Haunted Place: ಅಬ್ಬಾ..ಆ ಕಟ್ಟಡದೊಳಗೆ ಹೋದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ತಾರಂತೆ!

ಭಾರತ ವೈವಿಧ್ಯತೆಯ ದೇಶ. ಇಲ್ಲಿ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಭಾರತವು ತನ್ನ ಸಂಸ್ಕೃತಿ ಮತ್ತು ಪರಂಪರೆಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಕೆಲವು ಭಯಾನಕ ಸ್ಥಳಗಳೂ ಇವೆ. ಆ ಬಗ್ಗೆ ತಿಳಿಯೋಣ.

No one wants to go here not only at night, but also during the day Vin

ಆಹಾರ ಮತ್ತು ಜೀವನಶೈಲಿಗೆ ಹೆಸರುವಾಸಿಯಾದ ಭಾರತವು ವಿಚಿತ್ರ ಘಟನೆಗಳಿಗೆ ಹೆಸರುವಾಸಿಯಾದ ಕೆಲವು ಸ್ಥಳಗಳನ್ನು ಹೊಂದಿದೆ. ಜನರು ಸಾಮಾನ್ಯವಾಗಿ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಆದರೆ ಅತ್ಯದ್ಭುತ ಪ್ರವಾಸಿ ತಾಣಗಳನ್ನು ಹೊಂದಿರುವ ಭಾರತದಲ್ಲಿ ಅನೇಕ ಕುಖ್ಯಾತ ಸ್ಥಳಗಳಿವೆ ಎಂದು ನಿಮಗೆ ತಿಳಿದಿದೆಯೇ. ಪ್ರಪಂಚದಾದ್ಯಂತ ಇಂಥಾ ಭಯಾನಕ ಸ್ಥಳಗಳಿವೆ. ಅದು ಕಲ್ಪನೆಗೂ ಮೀರಿದ ಕೆಟ್ಟ ಶಕ್ತಿಯನ್ನು ಹೊಂದಿದೆ ಎಂದು ಜನರು ನಂಬುತ್ತಾರೆ. ಭಾರತದಲ್ಲಿರುವ ಅಂಥಾ ಕೆಲವು ಸ್ಥಳಗಳ ಬಗ್ಗೆ ನಾವು ಹೇಳುತ್ತೇವೆ.

ಭಂಗರ್ ಕೋಟೆ, ರಾಜಸ್ಥಾನ: ರಾಜಸ್ಥಾನದಲ್ಲಿರುವ ಭಂಗರ್ ಕೋಟೆಯು (Fort) ಭಾರತದ ಅತ್ಯಂತ ಭೀಕರ ಸ್ಥಳಗಳಲ್ಲಿ ಒಂದಾಗಿದೆ. ಭಂಗರ್ ನಗರದಲ್ಲಿ ನಿರ್ಮಿಸಲಾದ ಕೋಟೆಯ ಬಗ್ಗೆ ಜನರು ವಿಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ. ಪ್ರಾಚೀನ ಕಾಲದಲ್ಲಿ ಈ ಕೋಟೆಯು ತಾಂತ್ರಿಕನಿಂದ ಶಾಪಗ್ರಸ್ತವಾಗಿದೆ ಎಂದು ಹೇಳಲಾಗುತ್ತದೆ, ಇದರಿಂದಾಗಿ ಈ ಕೋಟೆಯು ಪಾಳುಬಿದ್ದಿದೆ. ಹೀಗಾಗಿ ಇಲ್ಲಿಗೆ ಹೋಗಲು ಜನರು ಭಯಪಡುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಯಾವುದೇ ಪ್ರವಾಸಿಗರು (Tourist) ಈ ಸ್ಥಳಕ್ಕೆ ಭೇಟಿ ನೀಡಲು ಇಷ್ಟಪಡುವುದಿಲ್ಲ.

ಗುಂಡಿಗೆ ಗಟ್ಟಿ ಇದೆಯಾ? ಹಾಗಿದ್ರೆ ಈ ಹಾಂಟೆಡ್‌ ತಾಣಕ್ಕೊಮ್ಮೆ ಹೋಗ್ ಬನ್ನಿ

ಅಗ್ರಸೇನ್ ಕಿ ಬೌಲಿ, ದೆಹಲಿ: ರಾಜಧಾನಿ ದೆಹಲಿಯ ಪ್ರಸಿದ್ಧ ಪ್ರವಾಸಿ ತಾಣ ಅಗ್ರಸೇನ್ ಕಿ ಬೌಲಿ ಕೂಡ ಭಾರತದ ಭಯಾನಕ ಸ್ಥಳಗಳ (Haunted place) ಪಟ್ಟಿಯಲ್ಲಿ ಸೇರಿದೆ. ಈ ಕಟ್ಟಡದಲ್ಲಿನ ಕಪ್ಪು ನೀರಿನಿಂದ ಜನರು ಸಂಮೋಹನಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಹಲವರು ನಂಬುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ವಿಚಿತ್ರವಾದ ಧ್ವನಿಗಳು (Voice) ಕೇಳಿ ಬರುತ್ತವೆ ಎಂಬ ನಂಬಿಕೆಯೂ ಅನೇಕರಿಗೆ ಇದೆ. ಅಲ್ಲದೆ, ಅನೇಕ ಜನರು ಇಲ್ಲಿ ವಿಚಿತ್ರ ಅನುಭವವನ್ನು ಹೊಂದಿದ್ದಾರೆ.

ಜಿಪಿ ಬ್ಲಾಕ್, ಮೀರತ್: ಮೀರತ್‌ನ ಕ್ಯಾಂಟ್ ಪ್ರದೇಶದಲ್ಲಿ ನಿರ್ಮಿಸಲಾದ ಈ ಬಂಗಲೆಗಳಿಗೆ ಜನರು ಹಗಲು ರಾತ್ರಿ ಹೋಗುವುದನ್ನು ತಪ್ಪಿಸುತ್ತಾರೆ. 1950 ರಿಂದ ಖಾಲಿ ಬಿದ್ದಿರುವ ಈ ಬಂಗಲೆ ಈಗ ಪಾಳು ಬಿದ್ದಿದೆ. ಈ ಬಂಗಲೆಯಲ್ಲಿ ಮಹಿಳೆ (Woman)ಯೊಬ್ಬರು ತಿರುಗಾಡುವುದನ್ನು ಹಲವರು ನೋಡಿದ್ದಾಗಿ ಹೇಳುತ್ತಾರೆ. ಇದರ ಜೊತೆಗೆ, ನಾಲ್ಕು ಜನರು ಮೇಣದಬತ್ತಿಗಳೊಂದಿಗೆ ಕುಳಿತಿರುವುದನ್ನು ನೋಡಿದ್ದಾಗಿ ಇನ್ನು ಕೆಲವರು ತಿಳಿಸಿದ್ದಾರೆ. ಈ ಬಂಗಲೆಗೆ ಸಂಬಂಧಿಸಿದ ಈ ಕಥೆಗಳಿಂದಾಗಿ ಜನರು ಇಲ್ಲಿಗೆ ಹೋಗಲು ಭಯಪಡುತ್ತಾರೆ. ಇದರೊಂದಿಗೆ ಮೀರತ್ ಆಡಳಿತವು ಅದರೊಳಗೆ ಪ್ರವೇಶವನ್ನು ನಿಷೇಧಿಸಿದೆ.

ಉದ್ಯಾನ ನಗರಿ ಬೆಂಗಳೂರಲ್ಲಿ ದೆವ್ವದ ಕಾಟವಂತೆ!

ರಾಷ್ಟ್ರೀಯ ಗ್ರಂಥಾಲಯ, ಕೊಲ್ಕತ್ತಾ: ಅಪರೂಪದ ಪುಸ್ತಕಗಳಿಗೆ ಹೆಸರುವಾಸಿಯಾಗಿರುವ ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯವು (Library) ಭಯಾನಕ ಕಥೆಗಳಿಗೂ ಹೆಸರುವಾಸಿಯಾಗಿದೆ. ಭಾರತದ ಸ್ವಾತಂತ್ರ್ಯದ ಮೊದಲು, ಈ ಗ್ರಂಥಾಲಯವು ಭಾರತದ ಗವರ್ನರ್ ಜನರಲ್ ಅವರ ಅಧಿಕೃತ ನಿವಾಸವಾಗಿತ್ತು. ಇಲ್ಲಿಗೆ ಭೇಟಿ ನೀಡುವ ಜನರು ಈ ಸ್ಥಳದಲ್ಲಿ ಯಾವುದೋ ಅದೃಶ್ಯ ಶಕ್ತಿ ಇದೆ ಎಂದು ನಂಬುತ್ತಾರೆ. ಇದಲ್ಲದೆ, ಕೆಲವರು ಇಲ್ಲಿ ವಿಚಿತ್ರ ಧ್ವನಿಗಳನ್ನು ಕೇಳುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿ ರಾತ್ರಿ ಪಾಳಿ ಮಾಡಲು ಹಲವು ಭದ್ರತಾ ಸಿಬ್ಬಂದಿ ಒಪ್ಪುತ್ತಿಲ್ಲ.

ಮುಕೇಶ್ ಮಿಲ್ಸ್, ಮುಂಬೈ: ಮುಂಬೈನ ಕೊಲಾಬಾ ಸಾಗರ್ ಬಳಿ ಇರುವ ಮುಖೇಶ್ ಮಿಲ್ ಭಯಾನಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣವೂ ನಡೆದಿದೆ. ಈ ಸ್ಥಳವು ಪ್ರೇತ ಕಥೆಗಳಿಗೆ ಸಾಕಷ್ಟು ಪ್ರಸಿದ್ಧವಾಗಿದೆ. ನಟಿ ಬಿಪಾಶಾ ಬೋಸ್ ಸೇರಿದಂತೆ ಅನೇಕ ನಟರು ಈ ಸ್ಥಳದಲ್ಲಿ ವಿಚಿತ್ರವಾದ ಅನುಭವವನ್ನು ಅನುಭವಿಸಿದ್ದಾರೆ.

Latest Videos
Follow Us:
Download App:
  • android
  • ios