ಬೇಡವಾದ ಗರ್ಭದ ಬಗ್ಗೆ ಮಹಿಳೆಯರಿಗೆ ಎಷ್ಟು ಟೆನ್ಶನ್ ಇರುತ್ತದೆಯೋ , ಅಷ್ಟೇ ಪುರುಷರಿಗೂ ಇರುತ್ತದೆ. ಆದರೆ ಇಲ್ಲೀವರೆಗೂ ಅದರಿಂದ ಹೊರ ಬರಲು ಅಷ್ಟೊಂದು ಸಾಧನಗಳಿರಲಿಲ್ಲ.  ಆದರೆ ಇದೀಗ ವಿಜ್ಞಾನಿಗಳು ಒಂದು ಇಂಜೆಕ್ಷನ್ ಕಂಡು ಹಿಡಿದಿದ್ದಾರೆ. ಇದರಿಂದ ಪುರುಷರೂ ಫ್ಯಾಮಿಲಿ ಪ್ಲಾನಿಂಗ್ ಮಾಡಬಹುದು. ಈ ವಿಶೇಷವಾದ ಗರ್ಭ ನಿರೋಧಕ ಇಂಜೆಕ್ಷನ್‌ನಿಂದ 13 ವರ್ಷಗಳ ಕಾಲ ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ.

ಇದುವರೆಗೆ ಸುರಕ್ಷಿತ ಲೈಂಗಿಕತೆಗಾಗಿ ಮಹಿಳೆಯರು ಮಾತ್ರ ಕಾಪರ್ಟಿ ಹಾಕಿಸಿಕೊಳ್ಳುವುದು ಅಥವಾ ಕೆಲವು ಮಾತ್ರೆಗಳನ್ನು ಸೇವಿಸುವುದರ ಬಗ್ಗೆ ಕೇಳಿದ್ದೀರಿ. ಇದರಿಂದ ಹಲವು ಅಡ್ಡ ಪರಿಣಾಮಗಳನ್ನೂ ಅವರು ಎದುರಿಸಬೇಕಾಗಿಬರಬಹುದು. ಇದಕ್ಕೆ ಮುಕ್ತಿ ಹಾಡುವಂತೆ ಇದೀಗ ಪುರುಷರಿಗೂ ಇಂಥ ಔಷಧಿಗಳು ಮಾರುಕಟ್ಟೆಗೆ ಬಂದಿದ್ದು, ಪರಿಣಾಮಕಾರಿಯಾಗಿರುವುದಲ್ಲದೇ, ಸುರಕ್ಷಿತವೂ ಹೌದು ಎನ್ನಲಾಗುತ್ತಿದೆ. 

ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

ಐಸಿಎಂಆರ್‌ ವೈದ್ಯರ ಈ ಇಂಜೆಕ್ಷನ್ ರಿವರ್ಸಿಬಲ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ ಅಂದರೆ ಗರ್ಭ ನಿರೋಧಕ ಇಂಜೆಕ್ಷನ್. ಇಲ್ಲಿವರೆಗೂ ಪುರುಷರಿಗೆ ಸ್ಪರ್ಮ್ ಟ್ರಾಂಜೆಕ್ಷನ್ ತಡೆಯಲು ಗರ್ಭ ನಿರೋಧಕ ಆಪರೇಷನ್ ಮಾಡಿಸಿಕೊಳ್ಳುವ ಅಗತ್ಯವಿತ್ತು. ಆದರೆ, ಈ ಇಂಜೆಕ್ಷನ್ ತೆಗೆದುಕೊಂಡರೆ 13 ವರ್ಷಗಳ ಕಾಲ ಕೆಲಸ ಮಾಡುತ್ತದೆ. 

ಇಲ್ಲಿವರೆಗೂ ಇಲಿ, ಮೊಲ ಮತ್ತು ಇತರ ಪ್ರಾಣಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದೆ. ಅಲ್ಲದೇ 303 ಪುರುಷರ ಮೇಲೂ ಪ್ರಯೋಗ ನಡೆದಿದ್ದು, ಇದೀಗ ಕ್ಲಿನಿಕಲ್ ಟೆಸ್ಟ್ ಮಾಡಲಾಗುತ್ತಿದೆ. ಇದರಲ್ಲಿ ಶೇ. 97.3 ಇಂಜೆಕ್ಷನ್ ಆ್ಯಕ್ಟಿವ್ ಆಗಿ ಕೆಲಸ ಮಾಡಿದೆ. ಅಲ್ಲದೆ  ಶೇ.99.2 ಗರ್ಭ ತಡೆಯಲು ಸಹಕರಿಸುತ್ತದೆ.