ಅಕ್ಕ.. ನಿಮ್ಮ ಫೋನ್ ನೀವೇ ಇಟ್ಕೊಳ್ಳಿ ಅಂತ ಕಳ್ಳ ಐಫೋನ್ ವಾಪಸ್ ನೀಡಿದ್ದೇಕೆ?
ಫೋನ್ ಕಳೆದ್ರೆ ಸಿಗೋದು ಕಷ್ಟ. ಅದ್ರಲ್ಲೂ ಐಫೋನ್ ಕಳೆದ್ರೆ ಜನರು ವಾಪಸ್ ಸಿಗುವ ಆಸೆ ಬಿಡ್ತಾರೆ. ಆದ್ರೆ ಈ ಮಹಿಳೆ ಲಕ್ ಚೆನ್ನಾಗಿತ್ತು. ಕಳ್ಳನೇ ಫೋನ್ ವಾಪಸ್ ಕೊಟ್ಟು ಹೋಗಿದ್ದಾನೆ.
ಫೋನ್ ಕಳ್ಳರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಜೇಬಿನಲ್ಲಿರುವ ಫೋನನ್ನು ನಿಮ್ಮ ಅರಿವಿಲ್ಲದೆ ಕಳ್ಳತನ ಮಾಡ್ತಾರೆ ಕಳ್ಳರು. ಸ್ಮಾರ್ಟ್ಫೋನ್ ಗಳಿಗೆ ಈಗ ಸಾಕಷ್ಟು ಸೌಲಭ್ಯ ನೀಡಲಾಗಿದೆ. ನಿಮ್ಮ ಫೋನ್ ಕಳ್ಳತನವಾದ್ರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾದ ಕೆಲ ಸೌಲಭ್ಯ ಫೋನ್ ನಲ್ಲಿರುತ್ತದೆ. ಅಷ್ಟಿದ್ರೂ ಕಳ್ಳರು ಚಾಲಾಕಿತನ ಬಳಸಿ ನಿಮ್ಮ ಫೋನ್ ಕದಿಯೋದಲ್ಲದೆ ಅದು ವಾಪಸ್ ನಿಮಗೆ ಸಿಗಲು ಸಾಧ್ಯವಿಲ್ಲದಂತೆ ಮಾಡ್ತಾರೆ. ಸ್ಮಾರ್ಟ್ಫೋನ್ ಕೈಗೆ ಸಿಕ್ಕರೆ ಬಿಡದ ಜನ ಇನ್ನು ಐಫೋನ್ ಸಿಕ್ಕರೆ.. ಕಳ್ಳರ ಕೈಗೆ ಐಫೋನ್ ಸಿಕ್ಕರೆ ಹಬ್ಬ ಎನ್ನಬಹುದು. ಆದ್ರೆ ಇಲ್ಲೊಬ್ಬ ಕಳ್ಳ, ಕದ್ದ ಐಫೋನನ್ನು ವಾಪಸ್ ಕೊಟ್ಟು ಹೋಗಿದ್ದಾನೆ. ಅದು ಏಕೆ ಅನ್ನೋದನ್ನು ನಾವು ಹೇಳ್ತೇವೆ.
ಬಿಹಾರ (Bihar) ದ ರಾಜಧಾನಿ ಪಾಟ್ನಾದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗ್ತಿದೆ. ಈಗ ಅಚ್ಚರಿಪಡುವ ಘಟನೆ ಕೂಡ ಬಿಹಾರದಲ್ಲಿಯೇ ನಡೆದಿದೆ. ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಶಿಯಾನಾ ದಿಘಾ ರಸ್ತೆಯ ಬಳಿ ಕಳ್ಳತನವಾಗಿದೆ. ಉತ್ತರಾಖಂಡ ಮೂಲದ ಮಹಿಳೆ ಕಚೇರಿ ಮುಗಿಸಿ ಮನೆಗೆ ಹೋಗ್ತಿದ್ದಳು. ಈ ವೇಳೆ ಮಹಿಳೆ ಕೈನಲ್ಲಿದ್ದ ಐಫೋನ್ ( I phone) ಕಸಿದುಕೊಂಡು ಕಳ್ಳ ಕಾಲ್ಕಿತ್ತಿದ್ದಾನೆ. ಐಫೋನ್ ಕಳೆದುಕೊಂಡ ಕಲ್ಪನಾ ಕುಮಾರಿ ಕಂಗಾಲಾಗಿದ್ದಾರೆ.
PEAK BENGALURU: ಒಂದೇ ಆಟೋ ಒಬ್ಬನೇ ಡ್ರೈವರ್, ಬೇರೆ ಬೇರೆ ಆ್ಯಪ್‌ನಲ್ಲಿ ವಿಭಿನ್ನ ಸ್ಥಳಗಳಿಗೆ ಆಟೋ ಬುಕ್
ಫೋನ್ ಕದ್ದೊಯ್ದ ನಂತ್ರ ಕಲ್ಪನಾ ಕುಮಾರಿ ತನ್ನ ಫೋನ್ ನಂಬರ್ ಗೆ ಕರೆ ಮಾಡಿದ್ದಾಳೆ. ಆಗ ಫೋನ್ ಆನ್ ಆಗಿದ್ದು ಗಮನಕ್ಕೆ ಬಂದಿದೆ. ಫೋನ್ ವಾಪಸ್ ಪಡೆಯಲು ಮುಂದಾದ ಮಹಿಳೆ ತನ್ನ ಫೋನ್ ನಂಬರ್‌ಗೆ ಹಲವು ಬಾರಿ ಕರೆ ಮಾಡಿದ್ದಾಳೆ. ಪ್ರತಿ ಬಾರಿಯೂ ಫೋನ್ ರಿಂಗ್ ಆಗಿದೆ. ಆದ್ರೆ ಫೋನ್ ಯಾರೂ ತೆಗೆಯುತ್ತಿರಲಿಲ್ಲ. ಒಮ್ಮೆ ಫೋನ್ ರಿಂಗ್ ಆಗ್ತಿದ್ದಂತೆ ಅತ್ತ ಕಡೆಯಿಂದ ಉತ್ತರ ಬಂದಿದೆ. ಇದನ್ನು ಕೇಳಿ ಮಹಿಳೆ ಖುಷಿಯಾಗಿದ್ದಾಳೆ.
ಫೋನ್ ರಿಸಿವ್ ಮಾಡಿದ ವ್ಯಕ್ತಿ, ಫೋನ್ ವಾಪಸ್ ನೀಡೋದಾಗಿ ಹೇಳಿದ್ದಾನೆ. ಸಹೋದರಿ, ನಿಮ್ಮದು ಐಫೋನ್. ಅದು ಆಫ್ ಆಗುತ್ತಿಲ್ಲ. ಇದು ನನ್ನ ವ್ಯವಹಾರಕ್ಕೆ ಸೂಕ್ತವಲ್ಲ. ನಿಮ್ಮ ಫೋನ್ ಅನ್ನು ನೀವೇ ತೆಗೆದುಕೊಂಡು ಹೋಗೋದು ಉತ್ತಮ ಎಂದು ವ್ಯಕ್ತಿ ಹೇಳಿದ್ದಾನೆ. ಮಹಿಳೆ ಫೋನನ್ನು ಅಂಗಡಿ ಬಳಿ ಇರಿಸಿ ಕಳ್ಳ ಪರಾರಿಯಾಗಿದ್ದಾನೆ. ಐಫೋನ್ ಬಳಸೋದು ಸ್ಮಾರ್ಟ್ಫೋನ್ ಬಳಸಿದ ಹಾಗೆ ಅಲ್ಲ. ಅದ್ರ ಬಗ್ಗೆ ಸ್ವಲ್ಪ ಜ್ಞಾನದ ಅಗತ್ಯವಿರುತ್ತದೆ.
ಮಗುವಿನ ಅಳು ನಿಲ್ಸೋಕೆ ಹಾಲು ಕೊಡೋ ಬದ್ಲು ಮದ್ಯ ಕುಡಿಸಿದ ತಾಯಿ!
ಈ ಕಳ್ಳನಿಗೆ ಐಫೋನ್ ಬಳಸಿ ಅಭ್ಯಾಸವಿಲ್ಲ ಎನ್ನಿಸುತ್ತದೆ. ತೆಗೆದುಕೊಂಡು ಹೋದ ನಂತರ ಕಳ್ಳನಿಗೆ ಅದನ್ನು ಆಫ್ ಮಾಡಲು ಸಾಧ್ಯವಾಗಲಿಲ್ಲ. ಸ್ವಿಚ್ ಆಫ್ ಮಾಡಲು ಅನೇಕ ಬಾರಿ ಪ್ರಯತ್ನ ನಡೆಸಿದ್ದಾನೆ. ಅದು ಆಫ್ ಆಗದೆ ಹೋದಾಗ ಫೋನನ್ನು ಮರಳಿಸಲು ನಿರ್ಧರಿಸಿದ್ದಾನೆ. ಇಲ್ಲವಾದ್ರೆ ಪೊಲೀಸ್ ಕೈಗೆ ಸಿಕ್ಕಿಬೀಳುತ್ತೇನೆಂಬ ಭಯ ಈತನಿಗೆ ಶುರುವಾಗಿದೆ. ಮಹಿಳೆಯೊಂದಿಗೆ ಮಾತನಾಡುವ ವೇಳೆ ಫೋನ್ ಅನ್ನು ಅಂಗಡಿಯ ಶಟರ್ ಅಡಿಯಲ್ಲಿ ಇರಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಕಳ್ಳ ಹೇಳಿದ ಜಾಗಕ್ಕೆ ಮಹಿಳೆ ಹೋಗಿದ್ದಾಳೆ. ಅಂಗಡಿಯ ಶಟರ್ ಅಡಿಯಲ್ಲಿ ಐಫೋನ್ ಸಿಕ್ಕಿದೆ. ಫೋನ್ ವಾಪಸ್ ಸಿಕ್ಕ ಕಾರಣ ಮಹಿಳೆ ಯಾವುದೇ ದೂರನ್ನು ನೀಡಿಲ್ಲ.
ಕಳೆದುಹೋದ ನಿಮ್ಮ ಮೊಬೈಲ್ ಪತ್ತೆ ಮಾಡೋದು ಹೇಗೆ? : ನಿಮಗೆ ಐಎಂಇಐ ಸಂಖ್ಯೆ ತಿಳಿದಿದ್ದರೆ ಮೊಬೈಲ್ ಟ್ರ್ಯಾಕರ್ ಅಪ್ಲಿಕೇಶನ್‌ಗೆ ಹೋಗುವ ಮೂಲಕ ಕಳೆದುಹೋದ ಫೋನ್‌ನ ಸ್ಥಳವನ್ನು ನೀವು ಟ್ರ್ಯಾಕ್ ಮಾಡಬಹುದು. ಯಾರಾದರೂ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದರೂ ಸಹ, ಈ ಸಂಖ್ಯೆಯ ಮೂಲಕ ನೀವು ಫೋನ್ ಹುಡುಕಬಹುದು.