Asianet Suvarna News Asianet Suvarna News

ನೋಕಿಯಾ ಹ್ಯಾಂಡ್‌ಸೆಟ್‌ನಲ್ಲಿದ್ದ ಸ್ನೇಕ್ ಗೇಮ್ ನೆನಪಿಸಿದ ರಿಯಲ್ ಸ್ನೇಕ್

ನೋಕಿಯಾ ಹ್ಯಾಂಡ್‌ಸೆಟ್‌ಗಳಲ್ಲಿ ಬರುತ್ತಿದ್ದ ಸ್ನೇಕ್ ಗೇಮ್‌ ಅನ್ನು ಹೋಲುವ ಹಾವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Kingsnakes Wall Climb Reminds Netizens of Classic Nokia Game
Author
First Published Oct 3, 2024, 4:03 PM IST | Last Updated Oct 3, 2024, 4:03 PM IST

ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಅದರಲ್ಲಿವೆ ತರಹೇವಾರಿ ವೀಡಿಯೋ ಗೇಮ್‌ಗಳು, ಹೀಗಾಗಿ ಈ ಜನರೇಷನ್‌ನ ಮಕ್ಕಳಿಗೆ ನೋಕಿಯಾ ಸೆಟ್‌ನಲ್ಲಿದ್ದ ಈ ಗೇಮ್‌ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ನೀವು ಹಳೆ ನೋಕಿಯಾ ಹ್ಯಾಂಡ್‌ ಸೆಟ್‌ ಬಳಸಿದವರಗಿದ್ದರೆ ನಿಮಗೆ ಅದರಲ್ಲಿದ್ದ ಏಕೈಕ ಸ್ನೇಕ್ ಗೇಮ್ ಬಗ್ಗೆ ನೆನಪಿರಬಹುದು. ಈ ಗೇಮನ್ನ ನೆನಪಿಸುವ ನಿಜವಾದ ಹಾವೊಂದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹುತೇಕ ನೆಟ್ಟಿಗರು ಈ ರಿಯಲ್ ಸ್ನೇಕ್ ನೋಡಿ ತಮ್ಮ ಹಳೆಯ ನೋಕಿಯಾ ಸೆಟ್‌ನ್ನು ನೆನಪು ಮಾಡಿಕೊಂಡಿದ್ದಾರೆ. 

ನೋಕಿಯಾ ಸೆಟ್ ಎಂದರೆ ಅನೇಕರಿಗೆ ನೋಸ್ಟಲಾಜಿಯಾ ಫೀಲ್‌, ಅಂದಾಜು ಎರಡು ದಶಕಗಳ ಹಿಂದೆ ಮನೆ ಮನದ ಜೀವನಾಡಿಯಾಗಿದ್ದವು ಈ ನೋಕಿಯಾ ಹ್ಯಾಂಡ್‌ಸೆಟ್‌ಗಳು, ಇವೇನೂ ಸ್ಮಾರ್ಟ್‌ಫೋನ್‌ಗಳಲ್ಲ. ಆದರೂ ಇವುಗಳಲ್ಲಿ ಮೆಸೇಜ್ ಹಾಗೂ ಕಾಲ್ ಮಾಡಲು ಸಾಧ್ಯವಾಗುತ್ತಿತ್ತು. ಹಾಗೆಯೇ ಇಯರ್ ಫೋನ್ ಸಿಕ್ಕಿಸಿದರೆ ಎಫ್‌ಎಂ ರೇಡಿಯೋಗಳನ್ನು ಕೇಳಬಹುದಿತ್ತು. ಜೊತೆಗೆ ಸ್ಮಾರ್ಟ್‌ಫೋನ್ ಅಲ್ಲದಿದ್ದರು ಇದರಲ್ಲೊಂದು ಗೇಮ್ ಇತ್ತು ಅದೇ ಸ್ನೇಕ್ ಗೇಮ್,  ಆ ಗೇಮನ್ನು ಬಹುತೇಕ 90ರ ದಶಕದ ಎಲ್ಲಾ ಮಕ್ಕಳು ಆಡಿರುತ್ತಾರೆ. ಸಣ್ಣದಾಗಿರುವ ಹಾವು ಸ್ಕ್ರಿನ್ ಮೇಲಿದ್ದ ಹಣ್ಣು ತಿಂದು ತಿಂದು ದೊಡ್ಡದೊಡ್ಡದಾಗುತ್ತಾ ಹೋಗುತ್ತದೆ. ಸುಮ್ಮನೆ ಬಿಟ್ಟರೆ ಹಾವು ಸತ್ತು ಹೋಗುತ್ತದೆ. ಆಟ ಮುಗಿಯುತ್ತದೆ. 

ಸ್ಯಾಮ್‌ಸಂಗ್ 13 ವರ್ಷಗಳ ಪ್ರಾಬಲ್ಯ ಅಂತ್ಯ: ಜಗತ್ತಿನ ನಂ. 1 ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡ ಆ್ಯಪಲ್

ಹಾಗೆಯೇ ಆ ಹಾವನ್ನು ಹೋಲುವಂತದೇ ಹಾವೊಂದು ಮನೆಯ ಗೋಡೆಯ ಮೇಲೆ ಚಲಿಸುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾವಿನ ಚಲನೆಗೂ ಬಹುತೇಕ ನೋಕಿಯಾ ಫೋನ್‌ ಗೇಮ್‌ನಲ್ಲಿರುವ ಹಾವಿನ ಚಲನೆಗೂ ಪೂರ್ಣ ಸಾಮ್ಯತೆ ಇದ್ದು, ಅಮಾಸಿಯನ್ ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಮನೆಯ ಗೋಡೆಯ ಮೇಲೆ ಇಟ್ಟಿಗೆಗಳ ಮಧ್ಯೆ ಇರುವ ಜಾಗದಲ್ಲಿ ಹೊರಳಿಕೊಂಡು ಹೋಗುತ್ತಿದೆ. ವೀಡಿಯೋ ನೋಡಿದ ಅನೇಕರು ಈ ಹಾವು ನೋಕಿಯಾ ಗೇಮ್‌ನ್ನು ನಿಜ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನೋಕಿಯಾಗೆ ಈ ಗೇಮ್ ಮಾಡಲು ಸ್ಪೂರ್ತಿ ಎಲ್ಲಿಂದ ಸಿಕ್ತು ಎಂಬುದು ಈಗ ಗೊತ್ತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಅಲ್ಲದೇ ಆ ಗೇಮನ್ನು ತಾನು ತುಂಬಾ ಇಷ್ಟಪಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸ್ನೇಕ್ ಅನೇಕರನ್ನು ತಮ್ಮ ಹಳೆ ನೆನಪಿಗೆ ದೂಡಿದೆ. 

 

 
 
 
 
 
 
 
 
 
 
 
 
 
 
 

A post shared by amaysim (@amaysim)

 

Latest Videos
Follow Us:
Download App:
  • android
  • ios