ರೆಡ್ ಮೀಟ್ ತಿಂದ್ರೆ ಕಿಡ್ನಿಯಲ್ಲಿ ಕಲ್ಲುಂಟಾಗುತ್ತಾ?
ಕೆಲ ಆಹಾರಗಳು ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತವೆ. ಅವು ಯಾವುವೆಂದು ತಿಳಿದುಕೊಂಡು ಮಿತಿಯಲ್ಲಿ ಸೇವಿಸಿ.
ಕಿಡ್ನಿ ಸ್ಟೋನ್ ಈ ದಿನಗಳಲ್ಲಿ ಬಹುತೇಕರ ಸಾಮಾನ್ಯ ಸಮಸ್ಯೆ ಎನಿಸಿದೆ. ಮಿನರಲ್ ಹಾಗೂ ಜೈವಿಕ ವಸ್ತುಗಳು ಒಟ್ಟಾಗಿ ಪುಟ್ಟ ಪುಟ್ಟ ಕಲ್ಲಿನ ರೂಪ ತಳೆದು ಕಿಡ್ನಿಯಲ್ಲಿ ಶೇಖರವಾಗುವುದನ್ನು ಕಿಡ್ನಿ ಸ್ಟೋನ್ ಎನ್ನುತ್ತೇವೆ. ಕಿಡ್ನಿ ಸ್ಟೋನ್‌ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.
ಆದರೆ, ಸಾಮಾನ್ಯವಾಗಿ ಪದೇ ಪದೆ ಮೂತ್ರಕ್ಕೆ ಹೋಗುವುದು, ಮೂತ್ರದಲ್ಲಿ ರಕ್ತ, ಸಂಕಟ, ಜ್ವರ, ಚಳಿ ಬರುವುದು ಹಾಗೂ ಅತಿಯಾದ ಸುಸ್ತು ಕಿಡ್ನಿ ಸ್ಟೋನ್ ಇರುವವರಲ್ಲಿ ಕಂಡುಬರುತ್ತದೆ. ಕಿಡ್ನಿಯಲ್ಲಿ ಕಲ್ಲಾಗಲು ಸಾಮಾನ್ಯ ಕಾರಣಗಳೆಂದರೆ ನೀರು ಕಡಿಮೆ ಕುಡಿಯುವುದು, ಅತಿಯಾದ ಆಲ್ಕೋಹಾಲ್ ಸೇವನೆ, ಬೊಜ್ಜು, ಅನುವಂಶೀಯತೆ, ಜೀರ್ಣಕ್ರಿಯೆ ಸಮಸ್ಯೆಗಳು ಹಾಗೂ ಸರಿಯಿರದ ಡಯಟ್. ಕೆಲವೊಂದು ಆಹಾರಗಳು ಕೂಡಾ ಕೆಮಿಕಲ್‌ಗಳನ್ನು ಹೊಂದಿದ್ದು, ಕಿಡ್ನಿಯಲ್ಲಿ ನೋವುಂಟು ಮಾಡುವ ಕಲ್ಲಾಗಲು ಕಾರಣವಾಗುತ್ತವೆ. ಅವೆಂದರೆ,
ಕಿಡ್ನಿಯಲ್ಲಿ ಕಲ್ಲುಗಳಿಗೇನು ಕೆಲಸ?
ರೆಡ್ ಮೀಟ್
ರೆಡ್ ಮೀಟ್‌ನಲ್ಲಿ ಪ್ರೋಟೀನ್ ಅಧಿಕವಾಗಿದ್ದು, ಯೂರಿಕ್ ಆ್ಯಸಿಡ್ ಹೆಚ್ಚಾಗಿರುವ ಕಾರಣ ಇದರ ಅತಿಯಾದ ಸೇವನೆ ಕಿಡ್ನಿ ಸ್ಟೋನ್‌ಗೆ ಕಾರಣವಾಗಬಹುದು.
ಕಾರ್ಬೋನೇಟೆಡ್ ಡ್ರಿಂಕ್ಸ್
ಸೋಡಾ ಹಾಗೂ ಇತರೆ ಎನರ್ಜಿ ಡ್ರಿಂಕ್‌ಗಳನ್ನು ದಿನವೂ ಕುಡಿವ ಅಭ್ಯಾಸ ಇದೆಯೇ? ಹಾಗಿದ್ದರೆ ನಿಮಗೆ ಕಿಡ್ನಿ ಸ್ಟೋನ್ ಆಗುವ ಅಪಾಯ ಹೆಚ್ಚು. ಈ ಕೋಲಾಗಳಲ್ಲಿರುವ ಫಾಸ್ಫೋರಿಕ್ ಆ್ಯಸಿಡ್ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ವರದಿ ಮಾಡಿದೆ. ಅಲ್ಲದೆ, ಇದು ಕಿಡ್ನಿಗೆ ಸಂಬಂಧಿಸಿದ ಇತರೆ ಮಾರಕ ಕಾಯಿಲೆಗಳಿಗೂ ಕಾರಣವಾಗುತ್ತದೆ.
ರಿಫೈನ್ಡ್ ಕಾರ್ಬೋಹೈಡ್ರೇಟ್ಸ್
ಅತಿಯಾಗಿ ರಿಫೈನ್ ಮಾಡಿದ ಕಾರ್ಬೋಹೈಡ್ರೇಟ್ ಮೂಲಗಳಾದ ಬಿಳಿಯ ಅಕ್ಕಿ, ಸಕ್ಕರೆ ಹಾಗೂ ಹಿಟ್ಟುಗಳು ಹೆಚ್ಚಿನ ಮಟ್ಟದ ಇನ್ಸುಲಿನ್ ಉತ್ಪತ್ತಿ ಮಾಡುತ್ತವೆ. ಇನ್ಸುಲಿನ್ ಹೆಚ್ಚಾದಾಗ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುತ್ತದೆ. ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ.
ಕ್ಯಾನ್ಸರ್‌ಗೆ ಕೀಮೋಥೆರಪಿಗಿಂತ ಶುಂಠಿ ಟೀ ಬೆಸ್ಟ್?!
ಕೆಫಿನ್
ಕೆಫಿನ್ ಹೊಂದಿದ ಕಾಫಿ, ಟೀಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರದಲ್ಲಿ ಕ್ಯಾಲ್ಶಿಯಂ ಬಿಡುಗಡೆ ಹೆಚ್ಚಾಗುತ್ತದೆ. ಇದು ಕಿಡ್ನಿಯಲ್ಲಿ ಕಲ್ಲಾಗಲು ದಾರಿ ಮಾಡಿಕೊಡುತ್ತದೆ. ಕೆಫಿನ್‌ನಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದು ಕೂಡಾ ಕಿಡ್ನಿ ಸ್ಟೋನ್‌ಗೆ ಪ್ರಮುಖ ಕಾರಣ.
ಆರ್ಟಿಫಿಶಿಯಲ್ ಸ್ವೀಟ್ನರ್ಸ್
ಆರ್ಟಿಫಿಶಿಯಲ್ ಸ್ವೀಟ್ನರ್ಸ್‌ಗಳನ್ನು ಪ್ರತಿದಿನ ಬಳಸುವುದರಿಂದ ಕಿಡ್ನಿಯ ಕೆಲಸವನ್ನೇ ದಿಕ್ಕೆಡಿಸಿದಂತಾಗುವುದು. ಆರ್ಟಿಫಿಶಿಯಲ್ ಸ್ವೀಟ್ನರ್ಸ್‌ಗಳನ್ನು ಬಳಸುವವರಲ್ಲಿ ಕಿಡ್ನಿ ಕಲ್ಲುಗಳು ಸಾಮಾನ್ಯ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
ಆಲ್ಕೋಹಾಲ್
ಅತಿಯಾದ ಮದ್ಯ ಸೇವನೆಯು ಕಿಡ್ನಿಯನ್ನಷ್ಟೇ ಅಲ್ಲ ಲಿವರ್‌ಗೆ ಕೂಡಾ ಹಾನಿಯುಂಟು ಮಾಡುತ್ತದೆ. ಮದ್ಯ ಸೇವನೆಯ ಸಾಮಾನ್ಯ ಅಡ್ಡ ಪರಿಣಾಮ ಡಿಹೈಡ್ರೇಶನ್. ಡಿಹೈಡ್ರೇಶನ್ ಹೆಚ್ಚಾದರೆ ಕಿಡ್ನಿ ಸ್ಟೋನ್ ಕಟ್ಟಿಟ್ಟ ಬುತ್ತಿ.
ಉಪ್ಪು
ಸೋಡಿಯಂನ ಅತಿಯಾದ ಸೇವನೆಯು ಬಿಪಿ ಹೆಚ್ಚಿಸುತ್ತದೆ, ಹೃದಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಹಾಗೂ ಕಿಡ್ನಿ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ಹಾಗಾಗಿ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲಾಗದಂತೆ ಮುಂಜಾಗ್ರತೆ ವಹಿಸಬಹುದು.
ನೀವೇನು ಮಾಡಬಹುದು?
ಮೂತ್ರದಲ್ಲಿ ರಕ್ತ: ಕ್ಯಾನ್ಸರ್ ಸಹ ಆಗಿರಬಹುದು
- ಪ್ರೊಸೆಸ್ಡ್ ಆಹಾರಗಳಲ್ಲಿ ಉಪ್ಪು, ಸಕ್ಕರೆಯನ್ನು ಅತಿಯಾಗಿ ಬಳಸಿರುತ್ತಾರೆ. ಅಲ್ಲದೆ ಇವು ಬಹಳ ದಿನ ಬರುವಂತೆ ಮಾಡಲು ಫಾಸ್ಫರಸ್ ಬಳಸಲಾಗಿರುತ್ತದೆ. ಕ್ಯಾನ್ಡ್ ಸೂಪ್, ಫ್ರೆಂಚ್ ಫ್ರೈಸ್, ಪ್ರೊಸೆಸ್ಡ್ ಮೀಟ್ ಹಾಗೂ ಇತರೆ ಉಪ್ಪಿನ ಪ್ಯಾಕೇಜ್ಡ್ ಫುಡ್ ಸೇವನೆಗೆ ಕಡಿವಾಣ ಹಾಕಿ. ಪ್ರೊಸೆಸ್ಡ್ ಫುಡ್ ಸೇವನೆ ಮಿತಿಯಾಗಿಸಿ. ಪೂರ್ಣ ಕೈಬಿಟ್ಟರೂ ಯಾವುದೇ ನಷ್ಟವಿಲ್ಲ.
- ಪ್ರತಿದಿನ ಕನಿಷ್ಠ 8ರಿಂದ 16 ಗ್ಲಾಸ್ ನೀರು ಕುಡಿಯಿರಿ. ಚೆನ್ನಾಗಿ ನೀರು ಕುಡಿಯುವುದರಿಂದ ಮಿನರಲ್ ಹಾಗೂ ಇತರೆ ಜೈವಿಕ ವಸ್ತುಗಳು ಕಿಡ್ನಿಯಲ್ಲಿ ಶೇಖರವಾಗದೆ ಮೂತ್ರದ ಮೂಲಕ ಹೊರ ಹೋಗುತ್ತವೆ.
- ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಉಪ್ಪು ಸೇವನೆ ಬೇಡ.
- ಆಲ್ಕೋಹಾಲ್ ಸೇವನೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಯಾವುದಕ್ಕೂ ಒಳ್ಳೆಯದಲ್ಲ. ಕೇವಲ ಕಿಡ್ನಿ ಸ್ಟೋನ್ ದೂರವಿಡುವುದಕ್ಕಾಗಿಯಲ್ಲ. ಆರೋಗ್ಯಯುತ ನೆಮ್ಮದಿಯ ಜೀವನಕ್ಕಾಗಿ ಆಲ್ಕೋಹಾಲ್ ದೂರವಿಡಿ.
- ಕಾರ್ಬೋನೇಟೆಡ್ ಡ್ರಿಂಕ್ಸ್ ಬದಲಿಗೆ ತಾಜಾ ಹಣ್ಣುಗಳ ಜ್ಯೂಸ್, ಎಳನೀರು, ಕಬ್ಬಿನಹಾಲನ್ನು ಸೇವಿಸಿ. ಸಕ್ಕರೆ ರಹಿತವಾಗಿ ಸೇವಿಸಿದರೆ ಮತ್ತೂ ಒಳ್ಳೆಯದು.
- ಕಾಫಿ ಟೀ ಅಭ್ಯಾಸದ ಬದಲಿಗೆ ಹಾಲು, ಕಷಾಯ, ಗ್ರೀನ್ ಟೀ ಮುಂತಾದವನ್ನು ರೂಢಿಸಿಕೊಳ್ಳುವುದೊಳಿತು.
- ನಿಮ್ಮ ದೇಹದ ತೂಕ ಮಿತಿ ಮೀರದಂತೆ ವ್ಯಾಯಾಮ ಹಾಗೂ ಡಯಟ್ ರೂಢಿಸಿಕೊಳ್ಳಿ.