ಸಂಗಾತಿಯನ್ನು ಮೋಸ ಮಾಡಲು ಸೆಕ್ಸ್ ಮಾತ್ರವಲ್ಲ, ಇನ್ನು ಕೆಲವು ಸಿಕ್ರೇಟ್ ಕಾರಣಗಳಿವೆ

First Published 24, Jan 2018, 5:34 PM IST
Not just sex 77Pc reveal the real reason they cheat on their partners
Highlights

ಅಮೆರಿಕಾದ ಸೆಕ್ಸ್ ಸಂಶೋಧನಾ ಪರಿಣಿತರು ಇತ್ತಿಚಿಗೆ ದಾಂಪತ್ಯ ಬೇರೆಯಾಗುವುದಕ್ಕೆ ಹಾಗೂ ಮೋಸ ಮಾಡುವುದಕ್ಕೆ  ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಿದ್ದು, ಅದರಲ್ಲಿ ಕಂಡುಬಂದ ಪ್ರಮುಖ ಅಂಶಗಳು ಇಂತಿವೆ

ದಾಂಪತ್ಯ ಜೀವನದಲ್ಲಿ ಹಲವು ಕಾರಣಗಳಿಗೆ ಒಡಕು ಮೂಡುವುದು ಸಹಜ. ಆದರೆ ಬಹುತೇಕ ಸಂದರ್ಭಗಳಲ್ಲಿ ಸೆಕ್ಸ್ ಕಾರಣವಾಗುತ್ತದೆ ಎಂದು ಮನೋವೈದ್ಯರು ಅಭಿಪ್ರಾಯ ಪಡುತ್ತಾರೆ. ಆದರೆ ಇಲ್ಲೊಂದು ವರದಿ ಸಂಗಾತಿಗಳು ತಮ್ಮನ್ನು ದೂರ ಮಾಡಿಕೊಳ್ಳಲು ಹಾಗೂ ಮೋಸ ಮಾಡಲು ಕಾಮತೃಪ್ತಿ ಮಾತ್ರವಲ್ಲದೆ ಇನ್ನು ಹಲವು ಬಹು ಮುಖ್ಯ ಕಾರಣಗಳಿವೆ ಎಂದು ತಿಳಿಸಿದೆ.

ಅಮೆರಿಕಾದ ಸೆಕ್ಸ್ ಸಂಶೋಧನಾ ಪರಿಣಿತರು ಇತ್ತಿಚಿಗೆ ದಾಂಪತ್ಯ ಬೇರೆಯಾಗುವುದಕ್ಕೆ ಹಾಗೂ ಮೋಸ ಮಾಡುವುದಕ್ಕೆ  ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಿದ್ದು, ಅದರಲ್ಲಿ ಕಂಡುಬಂದ ಪ್ರಮುಖ ಅಂಶಗಳು ಇಂತಿವೆ

1) ಅಕ್ರಮ ಸಂಬಂಧ: ಪ್ರೀತಿಸಿ ವಿವಾಹವಾಗಿರುವವರು, ಕುಟುಂಬ ಒಪ್ಪಿತ ಮದುವೆಯಾಗಿರುವರಲ್ಲಿ ಶೇ.77 ಮಂದಿ ತಮ್ಮ ದಾಂಪತ್ಯ ದೂರ ಮಾಡಲು ಅಕ್ರಮ ಸಂಬಂಧಗಳೆ ಪ್ರಮುಖ ಕಾರಣ. ತಾವು ತಮ್ಮ ಪ್ರೀತಿಯಿಂದ ಹೊರಗುಳಿಯಲು, ದೂರವಾಗಲು ಅಥವಾ ಮೋಸ ಮಾಡಲು ಅಕ್ರಮ ಸಂಬಂಧಗಳೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

2) ಕಾಮಾಸಕ್ತಿಯ ಕೊರತೆ: ನೈಜ ಪ್ರೀತಿಯಲ್ಲಿ ಕಾಮಸಕ್ತಿಯು ಪ್ರಮುಖವಾಗಿದ್ದು, ವಿವಿಧ ರೀತಿಯ ಕಾಮರೀತಿಯ ಸುಖಗಳನ್ನು ತಾವು ಬಯಸಲಿದ್ದು ಅದನ್ನು ಪೂರೈಸದ ಕಾರಣ ಬೇರೆಯವರಿಂದ ಪಡೆಯುತ್ತೇವೆ ಎಂದು ಹೇಳುತ್ತಾರೆ.

3) ನೈಜ ಪ್ರೀತಿಯ ಕೊರತೆ:  ತಮ್ಮ ಸಂಗಾತಿಗಳು ನಮ್ಮನ್ನು ನಿಜವಾಗಿ ಪ್ರೀತಿಸುವುದಿಲ್ಲ ಶೇ. 50 ಮಂದಿ ಅಭಿಪ್ರಾಯಪಡುತ್ತಾರೆ. ಅವರು ಮೇಲ್ನೋಟಕ್ಕೆ ನಮ್ಮ ಜೊತೆ ಚೆನ್ನಾಗಿರುವಂತೆ ನಟಿಸುತ್ತಾರೆ.  

4) ಸುಳ್ಳು, ವಂಚನೆ: ಸುಳ್ಳು ಹಾಗೂ ವಂಚನೆ ಮಾಡುವ ಕಾರಣದಿಂದ ತಾವು ಅವರಿಗೆ  ಮೋಸ ಮಾಡುತ್ತೇವೆ ಎಂದು ಶೇ.41 ಮಂದಿ ಹೇಳುತ್ತಾರೆ. ಮೋಸಕ್ಕೆ ಪ್ರತಿಯಾಗಿ ತಾವು ಅವರಿಗೆ ಮೋಸ ಮಾಡುತ್ತೇವೆ ಎನ್ನುವುದು ಇವರ ಹೇಳಿಕೆ.

5) ತಪ್ಪನ್ನು ಸಮರ್ಥಿಸಿಕೊಳ್ಳುವುದು: ನಾನು ಮದ್ಯಪಾನ, ಧೂಮಪಾನ ಮಾಡುತ್ತೇನೆ ಎಂದು ಹೇಳಿ ಸಮರ್ಥಿಸಿಕೊಳ್ಳುವುದು ಇಷ್ಟವಾಗದ ಕಾರಣ ದೂರವುಳಿಯುವುದಾಗಿ ಹೇಳುತ್ತಾರೆ.

ಮೋಸ ಮಾಡುವವರಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರು ಹಲವು ಸಂದರ್ಭಗಳಲ್ಲಿ ಪಾಲುದಾರರಾಗಿರುತ್ತಾರೆ' ಎಂದು ವರದಿ ತಿಳಿಸಿದೆ.

loader