ಮಗುವಿನೊಂದಿಗೆ ಅಪ್ಪ, ಅಮ್ಮ ಹೆಚ್ಚೆಚ್ಚು ಬೆರೆತಷ್ಟೂ ಅದರ ಮಾನಸಿಕ, ದೈಹಿಕ ಬೆಳವಣಿಗೆ ಚೆನ್ನಾಗಾಗುತ್ತೆ ಅನ್ನೋದು ಸಂಶೋಧನೆಗಳಿಂದ ಸಾಬೀತಾಗಿದೆ.
ಇದನ್ನು ನೀವು ಮನೆಯಲ್ಲೂ ಪ್ರಯೋಗಿಸಿ ನೋಡಬಹುದು. ನಮ್ಮಲ್ಲಿ ಹೆಚ್ಚಿನ ಪೋಷಕರು ತಮ್ಮ ಕೆಲಸದಲ್ಲೇ ಬ್ಯುಸಿ ಇರುತ್ತಾರೆ. ಮಕ್ಕಳು ಏನಾದರೂ ಹೇಳಲು ಬಂದರೆ ಕಿವಿಗೊಡುವ ವ್ಯವಧಾನವೂ ಇರಲ್ಲ. ವಯಸ್ಸಿನ ಅಂತರ, ಕೆಲಸದ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಆದರೆ ಮಕ್ಕಳ ಜೊತೆಗೆ ದಿನದಲ್ಲಿ ಅರ್ಧ ಅಥವಾ ಒಂದು ಗಂಟೆ ಆಟವಾಡಿ ನೋಡಿ. ಮಗು ಎಂದಿಗಿಂತ ಹೆಚ್ಚು ಖುಷಿಯಾಗಿರುತ್ತದೆ. ನಿಮ್ಮೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ನಿಮಗೂ ನಿಮ್ಮ ಒತ್ತಡದಿಂದ ಹೊರಬರೋದು ಸಾಧ್ಯವಾಗುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
