ಟ್ರಿಪ್ ಹೋಗಲು ಯಾರಿಗೆ ಇಷ್ಟವಿರಲ್ಲ ಹೇಳಿ? ಅದರಲ್ಲೂ  ಅಡ್ವೆಂಚರಸ್ ಆಗಿರಬೇಕೆಂದು ಬಯಸುವವರೇ ಜಾಸ್ತಿ. ನಿಮ್ಮ ಟ್ರಿಪ್ ಅಡ್ವೆಂಚರಸ್ ಆಗಿರಬೇಕು ಅಂದ್ರೆ ಮೊದಲಿಗೆ ಹೈಕಿಂಗ್ ಬಗ್ಗೆ ತಿಳಿದುಕೊಳ್ಳಬೇಕು.  ಆಗ ನಿಮ್ಮ  ಟ್ರಿಪ್ಪನ್ನು ಇನ್ನಷ್ಟು ಎಂಜಾಯ್ ಮಾಡಬಹುದು. 

ಟ್ರಿಪ್ ಹೋಗಲು ಯಾರಿಗೆ ಇಷ್ಟವಿರಲ್ಲ ಹೇಳಿ? ಅದರಲ್ಲೂ ಅಡ್ವೆಂಚರಸ್ ಆಗಿರಬೇಕೆಂದು ಬಯಸುವವರೇ ಜಾಸ್ತಿ. ನಿಮ್ಮ ಟ್ರಿಪ್ ಅಡ್ವೆಂಚರಸ್ ಆಗಿರಬೇಕು ಅಂದ್ರೆ ಮೊದಲಿಗೆ ಹೈಕಿಂಗ್ ಬಗ್ಗೆ ತಿಳಿದುಕೊಳ್ಳಬೇಕು.

ಏನಿದು ಹೈಕಿಂಗ್ ? 

ಹೈಕಿಂಗ್ ಅಂದರೆ ತುಂಬಾ ದೂರದವರೆಗೆ ನಡೆದುಕೊಂಡು ಯಾತ್ರೆ ಮಾಡುವುದು. ಇದೊಂಥರಾ ಫಿಸಿಕಲ್ ಆ್ಯಕ್ಟಿವಿಟಿಯಾಗಿದೆ. ಇದು ಶರೀರದ ಜೊತೆಗೆ ಮೆದುಳಿನ ಮೇಲೆಯೂ ಪರಿಣಾಮ ಬೀರುತ್ತದೆ. ಇದರ ಪಾಸಿಟಿವ್ ಪರಿಣಾಮ ನಿಮ್ಮ ಶರೀರದ ಮೇಲೆ ಬೀಳುತ್ತದೆ. ನೀವು ಆಯ್ಕೆ ಮಾಡಿಕೊಂಡ ದಾರಿ ಹೇಗಿದೆ ಹಾಗೂ ಎಷ್ಟು ಕಷ್ಟವಾಗಿದೆ ಎಂಬುದರ ಮೇಲೆ ಹೈಕಿಂಗ್ ಸಾಹಸಮಯವಾಗಿದೆಯೇ ಎಂಬುದು ನಿರ್ಧಾರವಾಗುತ್ತದೆ.

ಹೈಕಿಂಗ್ ಮಾಡುವ ವೇಳೆ ಈ ವಿಷಯಗಳ ಬಗ್ಗೆ ಗಮನ ಹರಿಸಿ

ಹೈಕಿಂಗ್ ಗೆ ಹೋಗುವಿರಾದರೆ ಕೆಲವೊಂದು ಮುಖ್ಯವಾದ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ನೇವಿಗೇಶನ್ ಮ್ಯಾಪ್, ಕಂಪಾಸ್, ಸನ್ ಸ್ಕ್ರೀನ್, ಎಕ್ಸ್ ಟ್ರಾ ಬಟ್ಟೆ, ಟಾರ್ಚ್ ಅಥವಾ ಹೆಡ್ ಲ್ಯಾಂಪ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಬೆಂಕಿ ಉರಿಸಲು ಲೈಟರ್, ಕ್ಯಾಂಡಲ್, ವಾಟರ್ ಪ್ರೂಫ್ ಮ್ಯಾಚ್ ಸ್ಟಿಕ್, ಪೌಷ್ಟಿಕ ಆಹಾರ, ನೀರು ಮತ್ತು ಟೆಂಟ್ ಅಥವಾ ಪ್ಲಾಸ್ಟಿಕ್ ಟ್ಯೂಬ್ ಎಲ್ಲವೂ ಇರಲಿ. 

ಗಮನಿಸಬೇಕಾದ ಇತರ ವಿಷಯಗಳು : 
- ಮೊದಲಿಗೆ ಹೈಕಿಂಗ್ ಮಾಡುವುದಾದರೆ ಸಣ್ಣ ಅಥವಾ ಹತ್ತಿರದ ತಾಣವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ದಿನದಲ್ಲಿ 10-12 ಕಿಲೋಮೀಟರ್ ಕ್ಕಿಂತ ಹೆಚ್ಚು ಹೈಕಿಂಗ್ ಮಾಡಬೇಡಿ. 

- ಮೊದಲ ಬಾರಿ ಹೈಕಿಂಗ್ ಮಾಡುತ್ತಿದ್ದರೆ ಗ್ರೂಪ್ ಜೊತೆ ಹೋಗಿ ಅಥವಾ ಗೈಡ್ ನ ಸಹಾಯ ಪಡೆದರೆ ಉತ್ತಮ. 

-ಉತ್ತಮ ಶೂ ನಿಮ್ಮ ಬಳಿ ಇರಲಿ. ಇದು ಹೈಕಿಂಗ್ ಮಾಡಲು ತುಂಬಾ ಮುಖ್ಯವಾಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಟೆಂಟ್ ಇದ್ದರೆ ಉತ್ತಮ. 

-ತಿನ್ನುವ ಆಹಾರ ಕುಡಿಯಲು ನೀರು ಸಾಕಷ್ಟು ಪ್ರಮಾಣದಲ್ಲಿದ್ದರೆ ಉತ್ತಮ. ಚಾಕಲೇಟ್ ಅಥವಾ ಟಾಫಿ ಇರಲಿ. 

-ನೀವು ನಡೆಯುತ್ತಿರುವ ಜಾಗ ಅಥವಾ ರಸ್ತೆಯ ಬಗ್ಗೆ ಮೊದಲೇ ಮಾಹಿತಿ ಸಂಗ್ರಹಿಸಿ ಇದರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. 

-ಹೈಕಿಂಗ್ ಮಾಡುವಾಗ ಯಾವತ್ತೂ ಟೈಟ್ ಆಗಿರುವ ಅಥವಾ ಲೂಸ್ ಆಗಿರುವ ಡ್ರೆಸ್ ಧರಿಸಬೇಡಿ. ಆರಾಮದಾಯಕ ಡ್ರೆಸ್ ಧರಿಸಿ ಜೊತೆಗೆ ಅಲ್ಲಿನ ಹವಮಾನಕ್ಕೆ ಹೊಂದಿಕೊಳ್ಳುವ ಡ್ರೆಸ್ ಧರಿಸಿದರೆ ಆರಾಮದಾಯವಾಗಿರುತ್ತದೆ. 

-ಕಾಡಿನ ಜಾಗದಲ್ಲಿ ಹೋಗುತ್ತಿದ್ದರೆ ಪ್ರಾಣಿಗಳನ್ನು ದೂರದಿಂದಲೇ ನೋಡಿ ಅದರ ಹತ್ತಿರ ಹೋಗಲು ಪ್ರಯತ್ನಿಸಬೇಡಿ. 

-ಬೇಡವಾದ ವಸ್ತುಗಳನ್ನು ದಾರಿಯಲ್ಲಿ ಬಿಡಬೇಡಿ. ಡಸ್ಟ್ ಬಿನ್ ಗೆ ಹಾಕಿ, ಇಲ್ಲವಾದರೆ ನಿಮ್ಮೊಂದಿಗೆ ವಾಪಸ್ ತೆಗೆದುಕೊಂಡು ಬನ್ನಿ .