Asianet Suvarna News Asianet Suvarna News

ಕೃಷ್ಣಂ ವಂದೇ ಜಗದ್ಗುರುಂ; ಕೃಷ್ಣ ಏಕೆ ಜಗದ್ಗುರು?

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಕೃಷ್ಣ ಯಾಕೆ ಜಗದ್ಗುರು? ಇಲ್ಲಿದೆ ಕಾರಣ. 

Reason for why  Lord Krishna become Jagadguru
Author
Bengaluru, First Published Sep 2, 2018, 12:09 PM IST

ಬೆಂಗಳೂರು (ಸೆ. 02): ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ.

ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಕೃಷ್ಣ ಯಾಕೆ ಜಗದ್ಗುರು? ಇಲ್ಲಿದೆ ಕಾರಣ. 

ಏನು ಮಾಡಬೇಕು, ಏನು ಮಾಡಬಾರದು- ಇವೆರಡನ್ನೂ ಹೇಳುವವನು ಅತ್ಯುತ್ತಮ ಸಲಹೆಗಾರ, ತಂತ್ರಗಾರ, ಮ್ಯಾನೇಜರ್, ಗುರು, ಅಥವಾ ಏನು ಬೇಕಾದರೂ ಕರೆಯಿರಿ, ಅವನಾಗುತ್ತಾನೆ. ಒಬ್ಬ ಸಮರ್ಥ
ಗುರು ಈ ಎರಡನ್ನೂ ಕಲಿಸಬೇಕು. ಶ್ರೀಕೃಷ್ಣ ವಿಧಿ, ನಿಷೇಧಗಳೆರಡನ್ನೂ ಸಾವಿರಾರು ವರ್ಷಗಳ ಹಿಂದೆಯೇ ಸೂಕ್ಷ್ಮವಾಗಿ ಮತ್ತು ಖಡಕ್ಕಾಗಿ ಹೇಳಿದ ವ್ಯಕ್ತಿ. ವಿಧಿ ಅಂದರೆ ಮಾಡಬೇಕಾದ್ದು. ನಿಷೇಧವೆಂದರೆ ಮಾಡಬಾರದ್ದು.

ಭಗವದ್ಗೀತೆಯ ತುಂಬ ವಿಧಿ-ನಿಷೇಧಗಳೇ ತುಂಬಿವೆ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದವನು ಅತ್ಯುತ್ತಮ ಗುರುವಾಗುತ್ತಾನೆ. ಕೃಷ್ಣನನ್ನು ಹೀಗೆ ಜಗದ್ಗುರುವನ್ನಾಗಿ ಮಾಡಿದ್ದೇ ಭಗವದ್ಗೀತೆ!

ಭಗವದ್ಗೀತೆಯಲ್ಲಿ ಇಲ್ಲದ್ದೇ ಇಲ್ಲ. ವ್ಯಕ್ತಿಯೊಬ್ಬನ ಮನೋವಿಕಾಸ, ಏಕಾಗ್ರತೆ, ಸ್ವಯಂ ನಿಯಂತ್ರಣ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು, ಜ್ಞಾನ, ಮೌಲ್ಯಗಳು, ಕರ್ತವ್ಯ, ಕೆಲಸ, ಕ್ರಿಯೆ, ಅರ್ಪಣೆ, ನಾಯಕತ್ವ, ಅಂತಿಮ ಲಕ್ಷ್ಯ- ಯಶಸ್ಸಿನ ಇಷ್ಟೂ ಮೂಲಭೂತ ಸಂಗತಿಗಳನ್ನು ಭಗವದ್ಗೀತೆ ಕಲಿಸುತ್ತದೆ. ಆದ್ದರಿಂದಲೇ ಇಂದು ಜಗತ್ತಿನ ಪ್ರಸಿದ್ಧ ಮ್ಯಾನೇಜ್‌ಮೆಂಟ್ ಸ್ಕೂಲ್‌ಗಳಲ್ಲೂ ಭಗವದ್ಗೀತೆಯಿಂದ ಆಯ್ದ ಭಾಗಗಳನ್ನು
ಕಲಿಸಲಾಗುತ್ತದೆ.

ಯಶಸ್ಸು ಎಂಬುದು ಇಂದು ನಾವು ಎಲ್ಲೇ ಹೋದರೂ ಕೇಳಿಬರುವ ಮೂರಕ್ಷರದ ಆಕಾಂಕ್ಷೆ. ಎಲ್ಲರಿಗೂ ಯಶಸ್ಸು ಬೇಕು. ಈ ಯಶಸ್ಸಿಗೆ ಮೊಟ್ಟಮೊದಲು ಭೂಮಿಕೆ ಹಾಕಿಕೊಟ್ಟವನು ಶ್ರೀಕೃಷ್ಣ. ಅದನ್ನು ಭಗವದ್ಗೀತೆಯ ರೂಪದಲ್ಲಿ ಹೇಳಿಕೊಟ್ಟ. ಯಶಸ್ಸಿಗೆ ಬೇಕಿರುವುದು ಪ್ರಮುಖವಾಗಿ ಮೂರು ಅಂಶಗಳು.

1. ಉದ್ದೇಶ: ನಾವೇನು ಮಾಡಬೇಕೆಂಬುದನ್ನು ನಿರ್ಧರಿಸಿಕೊಳ್ಳುವುದು.

ಉದಾ: ಕಂಪನಿಯನ್ನು ಬೆಳೆಸುವುದು. ಅಥವಾ ಸಾಧಕರಾಗುವುದು.

2.  ಗುರಿ: ಉದ್ದೇಶ ಸಾಧನೆಗೆ ಏನು ಮಾಡಬೇಕೆಂಬುದನ್ನು ಕಂಡುಹಿಡಿದು ಅದರ ಮೇಲೆ ಕಣ್ಣಿಡುವುದು.

ಉದಾ: ಪ್ರತಿಸ್ಪರ್ಧಿ ಕಂಪನಿಯನ್ನು ಮುಳುಗಿಸುವುದು. ಅಥವಾ ಯಾವುದರಲ್ಲಿ ಸಾಧನೆ ಮಾಡಬೇಕೆಂದು ನಿರ್ಧರಿಸಿಕೊಳ್ಳುವುದು.

3.  ಕಾರ್ಯಸಾಧನೆ: ಗುರಿ ಸಾಧಿಸುವುದು ಹೇಗೆಂದು ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸುವುದು.

ಉದಾ: ಕಡಿಮೆ ಬೆಲೆಗೆ ಸೇವೆ ನೀಡುವುದು, ಅತ್ಯುತ್ತಮ ಸೇವೆ ನೀಡುವುದು ಇತ್ಯಾದಿ. ಇದನ್ನು ತಾನು ಹೇಗೆ ಮಾಡುತ್ತೇನೆಂದು ಕೃಷ್ಣ ಒಂದೇ ಮಾತಿನಲ್ಲಿ ಸೂಕ್ಷ್ಮವಾಗಿ ಹೇಳುತ್ತಾನೆ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥

ಉದ್ದೇಶ: ಪರಿತ್ರಾಣಾಯ ಸಾಧೂನಾಮ್ ಒಳ್ಳೆಯವರ ರಕ್ಷಣೆ. ಧನಾತ್ಮಕ ಹಾದಿಯಲ್ಲಿ ನಡೆಯುವ ಮೂಲಕ ಇದನ್ನು ಸಾಧಿಸುವುದು.

ಗುರಿ: ವಿನಾಶಾಯ ಚ ದುಷ್ಕೃತಾಮ್ ಕೆಟ್ಟವರ ಸರ್ವನಾಶ. ಅಡೆತಡೆಗಳನ್ನು ಅಥವಾ ಋಣಾತ್ಮಕ ಶಕ್ತಿಗಳನ್ನು ನಿವಾರಿಸುವುದು.

ಕಾರ್ಯಸಾಧನೆ: ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಲ್ಲೆಡೆ ಒಳ್ಳೆಯದನ್ನು ಸ್ಥಾಪಿಸಲು ಪದೇ ಪದೇ ಪ್ರಯತ್ನಿಸುವುದು. ಗೆಲ್ಲಲು ಅವಿರತವಾಗಿ ಕೆಲಸ ಮಾಡಲೇಬೇಕಲ್ಲವೇ?

ಈ ಮೂರು ಅಂಶಗಳು ಕೃಷ್ಣ ತೋರಿಸಿಕೊಟ್ಟ ಯಶಸ್ಸಿನ ಮೂರು ಮೆಟ್ಟಿಲುಗಳು. 

Follow Us:
Download App:
  • android
  • ios