ಇದಕ್ಕಿದ್ದಂತೆ ಕೆಂಪಾಯ್ತು ಪೂರ್ತಿ ನದಿ.. ಪಕ್ಕಸುಳಿಯೋಕು ಹೆದರಿದ್ರು ಜನ, ಪಕ್ಷಿ ಪ್ರಾಣಿ.. ಆಗಿದ್ದೇನು..?

ರಷ್ಯಾದ ಒಂದು ನದಿ ಸಂಪೂರ್ಣ ಗಾಢ ಕೆಂಬಣ್ಣಕ್ಕೆ ತಿರುಗಿ ಜನರನ್ನು, ಜಾನುವಾರುಗಳನ್ನು ಹೆಸರಿಸಿಬಿಟ್ಟಿದೆ. ಪಕ್ಷಿ, ಪ್ರಾಣಿಗಳೂ ನದಿಯ ಹತ್ತಿರ ಸುಳಿಯುವುದಕ್ಕೂ ಭಯ ಪಟ್ಟಿವೆ.

ಇಸ್ಕಿತಿಮ್ಕಾ ನದಿಯಲ್ಲಿ ನಿಗೂಢವಾದ ವರ್ಣ ಬದಲಾವಣೆ ಕಂಡು ಬಂದಿದೆ. ಕೆಮೆರೋವೋ ಇಂಡಸ್ಟ್ರಿಯಲ್ ನಗರದ ಜನರಂತೂ ಇದನ್ನು ನೋಡಿ ಭಯಭೀತರಾಗಿದ್ದರು. ಮಾಲೀನ್ಯದಿಂದ ಬಣ್ಣ ಬದಲಾವಣೆ ಸಂಭವಿಸಿದೆ ಎನ್ನಲಾಗಿದೆ.

ಇದೆಂಥಾ ಹುಚ್ಚುತನ..? ನವ ಜೋಡಿ ರಕ್ತಸಿಕ್ತ..! ಫೊಟೋಸ್ ನೋಡಿ

ರಷ್ಯಾದ ದಕ್ಷಿಣ ಭಾಗದಲ್ಲಿರುವ ನದಿಬಣ್ಣ ಬದಲಾಯಿಸಿಕೊಂಡ ಕಾರಣ ಹಂಸಗಳೂ ನದಿಗಿಳಿಯಲಿಲ್ಲ. ನದಿಯ ನೀರು ಅಸಹಜವಾಗಿಗಿ ಕೆಂಬಣ್ಣದಿಂದ ಹರಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಲ್ಲಿ ಯಾವುದೇ ಹಂಚ ನದಿಗಿಳಿಯುತ್ತಿಲ್ಲ,

Scroll to load tweet…

ಎಲ್ಲವೂ ತೀರದಲ್ಲೇ ಇವೆ ಎಂದಿದ್ದಾರೆ ಅಲ್ಲಿನ ನಿವಾಸಿಗಳು. ಮಾಲೀನ್ಯ ಬ್ಲಾಕ್ ಆಗಿ ಈ ರೀತಿ ನದಿಯ ಬಣ್ಣ ಬದಾಗಿದೆ ಎಂದು ಹೇಳಲಾಗಿದೆ. ಇದನ್ನು ತೆರವುಗೊಳಿಸುವ ಕಾರ್ಯವೂ ನಡೆಯುತ್ತಿದೆ.

Scroll to load tweet…