ಈ ಚಿತ್ರದಲ್ಲಿ ಮಹಿಳೆಯ ಪತಿ ಎಲ್ಲಿದ್ದಾರೆ ಅಂತ ಗೊತ್ತಾಯ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ಹಸುವಿನ ಚಿತ್ರದಲ್ಲಿ ಅಡಗಿರುವ ವ್ಯಕ್ತಿಯನ್ನು ಹುಡುಕುವ ಒಂದು ಆಪ್ಟಿಕಲ್ ಇಲ್ಯೂಷನ್ ಚಾಲೆಂಜ್ ವೈರಲ್ ಆಗಿದೆ. ಚಿತ್ರವನ್ನು ಉಲ್ಟಾ ಮಾಡಿ ನೋಡಿದಾಗ ವ್ಯಕ್ತಿಯ ಚಿತ್ರ ಗೋಚರಿಸುತ್ತದೆ.
ಕೆಲವು ಚಿತ್ರಗಳು ತುಂಬಾನೇ ವಿಶೇಷವಾಗಿರುತ್ತೇವೆ. ಮೇಲ್ನೋಟಕ್ಕೆ ಒಂದು ರೀತಿಯಾಗಿ ನೋಡಿದ್ರೆ, ಸೂಕ್ಷ್ಮವಾಗಿ ಗಮನಿಸಿದರೆ ಚಿತ್ರದಲ್ಲಿರುವ ಅಂಶಗಳು ಅಚ್ಚರಿಯನ್ನು ಹುಟ್ಟಿಸುತ್ತವೆ. ಕೆಲ ಚಿತ್ರ ಕಲೆಗಾರರು ಬಿಡಿಸುವ ಪೇಟಿಂಗ್‌ಗಳು ಒಳಾರ್ಥವನ್ನು ಹೊಂದಿರುತ್ತವೆ. ಇಂತಹ ಪೋಟೋಗಳನ್ನು ಡಿಕೋಡ್ ಮಾಡೋದು ಸಹ ಒಂದು ಸ್ಪರ್ಧೆಯಂತೆ ಇರುತ್ತದೆ. ಈ ರೀತಿಯ ಒಳಾರ್ಥ ಹೊಂದಿರುವ ಫೋಟೋಗಳನ್ನು Optical Illusion Challenge ಎಂದು ಕರೆಯಲಾಗುತ್ತದೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆ ಹಸು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಮಹಿಳೆಯ ಪತಿಯನ್ನು ಗುರುತಿಸಿ ಎಂಬ ಬರಹದೊಂದಿಗೆ ಶೇರ್ ಮಾಡಿಕೊಳ್ಳಲಾಗುತ್ತಿದೆ. ಫೋಟೋದಲ್ಲಿ ಮಹಿಳೆ ಯಾರನ್ನು ಹುಡುಕುತ್ತಿರುವಂತೆ ಬಿಡಿಸಲಾಗಿದೆ. ಬಹುಶಃ ಆಕೆ ತನ್ನ ಪತ್ನಿಯ ಹುಡುಕಾಟದಲ್ಲಿದ್ದಂತೆ ಕಾಣಿಸುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನೀವು ಸಹ ಫೋಟೋದಲ್ಲಿ ಮಹಿಳೆಯ ಪತಿಯನ್ನು ಹುಡುಕಬಹುದು ಎಂದು ಕಮೆಂಟ್ ಮಾಡಲಾಗಿದೆ.
ವೈರಲ್ ಆಗುತ್ತಿರುವ ಫೋಟೋವನ್ನು br4inteaserhub ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ಈ ಫೋಟೋದಲ್ಲಿ ಮಹಿಳೆ ಪತಿಯನ್ನು ಹುಡುಕೋದು ಸುಲಭವಲ್ಲ. ವೈರಲ್ ಆಗಿರುವ ಫೋಟೋವನ್ನು ಉಲ್ಟಾ ಮಾಡಿ ನೋಡಿದಾಗ ಹಸುವಿನ ಮೇಲೆ ವ್ಯಕ್ತಿಯ ಚಿತ್ರವಿರೋದನ್ನು ಗಮನಿಸಬಹುದು. ಹಸುವಿನ ಮುಖದ ಮೇಲೆ ಎರಡು ಕೊಂಬಿನ ನಡುವೆಯೂ ಒಂದು ವ್ಯಕ್ತಿಯ ಫೋಟೋ ಇರೋದನ್ನು ಗಮನಿಸಬಹುದು.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದು ನಿಮ್ಮ ಮನಸ್ಸಿನ ಅಂತರಾಳದ ಗುಣ ಹೇಳುತ್ತೆ!
Optical Illusion Challenge ಫೋಟೋ ಎಂದರೇನು?
ನಮ್ಮ ಮಾನಸಿಕ ಆರೋಗ್ಯ ಹಾಗೂ ನಮ್ಮ ಮನಸ್ಸಿನ ಭಾವ ಹೇಗೆ ಎಂದು ನಾವೇ ತಿಳಿದುಕೊಳ್ಳಬಹುದು. ನಾವಾಡುವ ಪದಗಳು, ನೋಡುವ ಬಗೆ, ಜೀವನಶೈಲಿಯ ಮೇಲೆ ಜನರು ನಮ್ಮನ್ನು ಈ ವ್ಯಕ್ತಿ ಅಥವಾ ಮಹಿಳೆ ಹೇಗೆ ಎಂದು ಅಂದಾಜಿಸುತ್ತಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆ ಅಂತಹ ಫೋಟೋಗಳು ವೈರಲ್ ಆಗುತ್ತಿರುತ್ತವೆ.
ಈ ಫೋಟೋಗಳು ಹಲವು ಚಿತ್ರಗಳನ್ನು ಒಳಗೊಂಡಿರುತ್ತವೆ. ಹಲವು ಫೋಟೋಗಳನ್ನು ಒಳಗೊಂಡ ಚಿತ್ರ ಇದಾಗಿರುತ್ತದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಲ್ಲಿ ಅಡಗಿರುವ ಫೋಟೋಗಳು ಗೋಚರಿಸುತ್ತವೆ. ನಾವು ಮೊದಲು ಯಾವ ವಸ್ತುವನ್ನು ನೋಡುತ್ತೇವೆ ಎಂಬುದರ ಮೇಲೆ ನಮ್ಮ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತು ಮಾಡದಿದ್ದರೂ ಇಂತಹ ಫೋಟೋಗಳು ಸೋಶಿಯಲ್ ಮೀಡಿಯಾಲದಲ್ಲಿ ವೈರಲ್ ಆಗುತ್ತಿರುತ್ತವೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದು ನಿಮ್ಮ ಮನಸ್ಸಿನ ಅಂತರಾಳದ ಗುಣ ಹೇಳುತ್ತೆ!