1) ಜೀವನದ ಎಲ್ಲಾ ಹಂತದಲ್ಲೂ ನಿಮ್ಮ ಜೊತೆ ಹೊಂದಾಣಿಕೆಯಾಗಿ ಇರುತ್ತಾರೆ ಎಂಬ ಮನೋಭಾವನೆ ನಿಮಗೆ ಬಂದರೆ ಅವರ ಜೊತೆ ವಿವಾಹವಾಗಿ

2) ನಿಮ್ಮ ಕಷ್ಟಸುಖಗಳಲ್ಲಿ ನಿಮ್ಮನ್ನು ಸರಿದೂಗಿಸಿಕೊಂಡು ಹೋಗುವ ಹಾಗೂ ನಿಮ್ಮ ಬಗ್ಗೆ ಎಲ್ಲ ತಿಳಿದುಕೊಂಡಿರುವ ವ್ಯಕ್ತಿಗಳನ್ನು ಕೈಹಿಡಿಯಿರಿ

3) ಎಂಥ ಸಂದರ್ಭವಿದ್ದರೂ ನಿಮಗೆ ಆ ವ್ಯಕ್ತಿ ಗೌರವ ಕೊಡಬೇಕು. ಆಗ ಮಾತ್ರ ಇಬ್ಬರಿಂದ ಸುಖಮಯ ಜೀವನ ಸಾಧ್ಯ

4) ನಿಮ್ಮ ಕಷ್ಟಗಳನ್ನು ಅರ್ಥಮಾಡಿಕೊಂಡು ಸರಿದೂಗಿಸಿಕೊಂಡು ಹೋಗುವ ವ್ಯಕ್ತಿ ನಿಮಗೆ ಹೆಚ್ಚು ಸೂಕ್ತ

5) ಪ್ರೇಮಿಸುತ್ತಿರುವಾಗಲೇ ಆ ವ್ಯಕ್ತಿಯನ್ನು ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಸಾಧ್ಯವಾದಷ್ಟು ಪರಿಚಯಿಸಿ. ಆಗ ಅವರನ್ನು ನಿಮ್ಮ ಹತ್ತಿರದವರು ಹೇಗೆ ಗಮನಿಸಿಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತಾಗುತ್ತದೆ. ನಂತರಾನಂತರದಲ್ಲಿ ಆ ವ್ಯಕ್ತಿಯ ವ್ಯಕ್ತಿತ್ವ ನಿಮಗೆ ಗೊತ್ತಾಗುತ್ತದೆ.

6) ನಿಮ್ಮನ್ನು ಅನಾವಶ್ಯಕವಾಗಿ ಮನಸ್ಸಿಗೆ ನೋವುಂಟು ಮಾಡುವ ವ್ಯಕ್ತಿಯನ್ನು ಮದುವೆಯಾಗಬೇಡಿ