ಪ್ರೇಮಿಗಳ ದಿನದಂದು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ. ಗೊಂಬೆ ಹಾಗೂ ಚಾಕೋಲೇಟ್‌ಗೂ ಹೆಚ್ಚೇ ಇರುತ್ತೆ ಡಿಮ್ಯಾಂಡ್. ಆದರೆ, ಗುಲಾಬಿಯಷ್ಟಲ್ಲ. ಅಷ್ಟಕ್ಕೂ ಲವರ್ಸ್‌ಗ್ಯಾಕ್ ಈ ರೋಸ್ ಮೇಲೆ ಈ ಪರಿ ಲವ್?

ಸಾಮಾನ್ಯ ದಿನಗಳಲ್ಲಿ ಒಂದು ಗುಲಾಬಿಗೆ 15 ರೂ. ಇರುತ್ತದೆ ಆದರೆ ಪ್ರೇಮಿಗಳ ದಿನ 30 ರೂ. ಅಗುತ್ತೆ.

ಹೂ ಮಾರಾಟಗಾರರೂ ಈ ದಿನ ಫುಲ್ ಖುಷ್. ಈ ಒಂದು ದಿನದಲ್ಲೇ ವಿಶ್ವದಲ್ಲಿ ಸುಮಾರು 250 ಮಿಲಿಯನ್ ಗುಲಾಬಿ ಮಾರಾಟವಾಗುತ್ತದೆ.

 

ಇನ್ನು ಹೂ ಗುಚ್ಛಗಳು 100 ರೂ. ಇದ್ದರೆ ಪ್ರೇಮಿಗಳ ದಿನದಂದು 300- 500 ರೂ. ಆಗುತ್ತದೆ. ಅಮೆರಿಕ ಸರ್ವೆ ಪ್ರಕಾರ ಫೆಬ್ರವರಿಯಲ್ಲಿ ಅದರಲ್ಲೋ ಹೆಚ್ಚಾಗಿ 14ನೇ ತಾರೀಖಿನಲ್ಲಿ $19 ಬಿಲಿಯನ್ ಹೂವು ವ್ಯಾಪಾರವಾಗುತ್ತದೆ. ಸುಮಾರು ಕೋಟ್ಯಾಂತರ ರೂ. ವಹಿವಾಟು ನಡೆಯುತ್ತದೆ.

ಕೆಂಪು ಗುಲಾಬಿ ಪ್ರೀತಿಯ ಸಂಕೇತ. ಉಳಿದವು ಕೆಲವು ಅಲಂಕಾರಕ್ಕೆ ಮಾತ್ರ. ಆದರೂ ನೀಲಿ ಬಣ್ಣ ಗುಲಾಬಿ, ಪಿಂಕ್, ಬಿಳಿ, ಹಳದಿ ಬಣ್ಣದ ಗುಲಾಬಿಗಳು ಕಡಿಮೆ ಬೆಲೆ ಅಂದರೆ 20 ರೂ.ಗೆ ಸಿಗುತ್ತದೆ.

 

ಮಾಲ್‌ಗಳ ಸ್ವಾಗತದ ದಾರಿಯಲ್ಲಿ ಹೆಚ್ಚು ಗುಲಾಬಿಯನ್ನು ಅಲಂಕರಿಸುತ್ತಾರೆ. ಅಷ್ಟೇ ಏಕೆ ಗೂಂಬೆಗಳಂತೂ ಅಬ್ಬಾ..! ಸಾವಿರಾರೂ ರೂ. ಮುಟ್ಟಿತ್ತದೆ.

 

ಷೇಕ್ಸ್‌ಪಿಯರ್ ಹೇಳುವ ಪ್ರೇಮ ಕಥೆಯಲ್ಲೂ ಕೆಂಪು ಗುಲಾಬಿ ಪಾತ್ರ ದೊಡ್ಡದು. ಏಕೆಂದರ ಕೆಂಪು ಧೈರ್ಯ, ಗೌರವ ಹಾಗೂ ಸಮೃದ್ಧಿ ಸಂಕೇತ.

ಇಷ್ಟ ಪಡುವರೊಂದಿಗೆ ಪ್ರೀತಿ ವಿಚಾರ ಹಂಚಿಕೊಳ್ಳಲು, ಹಿಂಜರಿಯುವವರಿದ್ದರೆ ಕೆಂಪು ಗುಲಾಬಿ ಕೊಟ್ಟರೆ ಸಾಕು. ಪ್ರೀತಿ ಆರಂಭದಲ್ಲಿರುವವರಿಗೆ ಗುಲಾಬಿ ಗುಚ್ಛ ಕೊಟ್ಟರೆ, ಸಾಕು ಎಲ್ಲವೂ ಅರ್ಥವಾಗುತ್ತದೆ.

ವ್ಯಾಲಂಟೈನ್ಸ್ ಡೇಗೆ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!