ಬ್ರಷ್ ಮಾಡಿದ್ಮೇಲೆ ನಾಲಿಗೆ ಕ್ಲೀನ್ ಮಾಡಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಕೆಲವರು ಹಲ್ಲಿನ ಆರೋಗ್ಯಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ನಾಲಿಗೆಯ ಸ್ವಚ್ಛತೆಗೆ ಕೊಡುವುದೇ ಇಲ್ಲ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಗಬಹುದು. ಏನವು?
ಬೆಳಗ್ಗೆದ್ದು ಬ್ರಶ್ ಮಾಡಿದ ಬಳಿಕ ನಾಲಿಗೆ ಕ್ಲೀನಿಂಗ್ ಮಾಡ್ತೀವಿ. ಕೆಲವೊಮ್ಮೆ ನಾಲಿಗೆ ಮೇಲೆ ತೆಳು ಬಿಳಿ ಪದರ ಮೂಡಿರುತ್ತೆ. ಅದನ್ನು ತೆಗೆದು ಸ್ವಚ್ಛಗೊಳಿಸ್ತೇವೆ. ಹಾಗೆಯೇ ನಾಲಿಗೆ ಕ್ಲೀನ್ ಮಾಡದ ಕೆಲವರೂ ಇದ್ದಾರೆ. ಅವರಿಗಾಗುವ ಸಮಸ್ಯೆ ಏನು? ಇಲ್ಲಿದೆ ಡೀಟೈಲ್ಸ್.
- ಬೆಳಗ್ಗೆ ಏಳುವಾಗ ನಮ್ಮ ಬಾಯಲ್ಲಿ 700ರಷ್ಟು ಬ್ಯಾಕ್ಟೀರಿಯಾಗಳು ಇರುತ್ತವೆ. ಅವೆಲ್ಲ ಅಪಾಯಕಾರಿಗಳಲ್ಲ. ಆದರೆ ಕೆಲವೊಂದು ಅಪಾಯಕಾರಿ ಬ್ಯಾಕ್ಟೀರಿಯಾಗಳೂ
ಇವೆ. ಇವುಗಳಿಂದ ನಾಲಿಗೆ ಸೀಳು, ಬೊಬ್ಬೆ ಏಳುವುದು, ಅಜೀರ್ಣ ಮೊದಲಾದ ತೊಂದರೆಗಳಾಗಬಹುದು.
- ಕೆಲವರು ಹತ್ತಿರ ಬಂದು ಮಾತಾಡ್ತಿದ್ರೆ ಅವರ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತೆ, ಅದು ನಾಲಿಗೆ ಸ್ವಚ್ಛ ಮಾಡದೇ ಇರುವುದರಿಂದಲೂ ಆಗಬಹುದು.
- ಉಸಿರಿನ ದುರ್ಗಂಧಕ್ಕೂ ಇದು ಕಾರಣವಾಗುತ್ತದೆ.
- ನಾಲಿಗೆ ರುಚಿ ಇರಲ್ಲ. ನಾಲಿಗೆಯ ರಸಗ್ರಹಣ ಸಾಮರ್ಥ್ಯ ಕಡಿಮೆಯಾಗುತ್ತೆ.
- ನಾಲಿಗೆಯ ಮೇಲ್ಮೈ ನಿಧಾನಕ್ಕೆ ಕಪ್ಪು ಬಣ್ಣಕ್ಕೆ ತಿರುಗುತ್ತೆ.
- ಹಲ್ಲು ಕೆಡಬಹುದು, ಹಾಳಾಗಬಹುದು.
- ದೀರ್ಘ ಅವಧಿಯಲ್ಲಿ ಇದು ಹೃದಯಾಘಾತ, ಪಾರ್ಶ್ವವಾಯು, ಗರ್ಭಪಾತಕ್ಕೆ ಎಡೆಮಾಡಿಕೊಡುತ್ತದೆ.

Last Updated 27, Jun 2018, 5:46 PM IST