ಮಾನವನಾಗಿ ಹುಟ್ಟಿದ್ಮೇಲೆ ಇವನ್ನು ನೋಡಿದಿದ್ದರೆ ಹೇಗೆ?
'ಕೋಶ ಓದಿ ನೋಡು, ದೇಶ ಸುತ್ತಿ ನೋಡು..' ಎಂಬ ಮಾತಿದೆ. ಕೆಲವು ತಾಣಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೀಡುವ ಖುಷಿಯೇ ಬೇರೆ. ಅಪಾರ ಜ್ಞಾನವೂ ವೃದ್ಧಿಯಾಗುತ್ತದೆ. ಮನಸ್ಸನ್ನು ವಿಕಸಿತಗೊಳಿಸುವ ಈ ತಾಣಗಳನ್ನು ಜೀವನದಲ್ಲಿ ಒಮ್ಮೆ ನೋಡಲೇಬೇಕು...
ಭಾರತ ಹಲವು ಪ್ರಾಕೃತಿಕ ಸೌಂದರ್ಯದ ತವರೂರು. ಇಲ್ಲಿ ಹಲವು ಅದ್ಭುತ ತಾಣಗಳಿವೆ. ಕೆಲವು ಪ್ರದೇಶಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಂಥದ್ದೊಂದು ತಾಣ ಮತ್ತೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಅಂಥ ಕೆಲವು ಸ್ಥಳಗಳ ಪಟ್ಟಿ ನಿಮಗಾಗಿ...
ಪರೋಟಾ, ಪೆಸರಟ್ಟು...ತಿನ್ನದೇ ಇರ್ಬೇಡಿ...
ಮಂಜಿನ ಲಿಂಗ, ಅಮರನಾಥ್: ಅಮರನಾಥ ಗುಹೆಯಲ್ಲಿರುವ ಮಂಜಿನ ಶಿವಲಿಂಗ ಭಕ್ತರ ಪ್ರಮುಖ ಯಾತ್ರಾಸ್ಥಳ. ಇಲ್ಲಿ ಪ್ರಕೃತಿಯೇ ಲಿಂಗವಾಗಿ ಮಾರ್ಪಾಡಾಗಿದೆ.
ಮಹಾಬಲಿಪುರಂನಲ್ಲಿರುವ ಕಲ್ಲು : ತಮಿಳುನಾಡಿನ ಮಹಾಬಲಿಪುರಂ ನಗರದಲ್ಲಿ ಈ ಕಲ್ಲಿದೆ. ಈ ಕಲ್ಲು ಕೇವಲ ಒಂದು ಅಂಚಿನಲ್ಲಿ ನಿಂತಿದೆ. ನೋಡಿದಾಗ ಈಗ ಬೀಳುತ್ತದೆ ಎಂದೆನಿಸುತ್ತದೆ.
ಬಿಸಿ ನೀರಿನ ಕುಂಡ, ಮಣಿಕರಣ್ : ಇದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತೀ ಕಣಿವೆಯಲ್ಲಿದೆ. ಇಲ್ಲಿ ಎಲ್ಲ ಕಾಲದಲ್ಲಿಯೂ ಬಿಸಿ ನೀರು ಬರುತ್ತಿರುತ್ತದೆ. ಇದು ಪ್ರವಾಸಿಗರ ಪ್ರಮುಖ ತಾಣ ಮತ್ತು ಯಾತ್ರಾ ಸ್ಥಳವೂ ಹೌದು.
ಅರಕು ಕಣಿವೆಯಲ್ಲಿರುವ ಬೊರ್ರಾ ಗುಹೆ : ಈ ಗುಹೆಯಲ್ಲಿರುವ ಬೇರೆ ಬೇರೆ ವಿಧದ ಅಕಾರ, ಕೆತ್ತನೆಯಂತೆ ಕಾಣುತ್ತದೆ. ಇಲ್ಲಿನ ನೀರಿನಲ್ಲಿ ಮಿನರಲ್ಸ್ ಇದ್ದು, ಬಿಂದು ಬಿಂದುವಾಗಿ ನೀರು ಬೀಳುತ್ತಲೇ ಇರುತ್ತದೆ.
ವ್ಯಾಲಿ ಆಫ್ ಫ್ಲವರ್ಸ್: ಇದನ್ನು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್ ಎನ್ನುತ್ತಾರೆ. ಈ ಕಣಿವೆ ಪೂರ್ತಿಯಾಗಿ ಬೇರೆ ಬೇರೆ ಬಣ್ಣದ ಹೂವುಗಳಿಂದ ಕೂಡಿದೆ. ಇದನ್ನು ನೋಡಲು ಎರಡು ಕಣ್ಣು ಸಾಲದು. ಸ್ವರ್ಗ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ.