ಧಾರ್ಮಿಕತೆ, ರಹಸ್ಯದ ಒಡಲು ಯಮುನೇತ್ರಿ ಯಾತ್ರೆ!
ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೇತ್ರಿ ಧಾಮ ಚಾರ್ ಧಾಮ್‌ಗಳಲ್ಲಿ ಮೊದಲನೆಯದು. ಇಲ್ಲಿ ಸೂರ್ಯ ಪುತ್ರಿ ಮತ್ತು ಶನಿ ಅಥವಾ ಯಮನಾ ಸಹೋದರಿ ಎಂದು ಹೇಳುವ ಯಮುನೆಯನ್ನು ಆರಾಧಿಸಲಾಗುತ್ತದೆ. ಇಲ್ಲಿನ ರೋಚಕ ಕಥೆ ಹೀಗಿದೆ.
ಉತ್ತರಾಖಂಡದ ಹಿಮಾಲಯದಲ್ಲಿ ನೆಲೆಸಿರುವ ವಿಶ್ವ ಪ್ರಸಿದ್ಧ ಚಾರ್ ಧಾಮಗಳಲ್ಲಿ ಯಮುನೇತ್ರಿಯೂ ಒಂದು. ಸಮುದ್ರ ಸ್ಥಳದಿಂದ ಸಾವಿರಾರು ಮೀಟರ್ ಎತ್ತರದಲ್ಲಿರುವ ಯಮುನೇತ್ರಿ ಯಾತ್ರೆ ಕೇವಲ ಧಾರ್ಮಿಕತೆಯಿಂದ ಮಾತ್ರವಲ್ಲ, ರಹಸ್ಯ ರೋಮಾಂಚಕ ಯಾತ್ರೆಯೂ ಹೌದು. ಈ ಈ ಯಾತ್ರೆ ಮನಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ.
ಮಾನವನಾಗಿ ಹುಟ್ಟಿದ್ಮೇಲೆ ಇವನ್ನು ನೋಡಿದಿದ್ದರೆ ಹೇಗೆ?
ಉತ್ತರ ಕಾಶಿ ಜಿಲ್ಲೆಯಲ್ಲಿರುವ ಯಮುನೇತ್ರಿಯಲ್ಲಿ ಯಮುನೆಯನ್ನು ಆರಾಧಿಸಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 3235 ಮೀಟರ್ ಎತ್ತರವಿದೆ. ಇಲ್ಲಿಂದ ಒಂದು ಕಿ. ಮೀ ದೂರದಲ್ಲಿ ಚಂಪಾರಸ್ ಗ್ಲೇಶಿಯರ್ ಇದೆ. ಇದು ಯಮುನೆಯ ಮೂಲ ಉದ್ಭವ ಸ್ಥಾನ. ಧರ್ಮಗ್ರಂಥದಲ್ಲಿ ಹೇಳುವಂತೆ ಈ ಪವಿತ್ರ ಸ್ಥಾನ ಅಸಿತ್ ಮಹರ್ಷಿಗಳ ನಿವಾಸವಾಗಿತ್ತು. ಅವರು ಇಲ್ಲಿ ಯಮುನೆಯನ್ನು ಪೂಜಿಸುತ್ತಿದ್ದರು. ಅದರಿಂದ ಪ್ರಸನ್ನಳಾದ ಯಮುನೆ ಅಲ್ಲಿ ಉದ್ಭವಿಸಿದಳು. ಇಲ್ಲಿ ನಿರ್ಮಾಣವಾಗಿರುವ ಯಮುನೆಯ ಮಂದಿರವನ್ನು ಜಯಪುರದ ಮಹಾರಾಣಿ ಗುಲೇರಿಯ 19ನೇ ಶತಮಾನದಲ್ಲಿ ನಿರ್ಮಿಸಿದರು.
ಋಷಿಕೇಶದಿಂದ ಆರಂಭವಾಗುವ ಯಮುನೇತ್ರಿ ಯಾತ್ರೆ ಮಾರ್ಗ ಮಧ್ಯದಲ್ಲಿ ಹಲವಾರು ತೀರ್ಥ ಕ್ಷೇತ್ರಗಳು ಸಿಗುತ್ತವೆ. ಗಂಗಾ- ಯಮುನೆಯ ಸಂಗಮ, ಋಷಿ ಜಮದಗ್ನಿ ಮಂದಿರ, ಹರ್ಷಿಲ್ ನಲ್ಲಿ ಹರಿ ಶಿಲಾ, ಹನುಮಚಟ್ಟಿಯಲ್ಲಿ ಹನುಮಾನ್ ಮಂದಿರದ ಬಳಿಕ ಯಮುನಾ ಮಂದಿರದ ದರ್ಶನವಾಗುತ್ತದೆ. ಇವೆಲ್ಲಾ ಮಂದಿರ ದರ್ಶನ ಮಾಡಿದರೆ ಲಾಭ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಭೂತಾನ್ ಎಂಬ ಭೂಲೋಕದ ಸ್ವರ್ಗ: ಅಚ್ಚರಿ ಮೂಡಿಸುತ್ತೆ ಪುಟ್ಟ ರಾಷ್ಟ್ರದ ವೈಶಿಷ್ಟ್ಯ!
ಸಾವಿರಾರು ಕಿ.ಲೋ ಮೀಟರ್ ಎತ್ತರಕ್ಕೆ ಭಕ್ತಿಯಿಂದ ಎಲ್ಲ ತೀರ್ಥ ಕ್ಷೇತ್ರಗಳನ್ನು ನೋಡುತ್ತಾ, ಕಲ್ಲು ಮುಳ್ಳು, ಕಿರಿದಾದ ಬೆಟ್ಟಗಳನ್ನು ಏರುತ್ತಾ ಸಾಹಸ ಮಯ ಯಾತ್ರೆ ಮಾಡಿ ಕೊನೆಗೆ ಯಮುನೇತ್ರಿಯ ದರ್ಶನ ಪಡೆದರೆ ಎಲ್ಲಾ ಔನ್ಯ ಪ್ರಾಪ್ತಿಯಾಗುವುದು ಖಂಡಿತಾ.