ಆರ್‌ಬಿಐನಿಂದ ನೋಟಿನ ರೀತಿ ಬಿಗಿ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ! ?

First Published 1, Apr 2018, 7:29 AM IST
KP SulSuddi Column
Highlights

ಪ್ರತಿ ಪ್ರಶ್ನೆ ಪತ್ರಿಕೆಗೂ ಜಿಪಿಎಸ್ ಅಳವಡಿಸಲಾಗಿದ್ದು, ಇದರ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನಿಗಾ ಇಡಲಾಗುತ್ತದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಮಹತ್ವದ ನಿರ್ಧಾರ ಕೈಗೊಂಡಿರುವ ಸರ್ಕಾರ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುವ ಜವಾಬ್ದಾರಿಯನ್ನು ಆರ್‌ಬಿಐಗೆ ನೀಡಿದೆ. ಹೀಗಾಗಿ ನೋಟಿನ ರೀತಿಯಲ್ಲೇ ಪ್ರಶ್ನೆ ಪತ್ರಿಕೆಗಳಿಗೂ ನಕಲು ಮಾಡಲಾಗದಂತಹ ಸುರಕ್ಷತಾ ಕ್ರಮಗಳನ್ನು ಆರ್‌ಬಿಐ ಅಳವಡಿಸಲಿದೆ.

ಆರ್‌ಬಿಐ ಪ್ರಿಟಿಂಗ್ ಪ್ರೆಸ್‌ನಲ್ಲಿ ನೋಟಿನ ಜೊತೆಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ. ಈ ಪ್ರಶ್ನೆ ಪತ್ರಿಕೆಯ ವಿಶೇಷವೆಂದರೆ ಅದರಲ್ಲಿ ರಹಸ್ಯ ತಂತ್ರಜ್ಞಾನ ಅಳವಡಿಸಲಾಗಿದ್ದು, ಪರೀಕ್ಷೆಗಿಂತ ಮುನ್ನ ಕವರ್ ಓಪನ್ ಮಾಡಿದರೆ ಆರ್‌ಬಿಐನ ಮುಖ್ಯಕಚೇರಿಯಲ್ಲಿ ಸೈರನ್ ಹೊಡೆದುಕೊಳ್ಳಲಿದೆ. ಪ್ರತಿ ಪ್ರಶ್ನೆ ಪತ್ರಿಕೆಗೂ ಜಿಪಿಎಸ್ ಅಳವಡಿಸಲಾಗಿದ್ದು, ಇದರ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನಿಗಾ ಇಡಲಾಗುತ್ತದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.

(ಸುಳ್ ಸುದ್ದಿ ವಾರ್ತೆ: ಓದುಗರ ಬಾಯಲ್ಲಿ ನಗೆ ತರಿಸುವುದು ಈ ಅಂಕಣದ ಉದ್ದೇಶ: ಸುದ್ದಿಗೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ )

 

loader