Asianet Suvarna News Asianet Suvarna News

ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದು ನಿಮ್ಮ ಮನಸ್ಸಿನ ಅಂತರಾಳದ ಗುಣ ಹೇಳುತ್ತೆ!

ಈ ಚಿತ್ರದಲ್ಲಿ ಎರಡು ಪೋಟೋಗಳಿವೆ.  ಈ ಫೋಟೋದ ಮೂಲಕ ನೀವು ಅತಿಯಾಗಿ  ಯೋಚಿಸುವ ಗುಣ  ಹೊಂದಿದ್ದೀರಾ ಅಥವಾ ಹಗಲಗನಸು ಕಾಣುವ ಗುಣ ಇದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.

Optical Illusion Test What You See First in this image mrq
Author
First Published Aug 30, 2024, 9:37 PM IST | Last Updated Aug 30, 2024, 9:37 PM IST

ಬೆಂಗಳೂರು: ಆಪ್ಟಿಕಲ್ ಇಲ್ಯೂಸನ್ ಚಿತ್ರಗಳು ತುಂಬಾ ವೈರಲ್ ಆಗುತ್ತಿರುತ್ತವೆ. ಈ  ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಮೆದುಳಿಗೆ ಕೆಲಸ ಕೊಡಬೇಕಾಗುತ್ತದೆ. ಇಂತಹ ಚಿತ್ರಗಳು ವಾಸ್ತವಗಿಂತ ಭಿನ್ನವಾಗಿರುತ್ತವೆ. ಇಂತಹ ಫೋಟೋ ಅಥವಾ ಪೇಟಿಂಗ್‌ಗಳನ್ನು ಭ್ರಮೆ ಚಿತ್ರಗಳು (Optical Illusion) ಅಂತ ಕರೆಯಲಾಗುತ್ತದೆ. ಈ ಚಿತ್ರಗಳು ವಿವಿಧ ಬಣ್ಣಗಳಿಂದ ಕೂಡಿರುತ್ತವೆ. ಈ ಫೋಟೋಗಳನ್ನು ವ್ಯಕ್ತಿತ್ವ ವಿಕಸನ ಪರೀಕ್ಷೆಗಾಗಿ ಬಳಕೆ ಮಾಡಿಕೊಳ್ಳಲಗುತ್ತದೆ  ಎಂದು ಹೇಳಲಾಗುತ್ತದೆ. ಸ್ವತಃ ನಾವೇ ಈ ಚಿತ್ರಗಳ ಮೂಲಕ ಮನಸ್ಸಿನ ಅಂತಾರಳವನ್ನು ತಿಳಿದುಕೊಳ್ಳಬಹುದು.

ಆಪ್ಟಿಕಲ್ ಭ್ರಮೆ ಚಿತ್ರಗಳು ತುಂಬಾನೇ ಇಂಟರೆಸ್ಟಿಂಗ್  ಮತ್ತು ಕಾಮಿಡಿಯಾಗಿಯೂ ಇರುತ್ತವೆ. ಈ ಚಿತ್ರದಲ್ಲಿಯ ರಹಸ್ಯಗಳನ್ನು ತಿಳಿಯಲು ಜನರು ಅತ್ಯಂತ ಕುತೂಹಲ ಹೊಂದಿರುತ್ತಾರೆ. ಇಂತಹ ಫೋಟೋಗಳಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳಿರುತ್ತವೆ. ಇವುಗಳಲ್ಲಿನ ಚಿತ್ರ ಹುಡುಕೋದರಿಂದ ಮೆದುಳಿನ ವಿಕಸನ ಉಂಟಾಗುತ್ತದೆ ಎಂದು ಹೇಲಾಗುತ್ತದೆ. ಈ ಚಿತ್ರದಲ್ಲಿ ನಿಮ್ಮ ಕಣ್ಣುಗಳಿಗೆ ಕಾಣುವ ಮೊದಲ ಆಕೃತಿ ಅದು ನಿಮ್ಮಗಳ ಮನಸ್ಸು ಹೇಗೆ ಎಂಬದನ್ನು ವಿವರಿಸಬಹುದಂತೆ. ಇಂದು ನಾವು ನಿಮಗೆ ತೋರಿಸುತ್ತಿರುವ ಈ ಪಟದಲ್ಲಿ ಎರಡು ಚಿತ್ರಗಳಿವೆ. ದೂರದಿಂದ ಗಮನಿಸಿದ್ರೆ ನದಿ ಹಾಗೂ ಅದರ ಪಕ್ಕದಲ್ಲಿಯ ದೊಡ್ಡ ಮರ ಕಾಣಿಸುತ್ತದೆ. 

ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಜೋಡಿ ಹಾಗೂ ಮಗು ಕಾಣಿಸುತ್ತದೆ. ಒಂದು ವೇಳೆ ಮೊದಲು ನಿಮಗೆ ಮಗು ಕಾಣಿಸಿದರೆ ಒಂದರ್ಥ. ಆದ್ರೆ ಅದೇ ಚಿತ್ರದಲ್ಲಿರುವ ಜೋಡಿ ಕಾಣಿಸಿದಾಗ ಅರ್ಥ ಸಂಪೂರ್ಣ ಬೇರೆಯಾಗಿರುತ್ತದೆ. ಈ ಎರಡು ಚಿತ್ರಗಳು ಏನು ಹೇಳುತ್ತೆ ಎಂಬುದರ ಮಾಹಿತಿ ಇಲ್ಲಿದೆ. 

ಪೋಟೋದಲ್ಲಿ ಫಸ್ಟ್ ನಿಮಗೇನ್ ಕಾಣ್ಸುತ್ತೆ ನೋಡಿ, ನೀವ್‌ ಯಾವ ರೀತಿಯ ಸಂಗಾತೀನ ಇಷ್ಟಪಡ್ತೀರಾ ತಿಳ್ಕೊಳ್ಳಿ!

1.ಮೊದಲು ಮಗು ಕಾಣಿಸುತ್ತಿದೆಯಾ?
ಒಂದು ವೇಳೆ ನಿಮಗೆ ಚಿತ್ರದಲ್ಲಿ ಮಗು ಕಾಣಿಸಿದ್ರೆ ನೀವು ಅತಿಯಾಗಿ ಯೋಚಿಸುವ ಗುಣವನ್ನು ಹೊಂದಿರುತ್ತೀರಿ ಎಂದರ್ಥ. ನೀವು ಜೀವನದಲ್ಲಿ ಎದುರಾಗುವ ಎಲ್ಲಾ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುತ್ತೀರಿ. ಯಾವುದೇ  ಕೆಲಸವಾದರೂ ನೀವು ಸಂಪೂರ್ಣವಾಗಿ ಶ್ರಮ ಹಾಕುತ್ತೀರಿ. ಆದ್ರೆ ನೀವು ಕಟು ವಿಮರ್ಶಕರಾಗಿದ್ದು, ಮನಸ್ಸಿಗೆ ತೋಚಿದ್ದನ್ನು ನೇರವಾಗಿಯೇ ಹೇಳುವದರಿಂದ ಎಲ್ಲರಿಗೂ ಸ್ನೇಹಿತರಾಗಿರಲು ಸಾಧ್ಯವಿಲ್ಲ. ನೀಡಲಾಗಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿರ್ವಹಿಸುವ ಗುಣ ನಿಮ್ಮದಾಗಿರುವ ಕಾರಣ, ಜನರು ನಿಮ್ಮ ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ನಿಮ್ಮತ್ತ ಬರುತ್ತಾರೆ.

2.ನಿಮಗೆ ಮೊದಲು ಜೋಡಿ ಕಾಣಿಸಿದೆಯಾ?
ನಿಮಗೆ ಚಿತ್ರದಲ್ಲಿ ಜೋಡ/ದಂಪತಿ ಕಾಣಿಸಿದರೆ ನೀವು ಆಳವಾದ ಮತ್ತು ಅರ್ಥಪೂರ್ಣವಾಗಿ ಸಂಬಂಧಗಳನ್ನು ನಿರ್ವಹಿಸುತ್ತಾರೆ. ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಗುಣ ನಿಮ್ಮದಾಗಿರುವ ಕಾರಣ ಕುಟುಂಬದಲ್ಲಿ ನೆಚ್ಚಿನ ವ್ಯಕ್ತಿಯಾಗಿರುತ್ತೀರಿ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನೀವು ಎಲ್ಲರಿಗೂ ಇಷ್ಟವಾಗುತ್ತೀರಿ. ಆದ್ರೆ ಇವರು ಹಗಲುಗನಸು ಕಾಣುತ್ತಾ ಹೆಚ್ಚು ಸಮಯ ಕಳೆಯುತ್ತಿರುತ್ತೀರಿ.

ಈ ಫೋಟೋದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದು ನಿಮ್ಮ ವ್ಯಕ್ತಿತ್ವ ತೋರಿಸುವ ಚಿತ್ರ!

Latest Videos
Follow Us:
Download App:
  • android
  • ios