ಪ್ರೀತಿ ಪ್ರೇಮದ ನಡುವೆ ಬ್ರೇಕ್ ಅಪ್ ಆದಾಗ ಹೃದಯ ಚೂರಾಗುತ್ತದೆ. ಆದರೆ  ಬ್ರೇಕ್ ಅಪ್’ಗೆ ನೂರಾರು ಕಾರಣಗಳು ಇರುತ್ತದೆ.  ಜೀವನ ಪರ್ಯಂತ ತಮ್ಮ ಪ್ರೀತಿಪಾತ್ರ ಹುಡುಗನೊಂದಿಗೆ ಕಳೆಯಬೇಕು ಎನ್ನುವ ಬಯಕೆ ಹುಡಗಿಯಲ್ಲಿ ಇರುತ್ತದೆ. ಅದೆಲ್ಲವೂ ಕೂಡ ಮಣ್ಣು ಪಾಲಾಗುವುದಲ್ಲದೇ, ಮಾನಸಿಕ ಖಿನ್ನತೆಯೂ ಕಾಡಬಹುದಾಗಿದೆ. ಆದರೆ ಆದರೆ ಈ 14 ಗುಣಗಳು ಹುಡುಗಿಯಲ್ಲಿ ಇದ್ದರೆ ಹುಡುಗ ಎಂದಿಗೂ ಆಕೆಯನ್ನು ಬಿಟ್ಟು ದೂರ ಹೋಗುವುದಿಲ್ಲ. ಹುಡುಗಿಯಲ್ಲಿರಬೇಕಾದ ಅಂತಹ ಗುಣಗಳು ಯಾವೆಂದು ನಾವು ನಿಮಗೆ ತಿಳಿಸುತ್ತೇವೆ ನೋಡಿ.

ಪ್ರೀತಿ ಪ್ರೇಮದ ನಡುವೆ ಬ್ರೇಕ್ ಅಪ್ ಆದಾಗ ಹೃದಯ ಚೂರಾಗುತ್ತದೆ. ಆದರೆ ಬ್ರೇಕ್ ಅಪ್’ಗೆ ನೂರಾರು ಕಾರಣಗಳು ಇರುತ್ತದೆ. ಜೀವನ ಪರ್ಯಂತ ತಮ್ಮ ಪ್ರೀತಿಪಾತ್ರ ಹುಡುಗನೊಂದಿಗೆ ಕಳೆಯಬೇಕು ಎನ್ನುವ ಬಯಕೆ ಹುಡಗಿಯಲ್ಲಿ ಇರುತ್ತದೆ. ಅದೆಲ್ಲವೂ ಕೂಡ ಮಣ್ಣು ಪಾಲಾಗುವುದಲ್ಲದೇ, ಮಾನಸಿಕ ಖಿನ್ನತೆಯೂ ಕಾಡಬಹುದಾಗಿದೆ. ಆದರೆ ಆದರೆ ಈ 14 ಗುಣಗಳು ಹುಡುಗಿಯಲ್ಲಿ ಇದ್ದರೆ ಹುಡುಗ ಎಂದಿಗೂ ಆಕೆಯನ್ನು ಬಿಟ್ಟು ದೂರ ಹೋಗುವುದಿಲ್ಲ. ಅಷ್ಟಕ್ಕೂ ಹುಡುಗಿಯಲ್ಲಿರಬೇಕಾದ ಅಂತಹ ಗುಣಗಳು ಯಾವುವು?

*ಹುಡುಗನಿಗಿಂತ ಹುಡುಗಿ ಸ್ಮಾರ್ಟ್ ಆಗಿರಬೇಕು : ಆಗ ಹುಡುಗ ಹುಡುಗಿಯನ್ನು ಬಿಟ್ಟು ಎಂದಿಗೂ ದೂರ ಸರಿಯುವುದಿಲ್ಲವಂತೆ

*ಹುಡುಗಿ ಪ್ರಾಮಾಣಿಕವಾಗಿರಬೇಕು : ಪ್ರಾಮಾಣಿಕವಾಗಿರೋ ಹುಡುಗಿಯರು ಎಂದರೆ ಗಂಡಿಗೆ ಎಲ್ಲಿಲ್ಲದ ವ್ಯಾಮೋಹ.

*ಪಾಸಿಟಿವ್ ಔಟ್’ಲುಕ್ ಹೊಂದಿರಬೇಕು : ನಕಾರಾತ್ಮಕ ವ್ಯಕ್ತಿತ್ವದವರೊಂದಿಗೆ ಜೀವನ ಸಾಗಿಸುವುದು ಕಷ್ಟ. ಪಾಸಿಟಿವ್ ಚಿಂತನೆಗಳು, ಪಾಸಿಟಿವ್ ಲುಕ್....ಒಟ್ಟಿನಲ್ಲಿ ಎಲ್ಲವೂ ಹೆಣ್ಣಿನಲ್ಲಿ ಪಾಸಿಟಿವ್ ಆಗಿದ್ದರೆ, ಗಂಡು ಸದಾ ಆ ಹೆಣ್ಣಿಗೆ ಆಕರ್ಷಿತನಾಗಿರುತ್ತಾನೆ.

*ಕಾಂಪ್ರಮೈಸ್ ಆಗಿರಬೇಕು : ಪ್ರತಿಯೊಂದೂ ವಿಷಯಕ್ಕೂ ಲಾಯರ್ ತರ ವಾದ ಮಾಡುವ ಹಣ್ಣು ಯಾವ ಗಂಡಿಗೂ ಇಷ್ಟವಾಗೋಲ್ಲ. ಬದಲಾಗಿ, ತುಸು ಕಾಂಪ್ರೋಮೈಸ್ ಮಾಡಿಕೊಳ್ಳೋ ನೇಚರ್ ಇದ್ದರೆ ಗಂಡು ಫುಲ್ ಫಿದಾ ಆಗುತ್ತಾನೆ.

*ಸಣ್ಣ ಸಣ್ಣ ಹಾಸ್ಯಗಳಿಗೂ ಕೂಡ ನಗಬೇಕು : ಸಂಗಾತಿಯ ಸಣ್ಣ ಹಾಸ್ಯಗಳಿಗೂ ನಗುವುದರಿಂದ ಗಂಡಿಗೆ ಖುಷಿಯಾಗುತ್ತದೆ. ಜೀವನದಲ್ಲಿ ಹಾಸ್ಯ ತುಂಬಿದ್ದರೆ, ಬದುಕು ಸುಂದರವಾಗಿರೋದ್ರಲ್ಲಿ ಅನುಮಾನವೇ ಇರೋಲ್ಲ.

*ಓಪನ್ ಹಾರ್ಟೆಡ್ ಆಗಿರಬೇಕು : ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದ ಅಧ್ಯಯನದ ಹೆಣ್ಣು ಗುಮ್ಮನ್ ಗುಸ್ಕ ತರ ಇರೋ ಬದಲು, ಪಟ ಪಟವೆಂದು ಮಾತನಾಡುತ್ತಾ, ಮನಸ್ಸಿನಲ್ಲಿ ಇರೋದನ್ನು ಶೇರ್ ಮಾಡಿಕೊಂಡರೆ ಹುಡುಗ, ಗಂಡ ಅಥವಾ ಪ್ರಿಯಕರ ಫುಲ್ ಖುಷಿಯಾಗಿರುತ್ತಾನಂತೆ.

*ಸಂಗಾತಿಯ ಗುರಿಗಳಿಗೆ ನಿಮ್ಮ ಬೆಂಬಲ ಇರಬೇಕು : ಗಂಡಿಗೆ ತನ್ನದೇ ಆದ ಗುರಿಗಳಿರುತ್ತವೆ. ಆ ಗುರಿ ತಲುಪುವವರೆಗೂ ಶ್ರಮಿಸುತ್ತಲೇ ಇರುತ್ತಾನೆ. ಆ ಶ್ರಮಕ್ಕೆ ಹೆಂಡ್ತಿ ಸಾಥ್ ನೀಡಿದರೆ, ಗಂಡಿಗೆ ಏನೋ ನೆಮ್ಮದಿ.

*ಹುಡುಗನ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು: ತನ್ನ ಪೋಷಕರೊಂದಿಗೆ ಪತ್ನಿ ಒಳ್ಳೆ ಬಾಂಧವ್ಯ ಹೊಂದಿರಬೇಕೆಂದು ಪ್ರತಿಯೊಬ್ಬ ಗಂಡೂ ಬಯಸುತ್ತಾನೆ. ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಹೆಂಡತೆ ಎಂದರೆ ಪತಿಗೆ ಎಲ್ಲಿಲ್ಲದ ಹೆಮ್ಮೆ. ಆಕೆಯನ್ನು ಪ್ರೀತಿಸುವ ಜತೆಗೆ ಸಿಕ್ಕಾಪಟ್ಟೆ ಗೌರವಿಸುತ್ತಾನೆ ಸಹ.

*ಕರುಣಾಮಯಿಯಾಗಿರಬೇಕು : ಹುಡುಗಿಯಲ್ಲಿ ಕರುಣೆಯ ಗುಣಗಳಿದ್ದಲ್ಲಿ ಸಂಗಾತಿಗೆ ಇಷ್ಟ.

*ಜಗಳ ನಡೆದಾಗ ಆಕೆಯೇ ಸಮಾಧಾನಿಯಾಗಿರಬೇಕು – ಸಂಗಾತಿಯನ್ನು ಸಮಾಧಾನಿಸಬೇಕು : ತಾಳ್ಮೆ ಇರೋ ಹೆಣ್ಣೆಂದರೆ ಗಂಡಿಗೆ ಇಷ್ಟ. ಜಗಳವಾದರೂ ಹೆಣ್ಣೇ ಸೋಲಲಿ ಎಂದು ಗಂಡು ಬಯಸೋದು ಸಹಜ. ಆದರೆ, ಸೋತು ಗೆಲವು ಸಾಧಿಸೋ ವ್ಯಕ್ತಿತ್ವ ಹೆಣ್ಣಿಗಿದ್ದರೆ, ಜೀವನ ಸುಸೂತ್ರವಾಗಿರುತ್ತೆ.

*ಕೆಲವು ಫೂಲಿಶ್ ವಿಚಾರಗಳಿಗೆ ಸಾಂಗತ್ಯ ಬೇಕು: ಕುಡಿಯುವಾಗ ಅಥವಾ ಔಟಿಂಗ್ ಹೋಗುವಾಗ, ಸಿನಿಮಾ ನೋಡಲು ಗಂಡಿಗೆ, ಸಂಗಾತಿ ಸಾಥ್ ನೀಡಿದರೆ ಖುಷಿಯಾಗುತ್ತಾನೆ.

*ಖಾಸಗೀತನಕ್ಕೂ ಆದ್ಯತೆ ನೀಡಬೇಕು : ಎಲ್ಲರಿಗೂ ಕೂಡ ತಮ್ಮದೇ ಆದ ಖಾಸಗೀ ಜೀವನವೊಂದು ಇರುತ್ತದೆ. ಅದಕ್ಕೆ ಎಂದಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.

*ತಪ್ಪುಗಳನ್ನು ಮನ್ನಿಸುವುದು ಮುಖ್ಯ: ಮಾಡಿದ ತಪ್ಪುಗಳನ್ನು ತಿದ್ದಿ, ತಿದ್ದಿಕೊಳ್ಳೋ ಹೆಣ್ಣೆಂದರೆ ಗಂಡಿಗೆ ಎಲ್ಲಿಲ್ಲದ ಖುಷಿ.

*ಧ್ವೇಷ ಸಾಧಿಸಬಾರದು: ದಾಂಪತ್ಯವೆಂದರೆ ಸಣ್ಣಪುಟ್ಟ ವಿರಸಗಳು, ತಪ್ಪುಗಳಾಗೋದು ಸಹಜ. ಅದನ್ನೇ ದೊಡ್ಡ ಮಾಡಿಕೊಂಡು, ಸದಾ ನೆನಪಿಸಿಕೊಳ್ಳುತ್ತಿದ್ದರೆ ಗಂಡಿಗೂ ಯಾವತ್ತೂ ಇಷ್ಟವಾಗೋಲ್ಲ.