ಐಸ್ ಕೊಳದಲ್ಲಿ ಮುಳುಗುತ್ತಿದ್ದ ಸಾಕುನಾಯಿಯನ್ನು ಉಳಿಸಲು ಕೊರೆಯುವ ಚಳಿಗೆ ಸವಾಲೆಸೆದು ಮಂಜುಗಡ್ಡೆಯ ನದಿಯಲ್ಲಿ ಈಜಿದ್ದಾನೆ.
ಸಾಕು ಪ್ರಾಣಿಗೋಸ್ಕರ ಮನುಷ್ಯ ಏನು ಬೇಕಾದರೂ ಮಾಡುತ್ತಾನೆ. ಇಲ್ಲೊಬ್ಬ ಐಸ್ ಕೊಳದಲ್ಲಿ ಮುಳುಗುತ್ತಿದ್ದ ಸಾಕುನಾಯಿಯನ್ನು ಉಳಿಸಲು ಕೊರೆಯುವ ಚಳಿಗೆ ಸವಾಲೆಸೆದು ಮಂಜುಗಡ್ಡೆಯ ನದಿಯಲ್ಲಿ ಈಜಿದ್ದಾನೆ. ಐಸ್ ನದಿಯಲ್ಲಿ ಅಕಸ್ಮಾತ್ ಸಿಲುಕಿಕೊಂಡ ಶ್ವಾನ ಹೊರ ಬರಲಾರದೆ ಒದ್ದಾಡುತ್ತಿತ್ತು. ಇದನ್ನು ನೋಡಿದ ಅದರ ಯಜಮಾನ ಬರಿ ಮೈನಲ್ಲಿ ನದಿಗೆ ಹಾರಿ ಮಂಜುಗಡ್ಡೆಯನ್ನು ತನ್ನ ಕೈ ಯಿಂದಲೇ ಒಡೆಯುತ್ತಾ ನಾಯಿ ಬಳಿ ದಾವಿಸಿ ಮೂಖ ಪ್ರಾಣಿಯ ಪ್ರಾಣ ಉಳಿಸಿದ್ದಾನೆ. ಈಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
