ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಹೊಂದಿರೋ ವ್ಯಕ್ತಿ ಇವ್ರೇ ನೋಡಿ; ಅಂಬಾನಿ, ಟಾಟಾ, ಬಿಲ್‌ಗೇಟ್ಸ್ ಅಲ್ಲ..
ಭಾರತದಲ್ಲಿ ಮುಕೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಅವರಂತಹ ಅನೇಕ ಅತಿ ಶ್ರೀಮಂತ ಉದ್ಯಮಿಗಳಿದ್ದಾರೆ. ಈ ಬಿಲಿಯನೇರ್‌ಗಳು ಐಷಾರಾಮಿ ಜೀವನಶೈಲಿ ಅನುಸರಿಸುತ್ತಾರೆ. ಸಾವಿರಾರು ಕಾರುಗಳು, ಬಂಗಲೆಗಳು ಮತ್ತು ಲೆಕ್ಕವಿಲ್ಲದಷ್ಟು ಆಸ್ತಿಯನ್ನು ಹೊಂದಿದ್ದಾರೆ. ಆದರೆ, ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್‌ನ ಮಾಲೀಕರು ಈ ಭಾರತೀಯರಲ್ಲ. ಮತ್ಯಾರು?
ಭಾರತದಲ್ಲಿ ಮುಕೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಅವರಂತಹ ಅನೇಕ ಅತಿ ಶ್ರೀಮಂತ ಉದ್ಯಮಿಗಳಿದ್ದಾರೆ. ಈ ಬಿಲಿಯನೇರ್‌ಗಳು ಐಷಾರಾಮಿ ಜೀವನಶೈಲಿ ಅನುಸರಿಸುತ್ತಾರೆ. ಸಾವಿರಾರು ಕಾರುಗಳು, ಬಂಗಲೆಗಳು ಮತ್ತು ಲೆಕ್ಕವಿಲ್ಲದಷ್ಟು ಆಸ್ತಿಯನ್ನು ಹೊಂದಿದ್ದಾರೆ. ಆದರೆ, ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್‌ನ ಮಾಲೀಕರು ಈ ಭಾರತೀಯರಲ್ಲ. ಹೌದು, ಅಚ್ಚರಿ ಅನಿಸಿದರೂ ಇದು ನಿಜ. ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್‌ನ ಮಾಲೀಕರು ಅಂಬಾನಿ, ಅದಾನಿ, ಟಾಟಾ ಯಾರೂ ಅಲ್ಲ. ಬದಲಿಗೆ ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ ಸೌದಿ ಅರೇಬಿಯಾ ರಾಜಕುಮಾರ ಮತ್ತು ಉದ್ಯಮಿ ಅಲ್ ವಲೀದ್ ಬಿನ್ ತಲಾಲ್ ಅಲ್ ಸೌದ್.
ಸೌದಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅಲ್-ಸೌದ್ ಅವರು ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್ (Costly Private Jet) ಅನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ, ಇವರು ಪ್ರಮುಖ ಮಧ್ಯಪ್ರಾಚ್ಯ ರಾಜಮನೆತನದ ಸದಸ್ಯರಾಗಿದ್ದಾರೆ ಮತ್ತು ಭಾರಿ ಸಂಪತ್ತನ್ನು ಹೊಂದಿದ್ದಾರೆ.ಇದು USD 500 ಮಿಲಿಯನ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ 4100 ಕೋಟಿ ರೂ. ಅಂಬಾನಿ ಮತ್ತು ಟಾಟಾ ಇಬ್ಬರೂ ಖಾಸಗಿ ಜೆಟ್‌ಗಳನ್ನು ಹೊಂದಿದ್ದರೂ, ಅವುಗಳ ಮೌಲ್ಯಗಳು ಇದಕ್ಕೆ ಹೋಲಿಸಿದಾಗ ತುಂಬಾ ಕಡಿಮೆ.
ಭಾರತದ ಈ ಕ್ರಿಕೆಟರ್ಸ್‌ಗಳಲ್ಲಿದೆ ಲಕ್ಷುರಿ ಪ್ರೈವೆಟ್ ಜೆಟ್..!
ಅಂಬಾನಿ, ಅದಾನಿ ಬಳಿಯಿರೋದು ತುಂಬಾ ಅಗ್ಗದ ಜೆಟ್
ಉದ್ಯಮಿ ಅಲ್ ವಲೀದ್ ಬಿನ್ ತಲಾಲ್ ಅಲ್-ಸೌದ್ ಒಡೆತನದ ಖಾಸಗಿ ಜೆಟ್ ಬೋಯಿಂಗ್ 747 ಆಗಿದ್ದು, ಇದು ಸಾಮಾನ್ಯವಾಗಿ USD 150 ಮಿಲಿಯನ್ ನಿಂದ 200 ಮಿಲಿಯನ್ ವೆಚ್ಚವಾಗುತ್ತದೆ. ವಿಮಾನಕ್ಕೆ (Flight) ಮಾಡಿದ ಮಾರ್ಪಾಡುಗಳು ಮತ್ತು ಐಷಾರಾಮಿ ಸೇರ್ಪಡೆಗಳಿಂದಾಗಿ ರಾಜಕುಮಾರ (Prince) ಒಡೆತನದ ಖಾಸಗಿ ಜೆಟ್ ಮಾದರಿಯ ಒಟ್ಟಾರೆ ವೆಚ್ಚ USD 500 ಮಿಲಿಯನ್‌ಗಿಂತಲೂ ಹೆಚ್ಚಿದೆ.
ತಲಾಲ್ ಅಲ್-ಸೌದ್ ಅವರ ಖಾಸಗಿ ವಿಮಾನವು 800 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ವಿಮಾನವು 10 ಆಸನಗಳ ಡೈನಿಂಗ್ ಹಾಲ್, ಐಷಾರಾಮಿ ಮಲಗುವ ಕೋಣೆ, ಪ್ರಾರ್ಥನಾ ಕೊಠಡಿ, ಮನರಂಜನಾ ಕೊಠಡಿ, ಹೋಮ್ ಥಿಯೇಟರ್ ವ್ಯವಸ್ಥೆ ಮತ್ತು ಸ್ಪಾವನ್ನು ಒಳಗೊಂಡಿದೆ. ಫೋರ್ಬ್ಸ್ ಪ್ರಕಾರ ಅಲ್ ವಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ನಿವ್ವಳ ಮೌಲ್ಯವು 1.55 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ರತನ್ ಟಾಟಾ ಮತ್ತು ಮುಖೇಶ್ ಅಂಬಾನಿಯವರಿಗಿಂತ ಕಡಿಮೆಯಾಗಿದೆ.
ಬಾಲಿವುಡ್ ನಟನರು ಮಾತ್ರವಲ್ಲ ದಕ್ಷಿಣದ ಈ ಸ್ಟಾರ್ಸ್ ಸಹ ಖಾಸಗಿ ಜೆಟ್ ಮಾಲೀಕರು
ಮುಕೇಶ್ ಅಂಬಾನಿ ಬಳಿಯಿರೋದು 603 ಕೋಟಿ ರೂ ಬೆಲೆಬಾಳುವ ಜೆಟ್
ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಬೋಯಿಂಗ್ ಬಿಸಿನೆಸ್ ಜೆಟ್‌ನ್ನು ಹೊಂದಿದ್ದಾರೆ, ಇದು 603 ಕೋಟಿ ರೂ ಬೆಲೆಬಾಳುತ್ತದೆ. ಅದಾನಿ ಗ್ರೂಪ್‌ನ ಗೌತಮ್ ಅದಾನಿ ಅನೇಕ ಖಾಸಗಿ ಜೆಟ್‌ಗಳನ್ನು ಸಹ ಹೊಂದಿದ್ದಾರೆ. ಬೊಂಬಾರ್ಡಿಯರ್ ಚಾಲೆಂಜರ್ 605, ಎಂಬ್ರೇರ್ ಲೆಗಸಿ 650, ಮತ್ತು ಹಾಕರ್ ಬೀಚ್‌ಕ್ರಾಫ್ಟ್ 850XP ಇವರಲ್ಲಿದೆ.
ಟಾಟಾ ಗ್ರೂಪ್‌ನ ರತನ್ ಟಾಟಾ ಅತ್ಯಂತ ದುಬಾರಿ ಖಾಸಗಿ ಜೆಟ್ ಮಾಡೆಲ್‌ಗಳಾದ ಡಸಾಲ್ಟ್ ಫಾಲ್ಕನ್ 2000ನ್ನು ಹೊಂದಿದ್ದಾರೆ, ಇದು 200 ಕೋಟಿ ರೂ. ಬೆಲೆ ಬಾಳುತ್ತದೆ. ಖಾಸಗಿ ಜೆಟ್‌ಗಳನ್ನು ಹೊಂದಿರುವ ಇತರ ಬಿಲಿಯನೇರ್‌ಗಳೆಂದರೆ ಎಲೋನ್ ಮಸ್ಕ್, ಬಿಲ್ ಗೇಟ್ಸ್ ಮತ್ತು ಜೆಫ್ ಬೆಜೊ ಆಗಿದ್ದಾರೆ.