ಚಿಂತೆ ಎಕೆ, ಮೈಗ್ರೇನ್‌ಗೂ ಮದ್ದಿದೆ...

Medicines for migraine headache
Highlights

ಬೆಂಬಿಡದೇ ಕಾಡೋ ತಲೆ ನೋವು. ರಾತ್ರಿ ನಿದ್ರೆಯೂ ಇಲ್ಲ, ಹಗಲಲ್ಲಿ ಕೆಲಸ ಮಾಡಲೂ ಇಲ್ಲ. ಇಂಥ ನೋವಿನಿಂದ ದಿನ ಪೂರ್ತಿ ಹಾಳು. ಕಾರಣವಿಲ್ಲದೇ ಕಾಡೋ ಈ ತಲೆ ನೋವು ಮೇಗ್ರೇನ್‌ಗೆ ಮದ್ದಿದೆ. ಏನದು?

ಕಣ್ಣು ಬಿಡಲಾಗದಂಥ ತಲೆನೋವು, ಹೊತ್ತು ಏರಿದಂತೆ ನೋವೂ ಜಾಸ್ತಿಯಾಗುತ್ತದೆ, ಏನೂ ಕೆಲಸ ಮಾಡಲಾಗದ ಸ್ಥಿತಿ, ಯಾರು ಏನೇ ಹೇಳಿದರೂ ಕೋಪ ನೆತ್ತಿಗೇರುತ್ತದೆ. ಸಂಜೆಯಾದಂತೆ ಎಲ್ಲವೂ ತಿರುವು ಮುರುವು. ತಲೆನೋವೂ ತಿಳಿಯಾಗುತ್ತದೆ....

ಅನುಮಾನವೇ ಬೇಡ. ಇದು ಖಂಡಿತ ಮೈಗ್ರೇನೇ. ಬಹಳ ಮಾನಸಿಕ ಒತ್ತಡ, ಹತಾಶೆ, ಸಿಟ್ಟು, ಮಹಿಳೆಯರಲ್ಲಿ ಕೆಲವು ಹಾರ್ಮೋನುಗಳ ಏರುಪೇರು, ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ಕೆಲವು ಅಲರ್ಜಿಗಳು, ದೇಹಕ್ಕೆ ಒಗ್ಗದ ಆಹಾರ ಸೇವನೆ, ಮಲಬದ್ದತೆ ಅಥವಾ ಆ ಸಂಬಂಧಿ ಸಮಸ್ಯೆಗಳು, ಕೆಲವು ನರ ಸಂಬಂಧಿ ದೋಷಗಳು ಮೊದಲಾದವು ಮೈಗ್ರೆನ್‌ಗೆ ಮುಖ್ಯ ಕಾರಣಗಳು. 

ಮೈಗ್ರೇನ್ ಸಮಸ್ಯೆ ಉಂಟಾದಾಗ ಅತಿಯಾದ ತಲೆನೋವು, ಅದರಲ್ಲೂ ಹೆಚ್ಚಾಗಿ ಅರೆತಲೆನೋವು, ವಾಕರಿಕೆ, ವಾಂತಿ, ಆಲಸ್ಯ, ಶಬ್ದ, ತೀವ್ರ ಬೆಳಕು ಅತಿಯಾದ ಯಾವುದೇ ವಾಸನೆ ತಾಳಿಕೊಳ್ಳಲು ಆಗದಿರುವುದು, ಕಣ್ಣು ಮಂಜಾಗುವುದು, ಮಸುಕಾಗುವುದು, ದೃಷ್ಟಿ ಮಧ್ಯೆ ಬೆಳಕಿನ ಕಿರಣ ಕಂಡಂತಾಗುವುದು ಮೊದಲಾದ ಲಕ್ಷಣಗಳು ಕಂಡು ಬರುತ್ತವೆ.

ಆಧುನಿಕ ವೈದ್ಯ ಪದ್ಧತಿಯಲ್ಲಿ ಮೈಗ್ರೇನ್‌ಗೆ ಸಂಪೂರ್ಣ ಚಿಕಿತ್ಸೆ ಅಥವಾ ಪರಿಹಾರ ಇಲ್ಲ. ಕೆಲವು ನೋವು ನಿವಾರಕ ಮಾತ್ರೆಗಳನ್ನು ವೈದ್ಯರು ನೀಡುತ್ತಾರಾದರೂ ಅವೆಲ್ಲ
ತಾತ್ಕಾಲಿಕ ಉಪಶಮನಕ್ಕೆ ಮಾತ್ರ. ಮಾತ್ರೆಯ ಪ್ರಭಾವ ಕಡಿಮೆಯಾದಾಗ ಪುನಃ ತಲೆ ನೋವು ಪ್ರಾರಂಭವಾಗುತ್ತದೆ. ಮೈಗ್ರೇನ್‌ಗೆ ಮದ್ದೆರೆಯುವುದು ಎಂದರೆ ಆಯುರ್ವೇದವೇ ಇದಕ್ಕೆ ಸ್ಥಳೀಯವಾಗಿ ಶಿರೋ ಪಿಚು ಹಾಗೂ ಶಿರೋ ಧಾರಾ ಚಿಕಿತ್ಸೆಗಳು ಪರಿಣಾಮಕಾರಿ. ಕಾಯಿಲೆಯನ್ನು ಬೇರು ಸಮೇತ ಕಿತ್ತೆಸೆಯಬೇಕು ಎಂದರೆ ವಿರೇಚನ, ಬಸ್ತಿ ಹಾಗೂ ನಸ್ಯ ಚಿಕಿತ್ಸೆಗಳು ಸಹಕಾರಿ. ಇವುಗಳಿಂದ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

ತಲೆ ನೋವಿಗೆ ಮಾತ್ರೆ ನುಂಗೋ ಬದಲು ಈ ಔಷಧಿ ಮಾಡಿ

ಮನಸ್ಸಲ್ಲಿ ಹುಟ್ಟಿ, ದೇಹದಲ್ಲಿ ಬೆಳೆಯುವ ವೈರಸ್ ಇದು

ಅಡುಗೆ ಎಣ್ಣೆಯಿಂದ ಆರೋಗ್ಯದ ಮೇಲೆ ಬೀರೋ ಪರಿಣಾಮಗಳು

ನಾಲಿಗೆ ಸ್ವಚ್ಛವಾಗಿರದಿದ್ದರೆ ಹೃದಯಾಘಾತವೂ ಸಂಭವಿಸಬಹುದು

ಈ ಟೈಮಲ್ಲಿ ನೀರು ಕುಡಿಯಬಾರದು

loader