Asianet Suvarna News Asianet Suvarna News

ಪುರಿ ಜಗನ್ನಾಥ ದೇವಸ್ಠಾನದಲ್ಲಿ ನಡೆಯೋ ಈ ಪವಾಡಗಳಿಗೆ ಉತ್ತರವೇ ಇಲ್ಲ!

ಒಡಿಶಾದ ಪ್ರಸಿದ್ಧ ಹೆಸರುವಾಸಿಯಾಗಿರುವ ವಿಷ್ಣು ದೇವಾಲಯ  ಪುರಿ ಜಗನ್ನಾಥ, ಭಾರತ ದೇಶದ  'ಚಾರ್ ಧಾಮ್'ಗಳಲ್ಲಿ ಜಗನ್ನಾಥನ ದೇವಾಲಯವೂ ಒಂದು, ಮೋಕ್ಷಕ್ಕಾಗಿ ಕೊನೆಯುಸಿರೆಳೆಯುವ ಮುನ್ನ ಈ ಪವಿತ್ರ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ರಥಯಾತ್ರೆಯಲ್ಲಿ ಕೋಟ್ಯಾಂತರ ಭಕ್ತರು ಸೇರುತ್ತಾರೆ. 

Miracles of Puri Jagannath temple

ಮರದಿಂದ ಮಾಡಿರುವ ಈ ದೇವಸ್ಥಾನದ ವಿಗ್ರಹವನ್ನು 12-18 ವರ್ಷಕ್ಕೊಮ್ಮೆ ಬದಲಿಸುತ್ತಾರೆ. ಯಮನನ್ನು ಭೇಟಿಯಾಗಲು ಹೊರಟ ಪಾಂಡವರಿಗೆ ಸಪ್ತ ಋಷಿಗಳು 'ಚಾರ್ ಧಾಮ್'ಗೆ ಭೇಟಿ ನೀಡಿ, ಮೋಕ್ಷ ಪಡೆದುಕೊಳ್ಳುವಂತೆ ಸೂಚಿಸಿದ್ದರು. ವರ್ಷದಲ್ಲಿ ಕೆಲವೇ ಸಮಯ ಮಾತ್ರ ಈ ಮಂದಿರದ ಬಾಗಿಲು ತೆರೆಯಲ್ಲಿದ್ದು, ಜನ ಸಾಗರವೇ ಸೇರುತ್ತದೆ. ಇಂಥ ವಿಶೇಷ ಪ್ರಭಾವ ಇರುವ ಪ್ರಖ್ಯಾತ ಪುರಿ ಜಗನ್ನಾಥ ಮಂದಿರದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳು... 

Miracles of Puri Jagannath temple

ಗೋಪುರದ ಬಾವುಟ:   

ಸಾಮಾನ್ಯ ವಿಜ್ಞಾನ ಹೇಳುವಂತೆ, ಗಾಶಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಈ ಸ್ಥಳದಲ್ಲಿ ಯಾವುದೋ ದೈವಿಕ ಪ್ರಭಾವದಿಂದ ಇಂಥದ್ದೊಂದು ಪವಾಡ ನಡೆಯುತ್ತದೆ ಎಂದೇ ಜನರು ನಂಬುತ್ತಾರೆ.

Miracles of Puri Jagannath temple

ಸುದರ್ಶನ ಚಕ್ರ :

ಗೋಪುರದ ಮೇಲಿರುವ ಚಕ್ರವು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಚಕ್ರ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುತ್ತದೆ. ಈ ಮಂದಿರದ ಮೇಲೆ ಯಾವುದೇ ಪಕ್ಷಿಯಾಗಲಿ, ವಿಮಾನವಾಗಲಿ ಹಾರುವುದಿಲ್ಲ. ಭಾರತದ ಬೇರೆ ಯಾವ ಮಂದಿರದಲ್ಲಿಯೂ ಇಂಥದ್ದೊಂದು ಪ್ರಭಾವ ಇಲ್ಲ. ಯಾವುದೇ ಹಾರಟ ನಿಷೇಧ ಪ್ರದೇಶವೆಂದು ಘೋಷಿಸದೇ ಹೋದರೂ, ಈ ಮಂದಿರದ ಮೇಲೆ ಏನೂ ಹಾರುವುದಿಲ್ಲ. ಇದಕ್ಕೆ ಕಾರಣವೇನೆಂದು ಇನ್ನೂ ನಿಗೂಢವಾಗಿಯೇ ಇದ್ದು, ಯಾವುದೋ ದೈವಿ ಶಕ್ತಿಯಿಂದ ಇಂಥದ್ದೊಂದು ಪವಾಡ ನಡೆಯುತ್ತಂತೆ.

ನೆರಳು ಬೀಳುವುದೇ ಇಲ್ಲ:

ಎಂಥ ಬಿಸಿಲಿದ್ದರೂ ದೇವಾಲಯದಲ್ಲಿ ಮತ್ತು ದೇವಾಲಯ ಆವರಣದಲ್ಲಿ ನೆರಳು ಬೀಳುವುದಿಲ್ಲ.  ಇದು ಚಮತ್ಕಾರವೋ, ವಿಸ್ಮಯವೋ, ಪವಾಡವೋ? ಆ ದೇವನೇ ಬಲ್ಲ....ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತ ತರಂಗ..

ದೇವಾಲಯವನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿದ್ದು, ಮುಖ್ಯ ದ್ವಾರವಾದ ಸಿಂಗದ್ವಾರಮ್ ಅನ್ನು ಪ್ರವೇಶಿಸುವಾಗ, ಶಬ್ದ ತರಂಗಗಳು ಕೇಳಿಸುತ್ತದೆ. ಆದರೆ, ಮತ್ತದೇ ದ್ವಾರದಲ್ಲಿ ಪ್ರವೇಶಿಸಿದರೆ, ಶಬ್ದ ಕೇಳಿಸುವುದಿಲ್ಲ.

ಸಮುದ್ರ ರಹಸ್ಯ:

ಪ್ರಕೃತಿ ವಿಸ್ಮಯದ ಪ್ರಕಾರ ಬೆಳಗಿನ ಸಮಯದಲ್ಲಿ ಗಾಳಿ ಸಮುದ್ರದಿಂದ ಭೂಮಿಯೆಡೆಗೆ ಚಲಿಸುತ್ತದೆ. ಸಂಜೆ ಭೂಮಿಯಿಂದ  ಸಮುದ್ರದೆಡೆಗೆ ಗಾಳಿ ಚಲಿಸುತ್ತದೆ. ಆದರೆ ಪುರಿಯಲ್ಲಿ ಈ ವಿಸ್ಮಯ ವಿರುದ್ಧವಾಗಿ ನಡೆಯುತ್ತದೆ!

1800 ವರ್ಷಗಳ ಸಂಪ್ರದಾಯ

ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ, ಎಂಬ ಪ್ರತೀತಿ ಇದೆ.

ಪ್ರಸಾದ ವಿಸ್ತರಣೆ

ದೇವಸ್ಥಾನಕ್ಕೆ 2 ಸಾವಿರದಿಂದ 10 ಸಾವಿರ ಜನರು ಪ್ರವೇಶಿಸುತ್ತಾರೆ. ಮಾಡುವ ಪ್ರಸಾದ ಮಾತ್ರ ಯಾವತ್ತೂ ಹೆಚ್ಚಾಗುವುದೂ ಇಲ್ಲ, ಕಡಿಮೆಯೂ ಆಗುವುದಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ತಯಾರಿಸಲಾಗುತ್ತದೆ. ಅದು ಹೇಗೋ ಗೊತ್ತಿಲ್ಲ.

ಅಡುಗೆ ಪಾತ್ರೆ

ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷವಾಗಿರುತ್ತದೆ. ಏಳು ಮಣ್ಣಿನ ಮಡಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ. 

ಸೃಷ್ಟಿಯಲ್ಲಿ ಹಲವಾರು ಘಟನೆಗಳಿಗೆ ವಿಜ್ಞಾನವೂ ಉತ್ತರಿಸಲು ಆಗುವುದಿಲ್ಲ. ಅದೇ ರೀತಿ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಯುವ ಇಂಥ ಘಟನೆಗಳಿಗೆ ದೈವೀಶಕ್ತಿಯೇ ಕಾರಣವೆಂದು ಹೇಳಬಹುದೇ ಹೊರತು, ನಿಖರ ಕಾರಣವೇನೆಂದು ಹೇಳುವುದು ಸಾಧ್ಯವಾಗಿಲ್ಲ.

Follow Us:
Download App:
  • android
  • ios