ಹೆಂಡ್ತಿಗೆ ಮ್ಯಾಗಿ ಬಿಟ್ಟು ಮತ್ತೇನ್ ಮಾಡೋಕೆ ಬರಲ್ಲ, ಮೂರು ಹೊತ್ತು ತಿಂದು ಬೇಸತ್ತು ಡಿವೋರ್ಸ್ ನೀಡಿದ ಪತಿ !
ಯಾವಾಗ್ಲಾದ್ರೂ ಒಮ್ಮೆ ಮ್ಯಾಗಿ (Maggi) ತಿನ್ನೋದಂದ್ರೆ ಎಲ್ರೂ ಖುಷಿಪಟ್ಟು ತಿನ್ತಾರೆ. ಆದ್ರೆ ಮೂರು ಹೊತ್ತು ಇದನ್ನೇ ತಿನ್ಬೇಕು ಅಂದ್ರೆ ಹೇಗಿರುತ್ತೆ. ಯಪ್ಪಾ ಅದ್ಹೇಗೆ ಸಾಧ್ಯ ಅಂತೀರಾ..? ಪಾಪ ಅಲ್ಲೊಬ್ಬನದ್ದು ಅದೇ ಪರಿಸ್ಥಿತಿಯಾಗಿತ್ತು. ಹೆಂಡ್ತಿಗೆ (Wife) ಮ್ಯಾಗಿ ಬಿಟ್ಟು ಬೇರೇನೂ ಮಾಡೋಕೆ ಬರಲ್ಲ. ಹೀಗಾಗಿ ಮೂರು ಹೊತ್ತು ಅನಿವಾರ್ಯವಾಗಿ ಮ್ಯಾಗಿ ತಿನ್ಬೇಕಿತ್ತು. ತಿನ್ನುವಷ್ಟು ತಿಂದು ಕೊನೆಗೊಮ್ಮೆ ಆತ ಮಾಡಿದ್ದಾದ್ರೂ ಏನು ನೋಡಿ.
ಮದುವೆ (Marriage), ದಾಂಪತ್ಯ ಅನ್ನೋದು ಹಿಂದಿನ ಕಾಲದಲ್ಲಿದ್ದ ಹಾಗೆ ಈಗಿಲ್ಲ. ಹಿಂದೆಲ್ಲಾ ಗಂಡು ದುಡಿಯಲು ಮನೆಯಿಂದ ಹೊರ ಹೋದರೆ, ಹೆಣ್ಣು ಮನೆಯಲ್ಲಿ ಅಡುಗೆ ಸಿದ್ಧಪಡಿಸುತ್ತಿದ್ದಳು. ಆದರೆ ಇವತ್ತಿನ ಬ್ಯುಸಿ ಲೈಫ್‌ನಲ್ಲಿ ಗಂಡ-ಹೆಂಡತಿ (Husband-wife) ಇಬ್ಬರೂ ಕೆಲಸಕ್ಕೆ ಹೋಗುವವರೇ. ಹಾಗಯೇ ಹೆಣ್ಣಿಗೆ ಅಡುಗೆ (Cooking) ಗೊತ್ತಿರಲೇಬೇಕು ಎಂಬ ಅಲಿಖಿತ ನಿಯಮವನ್ನೂ ಪಾಲಿಸುವವರೂ ಇಲ್ಲ. ಹೀಗಾಗಿ ಇವತ್ತಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರಿಗೆ ಅಡುಗೆ ಗೊತ್ತಿಲ್ಲ. ಹೀಗಾಗಿ ಯುವ ದಂಪತಿಗಳು ರೆಡಿ ಟು ಈಟ್ ಫುಡ್ಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ.
ಆದರೆ, ಇಂತಹ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯನ್ನುಂಟು ಮಾಡಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದಾಳೆ ಎಂಬ ಕಾರಣಕ್ಕೆ ಬೇಸತ್ತು ವಿಚ್ಛೇದನ (Divorce) ನೀಡಿದ್ದಾನೆ ಎಂದು ಬಳ್ಳಾರಿಯಲ್ಲಿ ನ್ಯಾಯಾಧೀಶರಾಗಿದ್ದಾಗ ನಡೆದ ಘಟನೆಯನ್ನ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಎಂ ರಘುನಾಥ್ ವಿವರಿಸಿದರು.
ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ 49 ವರ್ಷದ ಸಚಿವನ 18ರ ಹರೆಯದ ಪತ್ನಿ
ಸಣ್ಣಪುಟ್ಟ ವಿಚಾರಗಳಿಗೆ ದಂಪತಿಗಳು ವಿವಾಹ ವಿಚ್ಛೇದನ ಪಡೆಯುವ ವೈವಾಹಿಕ ಪ್ರಕರಣಗಳ ಕುರಿತು ಮಾತನಾಡಿದ ನ್ಯಾಯಾಧೀಶ ಎಂ.ಎಲ್.ರಘುನಾಥ್, ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದಾಗಿ ಹೇಳಿದರು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಪತಿ (Husband)ಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದ ಹಳೇ ಘಟನೆಯನ್ನ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಎಂ ರಘುನಾಥ್ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನ್ಯಾ. ಎಂ ರಘುನಾಥ್, ನಾನು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ವೇಳೆ, ವ್ಯಕ್ತಿಯೊಬ್ಬ ಮ್ಯಾಗಿ, ನೂಡಲ್ ಹೊರತುಪಡಿಸಿ ಬೇರೆ ಯಾವುದೇ ಅಡುಗೆಯನ್ನು ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ. ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ಪ್ರತಿದಿನ ಮ್ಯಾಗಿ, ನೂಡಲ್ಸ್ ಮಾಡುತ್ತಿದ್ದಳು. ಪ್ರಾವಿಷನ್ ಸ್ಟೋರ್ಗೆ ಹೋದರೆ ರೇಷನ್ ತರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ-ಪ್ರತಿವಾದ ಅಲಿಸಿದ ಬಳಿಕ ಅಂತಿಮವಾಗಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ ಸಂದರ್ಭದಲ್ಲಿ ಹೇಳಿದರು.
Relationship Tips : ವಿಚ್ಛೇದನ ನೀಡುವ ಮೊದಲು ನಿಮ್ಮನ್ನು ನೀವು ಈ ಪ್ರಶ್ನೆ ಕೇಳ್ಕೊಳ್ಳಿ
ವೈವಾಹಿಕ ವಿವಾದಗಳನ್ನು ಇತ್ಯರ್ಥಪಡಿಸುವುದು ಸ್ವಲ್ಪ ಕಷ್ಟ ಎಂದು ಪ್ರತಿಪಾದಿಸಿದ ರಘುನಾಥ್, ದಂಪತಿಗಳು ತಮ್ಮ ಮಕ್ಕಳ ಭವಿಷ್ಯವನ್ನು ಪರಿಗಣಿಸುವುದರಿಂದ ಹೆಚ್ಚು ವಿಚ್ಛೇದನಗಳಾಗುವುದನ್ನು ತಡೆಯಬಹುದು ಎಂದರು. ದಂಪತಿಗಳ ನಡುವೆ ರಾಜಿ ತರಲು ಮತ್ತು ಅವರನ್ನು ಮತ್ತೆ ಒಂದುಗೂಡಿಸಲು ನಾವು ಭಾವನೆಗಳನ್ನು ಬಳಸುತ್ತೇವೆ. ಇದು ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳು. ಹೆಚ್ಚಿನ ಸಂದರ್ಭಗಳಲ್ಲಿ, ದಂಪತಿಗಳು ಮತ್ತೆ ಒಂದಾದರೂ, ಅವರ ವಿವಾದದ ಗುರುತುಗಳು ಉಳಿಯುತ್ತವೆ. 800-900 ವೈವಾಹಿಕ ಪ್ರಕರಣಗಳಲ್ಲಿ, ನಾವು ಸುಮಾರು 20-30 ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ ಸುಮಾರು 110 ವಿಚ್ಛೇದನ ಪ್ರಕರಣಗಳಲ್ಲಿ ಕೇವಲ 32 ಪ್ರಕರಣಗಳಲ್ಲಿ ದಂಪತಿ ಒಂದಾಗಿದ್ದಾರೆ ಎಂದು ಅವರು ಹೇಳಿದರು.
ಮೈಸೂರು ಜಿಲ್ಲೆಯು ಐದು ಕೌಟುಂಬಿಕ ನ್ಯಾಯಾಲಯಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 500 ವೈವಾಹಿಕ ಪ್ರಕರಣಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಸುಮಾರು 800 ಪ್ರಕರಣಗಳು ವಿಚ್ಛೇದನಕ್ಕಾಗಿ ಇವೆ. ವಿಚ್ಛೇದನ ಪ್ರಕರಣಗಳು ವರ್ಷಗಳಲ್ಲಿ ತೀವ್ರವಾಗಿ ಹೆಚ್ಚುತ್ತಿವೆ. ವಿಚ್ಛೇದನ ಪಡೆಯುವ ಮೊದಲು ದಂಪತಿಗಳು ಕನಿಷ್ಠ ಒಂದು ವರ್ಷ ಒಟ್ಟಿಗೆ ಇರಬೇಕಾಗುತ್ತದೆ. ಅಂತಹ ಕಾನೂನು ಇಲ್ಲದಿದ್ದರೆ, ಮದುವೆ ಮಂಟಪಗಳಿಂದಲೇ ನೇರವಾಗಿ ವಿಚ್ಛೇದನ ಅರ್ಜಿಗಳನ್ನು ಸಲ್ಲಿಸುತ್ತಿದ್ದರೇನೋ ಎಂದು ಅವರು ಹೇಳಿದರು.
ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್
ವಿವಾಹವಾದ ಕೇವಲ ಒಂದು ದಿನದ ನಂತರ ದಂಪತಿಗಳು ಕೊಟ್ಟಿರುವ ವಿಚ್ಛೇದನದ ಪ್ರಕರಣಗಳನ್ನು ನ್ಯಾಯಾಲಯಗಳು ಸ್ವೀಕರಿಸಿವೆ, ಸಂಗಾತಿಯೊಂದಿಗೆ ಮಾತನಾಡದಿದ್ದಕ್ಕಾಗಿ, ತಟ್ಟೆಯ ತಪ್ಪಾದ ಬದಿಯಲ್ಲಿ ಉಪ್ಪು ಹಾಕಿದ್ದಕ್ಕಾಗಿ, ಮದುವೆಯ ಸೂಟ್ ಅನ್ನು ತಪ್ಪಾಗಿ ಹೊಲಿದಿದ್ದಕ್ಕಾಗಿ, ಹೆಂಡತಿಯನ್ನು ಹೊರಗೆ ಕರೆದೊಯ್ಯದಿದ್ದಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ ಇವತ್ತಿನ ದಿನಗಳಲ್ಲಿ ದಂಪತಿ ವಿಚ್ಛೇದನೆ ಪಡೆಯುತ್ತಿದ್ದಾರೆ ಎಂದು ನ್ಯಾಯಾಧೀಶರಾದ ಎಂ.ರಘುನಾಥ್ ಹೇಳಿದರು.
ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶಗಳಿಂದ ನಮಗೆ ವಿಚ್ಛೇದನ ಅರ್ಜಿಗಳು ಹೆಚ್ಚು ಬರುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುತ್ತವೆ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ ಮತ್ತು ಸಮಾಜ ಮತ್ತು ಕುಟುಂಬದ ಭಾವನೆಗಳ ಬಗ್ಗೆ ಅವರ ಭಯವು ಪರಿಸ್ಥಿತಿಯನ್ನು ನಿಭಾಯಿಸಲು ಅವರನ್ನು ಒತ್ತಾಯಿಸುತ್ತದೆ. ಆದರೆ ನಗರಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಎಂದು ತಿಳಿಸಿದರು.