಿದ್ದಾರೆ. ಬೆಂಗಳೂರು ಎಲ್ಲರಿಗೂ ಆಸರೆ ಕೊಡುವ ನಗರ. ಕಷ್ಟವೆಂದು ಬಂದವರನ್ನು ತಬ್ಬಿ ಸಾಂತ್ವನಿಸಿ ಬದುಕು ಕಟ್ಟಿಕೊಡುವ ನಮ್ಮ ಬೆಂಗಳೂರು.

Bengaluru: ಮನೆಯಲ್ಲಿ ಕೆಲ್ಸ ಮಾಡೋದು ಕಷ್ಟವೇ? ಕಡಿಮೆ ಬಾಡಿಗೆಗೆ ಸಿಗ್ತಿದೆ ಸ್ಟಡಿ ರೂಮ್

ಬೆಂಗಳೂರಿನ ಜಾಬ್ ಆಫರ್, ಎಜುಕೇಶನ್‌, ಕೂಲ್ ಕೂಲ್‌ ವೆದರ್‌, ಪಬ್‌-ಪಾರ್ಟಿಗಳು, ಮಾಡರ್ನ್‌ ಲೈಫ್‌ಸ್ಟೈಲ್‌, ಹಳೆಯ ದೇವಾಲಯಗಳ ವೈಬ್ಸ್‌..ಬೆಂಗಳೂರಿಗೆ ಬರಲು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಾರಣಗಳು. ಒಟ್ನಲ್ಲಿ ಎಲ್ಲರಿಗೂ ಹೇಳದೇ ಕೇಳದೇ ಗೊತ್ತಿಲ್ಲದೇ ಬೆಂಗಳೂರು ಆಪ್ತವಾಗಿ ಬಿಡುತ್ತದೆ. ತಿಳಿಯದೇ ಎಲ್ಲೆಲ್ಲಿಂದಲೋ ಬಂದವರಿಗೆ ನಗರದ ಮೇಲೆ ಲವ್ವಾಗಿ ಬಿಡುತ್ತದೆ. ಬದುಕು ಕಟ್ಟಿಕೊಟ್ಟ ನಗರವನ್ನು ತೊರೆದು ಹೋಗಲಾಗದೆ ಇಲ್ಲಿಯೇ ಸೆಟಲ್ ಮಂದಿಗೆ ಲೆಕ್ಕವಿಲ್ಲ. 

ಆದರೆ ಈ ನಗರವನ್ನು ದ್ವೇಷಿಸುವವರೂ ಇದ್ದಾರೆ. ಸಿಕ್ಕಾಪಟ್ಟೆ ಟ್ರಾಫಿಕ್‌, ಎಕ್ಸ್‌ಪೆನ್ಸೀವ್ ಲೈಫ್‌ಸ್ಟೈಲ್‌, ಎಲ್ಲಾನೂ ಕಾಸ್ಟ್ಲೀ ಅನ್ನೋ ಕಾರಣಕ್ಕೆ ಹಲವರು ಈ ನಗರದಿಂದ ದೂರವುಳಿಯುತ್ತಾರೆ. ಆದ್ರೆ ಹಲವು ಹೇಟರ್ಸ್‌ಗಳ ಮಧ್ಯೆ ಈ ನಗರವನ್ನು ಪ್ರೀತಿಸುವವರ ಸಂಖ್ಯೆ ಇದೆಲ್ಲಕ್ಕಿಂತ ಹೆಚ್ಚಾಗಿದೆ ಅನ್ನೋದು ಖುಷಿಯ ವಿಚಾರ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬರು ನಿಮಗೆ ಬೆಂಗಳೂರು ಯಾವ ಕಾರಣಕ್ಕೆ ಇಷ್ಟ ಅನ್ನೋ ಪ್ರಶ್ನೆಯನ್ನು ಕೇಳಿ ವೀಡಿಯೋ ಮಾಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ವಯಸ್ಸು 24, ಸಂಬಳ 58 ಲಕ್ಷ, ಒಂಟಿತನ ಕಾಡ್ತಿದೆ ಅನ್ನೋದು ಯುವಕನ ಗೋಳು!

ಹಲವರು 'ಬೆಂಗಳೂರಿನ ಕೂಲ್‌ ವೆದರ್‌' ತುಂಬಾ ಇಷ್ಟವಾಗುತ್ತದೆ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೆ ಕೆಲವರು ಪಬ್‌, ಪಾರ್ಟಿ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಮತ್ತಷ್ಟು ಮಂದಿ, 'ಬೆಂಗಳೂರಿನ ಹಳೆಯ ವೈಬ್‌ ತರುವ ದೇವಾಲಯಗಳು ಮನಸ್ಸಿಗೆ ಮುದ ನೀಡುತ್ತವೆ' ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗ್ಯಾವ ಕಾರಣಕ್ಕೆ ಬೆಂಗಳೂರು ಇಷ್ಟ ಅನ್ನೋದನ್ನು ಕಾಮೆಂಟ್‌ನಲ್ಲಿ ತಿಳಿಸಿ.

Follow Us:
Download App:
  • android
  • ios