Asianet Suvarna News Asianet Suvarna News

ಮುಕೇಶ್ ಅಂಬಾನಿಯ ಬಣ್ಣ ಬದಲಾಯಿಸೋ ಲಕ್ಸುರಿಯಸ್ ಕಾರ್‌; ಅಬ್ಬಬ್ಬಾ ಬೆಲೆ ಇಷ್ಟೊಂದಾ?

ಮುಕೇಶ್ ಅಂಬಾನಿ 8,04,916 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅದರಲ್ಲೂ ಬಣ್ಣ ಬದಲಾಯಿಸೋ ವೈಶಿಷ್ಟ್ಯ ಕಾರು ಅಂಬಾನಿ ಒಡೆತನದಲ್ಲಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

Mukesh Ambanis super expensive SUV changes colour on live camera, watch video of Rs 5 crore car Vin
Author
First Published Dec 20, 2023, 11:47 AM IST

ಮುಕೇಶ್ ಅಂಬಾನಿ 8,04,916 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು 16 ಟ್ರಿಲಿಯನ್‌ಗಿಂತಲೂ ಹೆಚ್ಚು ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಭಾರತದ ಪ್ರತಿಷ್ಠಿತ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕರು. ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದವರು ದೇಶದ ಕೆಲವು ಅತ್ಯಂತ ದುಬಾರಿ ಕಾರುಗಳನ್ನು ಹೊಂದಿದ್ದಾರೆ. 

Rolls-Royce Cullinan, Bentley Bentayga, Lamborghini Urus, Range Rover Autobiography ಮತ್ತು ಇತರ ದುಬಾರಿ SUVಗಳು ಮುಕೇಶ್ ಅಂಬಾನಿ ಒಡೆತನದಲ್ಲಿವೆ. ಆಂಟಿಲಿಯಾ ಎಂಬ 15000 ಕೋಟಿ ರೂಪಾಯಿಗಳ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಈ ಲಕ್ಸುರಿಯಸ್‌ ಕಾರುಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಮನೆಯಿಂದ ಹೊರ ಬಂದಾಗ ಮುಕೇಶ್ ಅಂಬಾನಿ ಈ ದುಬಾರಿ ಕಾರುಗಳ ಬೆಂಗಾವಲಿನಲ್ಲಿಯೇ ಬರುತ್ತಾರೆ.

ಹಳ್ಳಿ ಹಳ್ಳಿಗಳಲ್ಲೂ ಬಿಸಿನೆಸ್ ಆರಂಭಿಸಲು ಅಂಬಾನಿ ಪ್ಲಾನ್‌, ಬರೋಬ್ಬರಿ 500 ಕೋಟಿ ರೂ. ಹೂಡಿಕೆ!

ಲಕ್ಸುರಿಯಸ್ ಬೆಂಟ್ಲಿ ಬೆಂಟೈಗಾದ ಮಾಲೀಕ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ ಭಾರತದ ಅತ್ಯಂತ ದುಬಾರಿ SUV ಗಳಲ್ಲಿ ಒಂದಾದ ಬೆಂಟ್ಲಿ ಬೆಂಟೈಗಾದ ಮಾಲೀಕರಾಗಿದ್ದಾರೆ. ಬೆಂಟ್ಲಿ ಬೆಂಟೈಗಾ ಯಾವುದೇ ಸಾಮಾನ್ಯ SUV ಅಲ್ಲದಿದ್ದರೂ, ಕಾರನ್ನು ಇನ್ನಷ್ಟು ವೈಶಿಷ್ಟ್ಯವಾಗಿಸಲು, ಅಂಬಾನಿಗಳು ಅದಕ್ಕೆ ಬದಲಾವಣೆಯನ್ನು ಮಾಡಿಸಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ಬೆಂಟ್ಲಿ ಬೆಂಟೈಗಾ ವಿವಿಧ ಕೋನಗಳಿಂದ ಬಣ್ಣಗಳ (Colors) ವಿವಿಧ ಛಾಯೆಗಳನ್ನು ತೋರಿಸುತ್ತದೆ. ಇನ್‌ಸ್ಟಾಗ್ರಾಂನಲ್ಲಿ ವೈರಲ್ ಭಯಾನಿ ಅವರು ಹಂಚಿಕೊಂಡ ವೀಡಿಯೊದಲ್ಲಿ, ಅಂಬಾನಿ ಒಡೆತನದ SUVನ್ನು ಕ್ಯಾಮೆರಾದಲ್ಲಿ ಲೈವ್ ಆಗಿ ಬಣ್ಣ ಬದಲಾಯಿಸುವುದನ್ನು ಕಾಣಬಹುದು. ನೀವು ಕೆಳಗಿನ ವೀಡಿಯೊದಲ್ಲಿ ಅದನ್ನು ವೀಕ್ಷಿಸಬಹುದು.

ವೀಡಿಯೊದಲ್ಲಿ, ಮುಕೇಶ್ ಅಂಬಾನಿ ಬೆಂಟ್ಲಿ ಬೆಂಟೈಗಾ ಎಸ್‌ಯುವಿ ಕಣ್ಣುಗಳ ಮುಂದೆ ಬಣ್ಣಗಳನ್ನು ಬದಲಾಯಿಸುವುದನ್ನು ಕಾಣಬಹುದು. ಬೆಂಟ್ಲಿ ಬೆಂಟೈಗಾ ವಿವಿಧ ಛಾಯೆಗಳ ದೀಪಗಳ ಅಡಿಯಲ್ಲಿ ವಿವಿಧ ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ. ಇದು ಕಾರಿನ ಬಣ್ಣವನ್ನು ಬದಲಾಯಿಸುವ ಭ್ರಮೆಯನ್ನು ಉಂಟುಮಾಡುತ್ತದೆ.

ಕೇವಲ 8000 ರೂ.ನಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿ, ಈಗ ಬಿಲಿಯನೇರ್ ಮುಕೇಶ್ ಅಂಬಾನಿಗೇ ಪ್ರತಿಸ್ಪರ್ಧಿ!

ಮುಕೇಶ್ ಅಂಬಾನಿ, ದುಬಾರಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಲಿನನ್‌ನ್ನು ಹೊಂದಿದ್ದಾರೆ. ಇದರ ಬೆಲೆ 1 ಕೋಟಿ ರೂ. ಆಗಿದೆ. ಕಾರ್ಟೊಕ್ ವರದಿಯ ಪ್ರಕಾರ, ಮುಕೇಶ್ ಅಂಬಾನಿ ಒಡೆತನದ ಟಸ್ಕನ್ ಸನ್ ಶೇಡ್‌ನಲ್ಲಿ ರೋಲ್ಸ್ ರಾಯ್ಸ್ ಕಲ್ಲಿನನ್‌ನ ಪೇಂಟ್ ಜಾಬ್ ಸುಮಾರು 1 ಕೋಟಿ ರೂ. ಭಾರತದಲ್ಲಿ Rolls-Royce Cullinan ಬೆಲೆಯು 6.8 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗಿದ್ದರೂ, 21-ಇಂಚಿನ ಟಯರ್‌ ಮತ್ತು ಇತರ ಕಸ್ಟಮೈಸೇಶನ್‌ಗಳ ಜೊತೆಗೆ ಕಲರ್ ಚೇಜಿಂಗ್ ವರ್ಕ್‌ ಕಾರಿನ ಬೆಲೆಯನ್ನು ಸುಮಾರು 13.14 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ.

Follow Us:
Download App:
  • android
  • ios