Asianet Suvarna News Asianet Suvarna News

ಅರವತ್ತರ ಅರಳುಮರಳಲ್ಲ, ಇದು ಅಲ್ಜೈಮರ್‌!

ವಿಶ್ವದಲ್ಲಿ ಪ್ರತಿ ಮೂರು ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿಗೆ ಡೆಮೆನ್ಷಿಯಾ ಇರುವುದು ಪತ್ತೆಯಾಗುತ್ತದೆ. ಡೆಮೆನ್ಷಿಯಾ ಇಂಡಿಯಾ 2010ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೂವತ್ತೇಳು ಲಕ್ಷ ಜನರಿಗೆ ಡೆಮೆನ್ಷಿಯಾ ಇರಬಹುದೆಂದು ಅಂದಾಜು ಮಾಡಲಾಗಿದೆ. 2030ರ ಹೊತ್ತಿಗೆ ಇದರ ಸಂಖ್ಯೆ ದುಪ್ಪಟ್ಟಾಗಬಹುದು. ಡೆಮೆನ್ಷಿಯಾ ಕಾಯಿಲೆಗಳಲ್ಲಿ ಹೆಚ್ಚಾಗಿರುವುದು ಅಲ್ಜೈಮರ್‌. 

on world Alzheimers day September 21 doctors list ways of prevention
Author
Bengaluru, First Published Sep 23, 2019, 1:22 PM IST

ವಿಶ್ವದಲ್ಲಿ ಪ್ರತಿ ಮೂರು ಸೆಕೆಂಡಿಗೊಮ್ಮೆ ಒಬ್ಬ ವ್ಯಕ್ತಿಗೆ ಡೆಮೆನ್ಷಿಯಾ ಇರುವುದು ಪತ್ತೆಯಾಗುತ್ತದೆ. ಡೆಮೆನ್ಷಿಯಾ ಇಂಡಿಯಾ 2010ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೂವತ್ತೇಳು ಲಕ್ಷ ಜನರಿಗೆ ಡೆಮೆನ್ಷಿಯಾ ಇರಬಹುದೆಂದು ಅಂದಾಜು ಮಾಡಲಾಗಿದೆ. 2030 ರ ಹೊತ್ತಿಗೆ ಇದರ ಸಂಖ್ಯೆ ದುಪ್ಪಟ್ಟಾಗಬಹುದು. ಡೆಮೆನ್ಷಿಯಾ ಕಾಯಿಲೆಗಳಲ್ಲಿ ಹೆಚ್ಚಾಗಿರುವುದು ಅಲ್ಜೈಮ​ರ್.

ಕ್ರಿ.ಶ. 1906ರ ಇಸವಿಯಲ್ಲಿ ಅಲಾಯಿಸ್‌ ಅಲ್ಜೈಮರ್‌ಎಂಬಾತ ಈ ಕಾಯಿಲೆಯ ಬಗ್ಗೆ ಮೊಟ್ಟಮೊದಲ ಬಾರಿಗೆ ತಿಳಿಸಿದ್ದನು. ಮೆದುಳಿನಲ್ಲಿ ಜೀವಕೋಶಗಳ ನಡುವೆ ಆಮೆಲೈಡ್‌ ಪ್ಲಾಕ್ಸ್‌ ಹಾಗೂ ನರಕೋಶಗಳ ಒಳಗೆ ಟಾವು ಪ್ರೊಟೀನ್‌ಗಳು ಅಂಟಿಕೊಂಡು ಜೀವಕೋಶಗಳಿಗೆ ಹಾನಿಮಾಡುತ್ತಾ ಅವುಗಳು ನಿಷ್ಕಿ್ರಯಗೊಂಡು, ಸಿಗ್ನಲ್‌ಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ತೊಂದರೆಯಾಗುತ್ತದೆ.

ರೆಡ್ ಮೀಟ್ ತಿಂದ್ರೆ ಕಿಡ್ನಿಯಲ್ಲಿ ಕಲ್ಲುಂಟಾಗುತ್ತಾ?

ಮುಖ್ಯವಾಗಿ ಕೆಲವು ಪ್ರೊಟೀನ್‌ಗಳನ್ನು ಮೆದುಳು ಹಾಗೂ ದೇಹವು ಬೇಡವೆಂದು ಹೊರಹಾಕುತ್ತದೆ. ಆದರೆ ಈ ಅಲ್ಜೈಮ​ರ್‍ಸ್ ಕಾಯಿಲೆಗಳಲ್ಲಿ ಈ ಪ್ರೊಟಿನ್‌ಗಳು ಅಸಹಜವಾಗಿ ರೂಪಾಂತರಗೊಂಡು, ಒಂದಕೊಂಡು ಅಂಟಿಕೊಂಡು ಹಾಗೂ ನಂಜಿನ ರೀತಿಯಲ್ಲಿ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಇವುಗಳು ಅಂಟಿಕೊಳ್ಳದಂತೆ ಅಥವಾ ರೂಪಾಂತರಗೊಳ್ಳದಂತೆ ಮಾಡುವ ಔಷಧಗಳು ಇನ್ನೂ ಸೃಷ್ಟಿಯಾಗಿಲ್ಲ.

ತಿಂದಿದ್ದು ಉಂಡಿದ್ದು ಮರೆಯುತ್ತೆ

ಅಲ್ಪ ಸಮಯದ ಅನುಭವಗಳು ಹಾಗೂ ಕಲಿಕೆ ಮರೆತು ಹೋಗುವುದು.ಉದಾಹರಣೆಗೆ ಅಂದು ಬೆಳಿಗ್ಗೆ ಏನು ತಿಂಡಿ ತಿಂದೆ ಅನ್ನುವುದು ಅಥವಾ ಹೇಗೆ ತಾನು ಮನೆಯಿಂದ ಆಸ್ಪತ್ರೆಗೆ ಬಂದೆ ಎನ್ನುವುದು ಮರೆತುಹೋಗುತ್ತದೆ. ಆದರೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಘಟನೆ ಚೆನ್ನಾಗಿ ನೆನೆಪಿನಲ್ಲಿರಬಹುದು. ಇದನ್ನುಅರವತ್ತರ ಅರಳು ಮರಳು ಎಂದು ನಿರ್ಲಕ್ಷಿಸಿ ಬಿಡುತ್ತಾರೆ. ಕ್ರಮೇಣವಾಗಿಗೊತ್ತಿರುವ ಜಾಗಗಳಲ್ಲಿ ಕಳೆದು ಹೋಗಿಬಿಡುವುದು, ಮಾತುಗಳಲ್ಲಿ ತೊಂದರೆ, ಶಬ್ದಗಳು ನೆನಪಿಗೆ ಬರದೆ ಇರುವುದು, ಜನರನ್ನು, ಜಾಗವನ್ನುಗುರುತು ಹಿಡಿಯದಿರುವುದು ಶುರುವಾಗುತ್ತದೆ.

ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ...

ಒಂದು ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬ ಕೌಶಲ್ಯಕ್ಷೀಣಿಸಬಹುದು, ಹಾಗೂ ವಿಚಾರಶಕ್ತಿಯ ಹೋಗಿಬಿಡಬಹುದು.ತಮ್ಮ ಸಂಬಂಧಿಕರ ಹಾಗೂ ತಮ್ಮ ಬಗ್ಗೆ ಗುರುತುಹೋಗಿಬಿಡಬಹುದು. ಹೀಗೆ ಸ್ನಾನ ಮಾಡುವುದು, ಬಟ್ಟೆಹಾಕಿಕೊಳ್ಳುವ ಕೌಶಲ್ಯ, ಲೆಕ್ಕ ಹಾಕುವುದು, ಕೋಪ, ನಿದ್ರಾಹೀನತೆ, ತಿರುಗಾಡುವುದು, ಬಯ್ಯುವುದು, ಹೆದರಿಕೊಳ್ಳುವುದು ಹೀಗೆ ನಡವಳಿಕೆಯಲ್ಲಿ ತೊಂದರೆಯುಂಟಾಗುತ್ತದೆ. ಆಗ ತಜ್ಞ ವೈದ್ಯರ ಬಳಿ ಕರೆತರುತ್ತಾರೆ.

ಮೊದಲ ಹಂತದಲ್ಲೇ ವೈದ್ಯರಲ್ಲಿ ಕರೆತನ್ನಿ

ಆದರೆ ಈ ಕಾಯಿಲೆಯ ಮೊದಲಿನ ಲಕ್ಷಣದಲ್ಲಿಯೇ ವೈದ್ಯರಲ್ಲಿ ಸಲಹೆ ಪಡೆದು ಕಾಯಿಲೆ ಇರುವುದನ್ನು ಖಾತ್ರಿ ಮಾಡಿಕೊಂಡರೆ ಉತ್ತಮ. ಅಲ್ಪ ಲಕ್ಷಣಗಳಲ್ಲಿ ಮೆದುಳಿಗೆ ವ್ಯಾಯಾಮ ನೀಡುವ ಕಾಗ್ನಿಟವ್‌ ಸ್ಟಿಮುಲೇಷನ್‌ ತೆರಪಿ ಅಥಾವ ಕಾಗ್ನಿಟಿವ್‌ ರಿಟ್ರೈನಿಂಗ್‌ ಅಂದರೆ ಮೆದುಳಿಗೆ ವ್ಯಾಯಾಮ ಇತ್ಯಾದಿ ಥೆರಪಿ ನೀಡಬಹುದು. ಇದರಿಂದ ನೆನಪಿನ ಮತ್ತು ಇತರೆ ಕಾರ್ಯ ಶಕ್ತಿ ಚುರುಕುಗೊಳ್ಳುತ್ತದೆ.

ಪರಸ್ಪರ ಚರ್ಚಿಸಬಹುದು

ಈ ಸಮಸ್ಯೆ ಇರುವ ಬೇರೆ ಬೇರೆ ರೋಗಿಗಳ ಮನೆಯವರು ಒಟ್ಟಾಗಬಹುದು. ಗುಂಪು ಚರ್ಚೆಯಿಂದ ಸಮಸ್ಯೆಯ ವಿವಿಧ ಆಯಾಮಗಳು ತಿಳಿಯುತ್ತವೆ. ಇದರಿಂದ ಮನೆಯವರ ಮಾನಸಿಕ ಒತ್ತಡವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಚಿಕಿತ್ಸೆ ಹೇಗೆ?

ಕಿವಿ ಕೇಳದೇ ಇರುವುದು ಅಥವಾ ದೃಷ್ಟಿದೋಷಗಳನ್ನು ಸರಿಪಡಿಸಬೇಕು.ರಾತ್ರಿ ನಿದ್ರೆ ಸರಿಪಡಿಸಲು ಪ್ರಯತ್ನಿಸಬೇಕು. ಹಳೆಯ ನೆನಪುಗಳ ಸಂಬಂಧಪಟ್ಟಸಂಗೀತ ಕೇಳಿದರೇ ಕೆಲವೊಮ್ಮೆ ವ್ಯಕ್ತಿಯ ನಡವಳಿಕೆ ಸುಧಾರಿಸಿ, ಆತಂಕ ಕಡಿಮೆಯಾಗುತ್ತದೆ.

ಅತಿರೇಕಕ್ಕೆ ಹೋದಾಗ ಅದಕ್ಕೆ ಔಷಧಗಳನ್ನು ಕೊಡಬೇಕಾಗುತ್ತದೆ. ಡೆಮೆನ್ಷಿಯಾ ಉಂಟಾದಾಗ 24 ಗಂಟೆ ನರ್ಸ್‌ಗಳ ಆರೈಕೆ ಬೇಕಾಗುತ್ತದೆ. ಈ ಕಾಯಿಲೆಯ ಪ್ರಭಾವ ಕ್ರಮೇಣವಾಗಿ ವ್ಯಕ್ತಿಯ ಮೇಲೆ ಹೆಚ್ಚಾಗುತ್ತ ಹೋಗುತ್ತದೆ.

ನೀವು ಕಡೆಗಣಿಸಿರಬಹುದಾದ ಈ ಲಕ್ಷಣಗಳು ಕ್ಯಾನ್ಸರಿನ ಸೂಚನೆಯೂ ಆಗಿರಬಹುದು!

ರಕ್ತನಾಳ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಖಿನ್ನತೆ, ವ್ಯಾಯಮವಿಲ್ಲದಿರುವ ವ್ಯಕ್ತಿಗಳಿಗೆ ಈ ಸಮಸ್ಯೆ ಬರುವ ಅಪಾಯ ಹೆಚ್ಚು. ಹಾಗಾಗಿ ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಮೆದುಳು ಚುರುಕುಗೊಳಿಸಲು ಮನೆ ಮಂದಿ ಸಂಬಂಧಿಕರೊಂದಿಗೆ ಬೆರೆತು ಒಂಟಿತನ ಕಡಿಮೆ ಮಾಡಿಕೊಳ್ಳಬೇಕು.

-  ಡಾ. ವಿಜಯಕುಮಾರ್‌ ಹರಬಿಶೆಟ್ಟರ್‌,

ಮನೋವೈದ್ಯರು, ನೈಟಿಂಗೆಲ್ಸ್‌ ಮೆಡಿಕಲ್‌ ಟ್ರಸ್ಟ್‌

Follow Us:
Download App:
  • android
  • ios