Asianet Suvarna News Asianet Suvarna News

ಚಿಕ್ಕ ವಯಸ್ಸಲ್ಲೇ ಬರಬಹುದು ಪಾರ್ಕಿನ್ಸನ್!

ಪಾರ್ಕಿನ್ಸನ್ ಅಂದರೆ ವಯಸ್ಸಾದ ಮೇಲೆ ಬರುವ ಸಮಸ್ಯೆ ಅಂತ ಬಹಳ ಜನ ನಿರಾಳರಾಗಿರ‌್ತಾರೆ. ಆದರೆ ಅದಕ್ಕೂ ಮೊದಲೇ ಬರುವ ಸಾಧ್ಯತೆಯೂ ಇದೆ. ಸ್ವಲ್ಪ ಹುಷಾರಾಗಿರಿ ಅಂತಾರೆ ಡಾಕ್ಟ್ರು. 

Parkinson's disease likely to affect people at young age
Author
Bengaluru, First Published Oct 8, 2018, 5:08 PM IST

ಖಾಸಗಿ ಕಂಪೆನಿಯ ಉದ್ಯೋಗಿ ರಾಜಾರಾಮ್‌ಗೆ ನಲುವತ್ತೈದರ ಆಸುಪಾಸು. ಆರೋಗ್ಯದಿಂದ ಓಡಾಡಿಕೊಂಡಿದ್ದವರಿಗೆ ಕೆಲವು ದಿನಗಳಿಂದ ಏನೋ ಸರಿಯಿಲ್ಲ ಅನ್ನಿಸಲಾರಂಭಿಸಿತು. ಕ್ರಮೇಣ ಮೊದಲಿನ ಚುರುಕು ನಡಿಗೆ ನಿಧಾನ ಗತಿ ಪಡೆದುಕೊಂಡಿತು. ಶರೀರದಲ್ಲಿ ಬಿಗಿತ ಉಂಟಾಗಿ ಕೈಗಳ ಚಲನೆಯೂ ನಿಧಾನವಾಯ್ತು. ಸಿಸ್ಟಮ್ ಎದುರು ಕೂತರೆ ಬ್ಲಾಂಕ್ ಆದಂತೆ. ಮೊದಲಿನ ಹಾಗೆ ವೇಗವಾಗಿ ಟೈಪ್ ಮಾಡಲೂ ಆಗುತ್ತಿಲ್ಲ. ಇದು ಕ್ರಮೇಣ ತಿನ್ನುವುದು, ಶೇವಿಂಗ್ ಸೇರಿದಂತೆ ಇತರ ಚಟುವಟಿಕೆಗೂ ವಿಸ್ತರಿಸಿತು. ಹಿಂದಿನ ಹಾಗೆ ಸುಲಭವಾಗಿ ಮಾತನಾಡುವುದೂ ಸಾಧ್ಯವಾಗುತ್ತಿರಲಿಲ್ಲ.

ಪರೀಕ್ಷೆ ಮಾಡಿದಾಗ ಅವರಿಗಾದದ್ದು ಪಾರ್ಕಿನ್ಸನ್ ಅಂತ ತಿಳಿದುಬಂತು. ಅರೇ, ಪಾರ್ಕಿನ್ಸನ್ ವಯಸ್ಸಾದವರಲ್ಲಿ ಬರುವ ಸಮಸ್ಯೆ ಅಲ್ಲವಾ, ನಲುವತ್ತೈ ದರಲ್ಲಿ ಹೇಗೆ ಬಂತು ಅಂತ ಗಾಬರಿ.

ಪಾರ್ಕಿನ್ಸನ್ ರೋಗವೇ ಹಾಗೆ. ಮಾನವನ ದೇಹದ ಅಂಗಗಳ ಚಲನೆಗೆ ಸಂಬಂ ಸಿದ ನರಕೋಶಗಳು ಸತ್ತಾಗ ಅಥವಾ ನ್ಯೂನತೆಗೊಳಗಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು, ಮೆದುಳಿನ ಪ್ರಮುಖ ಸಂದೇಶಗಳನ್ನು ಒಂದು ನರದಿಂದ ಮತ್ತೊಂದು ನರಕ್ಕೆ ರವಾನಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇ ರಿಂದಾಗಿ, ಸ್ನಾಯು ಚಲನೆಗೆ ಅಥವಾ ನರಗಳ ಚಲನೆಗೆ ಸಂಬಂಸಿದ ಅಥವಾ ಇನ್ನಿತರ ರೋಗಲಕ್ಷಣ ಕಾಣಿಸಿಕೊಳ್ಳತೊಡಗುತ್ತವೆ. ಈ ರೋಗವು ಸಾಮಾನ್ಯವಾಗಿ 50 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಕಂಡುಬರುತ್ತದೆ ಅನ್ನುವ ಭಾವನೆ ಇತ್ತು. ಆದರೆ ರಾಜಾರಾಮ್ ಅವರಲವೊಂದು ಬಾರಿ, ಪಾರ್ಕಿನ್ಸನ್ ರೋಗವು ಬೇಗನೇ ಕಂಡುಬರಬಹುದು.
ಅದಕ್ಕೆ ಆನುವಂಶಿಕ ಕಾರಣಗಳಿರಬಹುದು.

ಕುಸಿಯುವ ರೋಗಿ:

ಪಾರ್ಕಿನ್ಸನ್ ಸಮಸ್ಯೆ ಇರುವವರಲ್ಲಿ ಕೈಗಳಲ್ಲಿ ಆಗಾಗ್ಗೆ ಕಂಪನ, ಅಂಗಾಂಗಗಳ ಚಲನೆ ವೇಳೆ ನಿಧಾನಗತಿ, ಅಂಗಾಂಗಗಳ ಬಿಗಿತ, ಸ್ನಾಯುಗಳಲ್ಲಿ ನೋವು ಇತ್ಯಾದಿ. ಲಕ್ಷಣ ಕಾಣಿಸಬಹುದು. ಜೊತೆಗೆ ಮಲಬದ್ಧತೆ, ಖಿನ್ನತೆ, ಸೈಕೋಸಿಸ್, ನೆನಪಿನ ಶಕ್ತಿ ಕಳೆದುಕೊಳ್ಳುವಿಕೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಶರೀರದ ಒಂದು ಭಾಗದಲ್ಲಿ ಆರಂಭವಾಗಿ, ನಂತರ ಮತ್ತೊಂದು ಭಾಗಕ್ಕೆ ವ್ಯಾಪಿಸುತ್ತದೆ. ಕೆಲವು ರೋಗಿಗಳು ನಿಲ್ಲಲು ಸಾಧ್ಯವಾಗದೇ, ಕುಸಿದು ಬೀಳುತ್ತಾರೆ. ಇದಕ್ಕೆ ಆದಷ್ಟು ಬೇಗ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದರೆ, ಇಂಥ ಬಹುತೇಕ ರೋಗ ಲಕ್ಷಣಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಿದೆ.ಆದರೆ, ರೋಗವು ವೃದ್ಧಿಸುತ್ತಾ ಹೋದಂತೆ, ಚಿಕಿತ್ಸೆಗೆ ಸ್ಪಂದನೆ ಕಡಿಮೆಯಾಗುತ್ತಾ ಸಾಗುತ್ತದೆ. ಅಂಥ ಸಂದರ್ಭದಲ್ಲಿ ಡೋಸೇಜ್ ಹೆಚ್ಚಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಚಿಕಿತ್ಸೆಯ ಪರಿಣಾಮವಾಗಿ ಅವರ ಅಂಗಾಂಗಗಳು, ತಲೆ, ಕುತ್ತಿಗೆಯ ಭಾಗಗಳಲ್ಲಿ ಅನಪೇಕ್ಷಿತ ಚಲನೆಗಳೂ ಕಾಣಿಸಿಕೊಳ್ಳಬಹುದು.
ಆಧುನಿಕ ತಂತ್ರಜ್ಞಾನ ಡಿಬಿಎಸ್:

ಇದರ ಮುಂದುವರಿದ ಭಾಗವಾಗಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್(ಡಿಬಿಎಸ್) ಎಂಬ ಸುಧಾರಿತ ಶಸಚಿಕಿತ್ಸಾ ವಿಧಾನವಿದೆ. ಇದರಿಂದ ಪಾರ್ಕಿನ್ಸನ್‌ನ ಮುಖ್ಯ ಲಕ್ಷಣಗಳಾದ ಕಂಪನ, ಶರೀರ ಬಿಗಿತ, ಸೆಟೆತ, ಚಲನೆಯಲ್ಲಿ ವಿಳಂಬ ಮತ್ತು ನಡೆಯಲು ಅಸಾಧ್ಯವಾಗುವಿಕೆ ಮುಂತಾದ ಸಮಸ್ಯೆಗಳು ಕಡಿಮೆಯಾಗಿವೆ. ಈ ಶಸಚಿಕಿತ್ಸೆಯಲ್ಲಿ, ಮೆದುಳಿನ ನಿರ್ದಿಷ್ಟ ಪ್ರದೇಶದೊಳಗೆ ತೆಳ್ಳಗಿನ ವೈರ್ ಅನ್ನು ಇರಿಸಲಾಗುತ್ತದೆ. ನಂತರ ಅದನ್ನು ಚರ್ಮದ ಕೆಳಗಿನ ಪಲ್ಸ್ ಜನರೇಟರ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಜನರೇಟರ್ ಪಾರ್ಕಿನ್ಸನ್ ರೋಗಕ್ಕೆ ಕಾರಣವಾಗುವಂಥ ಮೆದುಳಿನ ಕೆಲವೊಂದು ಎಲೆಕ್ಟ್ರಿಕಲ್ ಸಿಗ್ನಲ್ ಗಳನ್ನು ಬದಲಾಯಿಸುತ್ತದೆ. ಲೆವೊಡೋಪಾ ಔಷಧದ ಬಳಕೆಯ ನಂತರವೂ ಮೋಟಾರ್ ಸಮಸ್ಯೆಗಳನ್ನು ಎದುರಿಸುವಂಥ ರೋಗಿಗಳಿಗೆ ಡಿಬಿಎಸ್ ಶಸಚಿಕಿತ್ಸೆ ಮಾಡಬೇಕಾಗುತ್ತದೆ. ನನಗೆ ನಿರಾಸೆ ಮೂಡಿಸಿದ ಮತ್ತೊಂದು ಸಂಗತಿಯೆಂದರೆ, ವೈದ್ಯಕೀಯ ಪಠ್ಯಕ್ರಮಗಳಲ್ಲಿ ಪಾರ್ಕಿನ್ಸನ್ ರೋಗಕ್ಕೆ ಹೆಚ್ಚಿನ ಮಹತ್ವ ದೊರೆಯದೇ ಇರುವುದು ಮತ್ತು ಪಿಡಿಗೆ ಚಿಕಿತ್ಸೆ ನೀಡುವ ಕೇಂದ್ರಗಳು ಕೇವಲ ಕೆಲವೇ ಕೆಲವು ಮೆಟ್ರೋಗಳಿಗೆ ಸೀಮಿತವಾಗಿರುವುದು. ಪಾರ್ಕಿನ್ಸನ್ ರೋಗಕ್ಕೆ ಪರಿಣಾಮಕಾರಿ ಮೆಡಿಕಲ್ ಮತ್ತು ಸರ್ಜಿಲ್ ಚಿಕಿತ್ಸೆ ಲಭ್ಯವಾಗುವಂತೆಯೂ ನೋಡಿಕೊಳ್ಳಬೇಕಿದೆ. ಇವುಗಳು ಸಾಕಾರಗೊಂಡರೆ, ಪಾರ್ಕಿನ್ಸನ್ ರೋಗಿಗಳ ಜೀವನಮಟ್ಟ ಸುಧಾರಣೆಗೆ ದಾರಿ ಮಾಡಿಕೊಟ್ಟಂತೆ.

ಹಲವು ದಶಕಗಳ ಸಂಶೋಧನೆ
ಮೆದುಳಿನಲ್ಲಿರುವ ಕೆಮಿಕಲ್ ನ್ಯೂರೋಟ್ರಾನ್ಸ್‌ಮೀಟರ್- ಡೊಪಮೈನ್‌ನ ಮಟ್ಟವು ಕುಸಿತಗೊಂಡಾಗ, ಪಾರ್ಕಿನ್ಸನ್ ರೋಗಲಕ್ಷಣ ಪತ್ತೆಯಾಗುತ್ತದೆ ಎಂಬುದನ್ನು 1950ರಲ್ಲಿ ಸಂಶೋಧಕರು ಕಂಡುಕೊಂಡರು. ಹೊರಗಿನಿಂದ ನೀಡಲಾದ ಡೊಪಮೈನ್‌ನಿಂದ ಪಾರ್ಕಿನ್ಸನ್ ರೋಗಿಗಳ ಕಂಪನದಲ್ಲಿ ಇಳಿಕೆ, ಒಟ್ಟಾರೆ ದೈಹಿಕ ಚಲನೆಯಲ್ಲಿ ಸುಧಾರಣೆಯಾಗುತ್ತದೆ ಎಂಬುದನ್ನೂ ಅರಿತುಕೊಂಡರು. ಲೆವಡೋಪಾ ಎಂಬ ಔಷಧವನ್ನು ಕಂಡುಹಿಡಿದು 50 ವರ್ಷಗಳೇ ದಾಟಿದರೂ, ಅದು ಈಗಲೂ ಪಾರ್ಕಿನ್ಸನ್ಸ್ ರೋಗಕ್ಕೆ ಪರಿಣಾಮಕಾರಿ ಔಷಧ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ.

Follow Us:
Download App:
  • android
  • ios