ಆತ್ಮೀಯ ಓದುಗರೇ, ನಿಮ್ಮ ದಿನ ಆರಂಭಿಸುವ ಮುನ್ನ ನಿಮ್ಮ ರಾಶಿಯ ಫಲಾಫಲಗಳನ್ನು ನೋಡಿ ಬಿಡಿ

June 03 th horoscope
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಇಂದು ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  
 

ಮೇಷ ರಾಶಿ : ಈ ದಿನ ನಿಮ್ಮದಾಗಿರಲಿದೆ. ನಿಮ್ಮ ಕಾರ್ಯ ಕ್ಷೇತ್ರಕ್ಕೆ ಅಂದರೆ ಕೆಲಸಕ್ಕೆ ಹೋಗುವಾಗ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸು ಮೂಡಲಿದೆ. ಅಕ್ಕಪಕ್ಕದವರಲ್ಲಿ ನಿಮ್ಮ ಬಗ್ಗೆ ಗೌರವ ಮೂಡಲಿದೆ. ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ಶುಭದಿನವಾಗಿರಲಿ. 

ದೋಷಪರಿಹಾರ : ನಿಮಗೆ ಆಪ್ತರಾದವರೊಂದಿಗೆ ನಿಮ್ಮ ಇಷ್ಟ ದೇವಸ್ಥಾನಕ್ಕೆ ಹೋಗಿಬನ್ನಿ. ಅದು ನಿಮ್ಮನ್ನು ಸಂತೋಷವಾಗಿಡಲಿದೆ.

ವೃಷಭ : ಇಂದು ನೀವು ಎದ್ದ ತಕ್ಷಣ ಸೂರ್ಯನನ್ನು 15 ನಿಮಿಷಗಳ ಕಾಲ ನೋಡಬೇಕು. ಜೊತೆಗೆ ನೀವು ತಿಂಡಿ ತಿನ್ನುವ ಮುನ್ನ ಮೂರು ತುತ್ತು ಅನ್ನವನ್ನು ಪಕ್ಷಿಗಳಿಗೆ ಹಾಕಿ ನಿಮ್ಮ ಆಹಾರ ಸ್ವೀಕರಿಸಿ. ಸಹೋದರಿಯರು ಸ್ವಲ್ಪ ಗೋಳಾಡಿಸುತ್ತಾರೆ. ಸಮಾಧಾನವಿರಲಿ.

ದೋಷ ಪರಿಹಾರ : ಕನಿಷ್ಟ 10 ನಿಮಿಷ ನಿಮ್ಮ ಇಷ್ಟ ದೇವರನ್ನು ನೆನೆಯಿರಿ. ನೀವು ಪ್ರಯಾಣ ಮಾಡುವಾಗಾಲಾದರೂ ನೆನೆಯಿರಿ ತೊಂದರೆ ಇಲ್ಲ.

ಮಿಥುನ : ನಿಮ್ಮ ಪ್ರೀತಿ ಪಾತ್ರರೊಂದಿಗೆ ವ್ಯಾಪಾರದ ಮಾತು ಕತೆ, ಜೊತೆಗೂಡಿ ವ್ಯಾಪಾರ ಮಾಡುವ ಮನಸ್ಸಾಗಲಿದೆ. ರಾಜಕೀಯದಲ್ಲಿರುವವರಿಗೆ ಮಿತ್ರರ ಸಹಾಯ. ನಿಮ್ಮ ಮಾತಿನಿಂದ ಸ್ತ್ರೀಯರು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆಯಿಂದ ಮಾತಾಡಿ

ದೋಷ ಪರಿಹಾರ : ಇಂದು 5 ರೀತಿ ಹೂವುಗಳನ್ನು ವಿಷ್ಣು ದೇವಸ್ಥಾನಕ್ಕೆ ಕೊಟ್ಟುಬನ್ನಿ.

ಕಟಕ : ಇಂದು ಅನ್ನಪೂರ್ಣೇಶ್ವರಿಗೆ ಹಾಗೂ ನಾಗ ದೇವರಿಗೆ ಎರಡೂ ದೇವಸ್ಥಾನಕ್ಕೆ ಹಾಲನ್ನು ಕೊಟ್ಟುಬನ್ನಿ. ತಪ್ಪದೆ ಹೋಗಿಬನ್ನಿ ನಿಮ್ಮ ಈ ದಿನ ಆಗುವ ಲಾಭವನ್ನು ಅನುಭವಿಸಿ. ಇಂದು ನಿಮಗೆ ಕಾರ್ಯ ಸ್ಥಳದಲ್ಲಿ ಹಿರಿಯರಿಂದ ವಿಶೇಷ ಮಾಹಿಸಿ ಸಿಗಲಿದೆ. ಚಿಂತೆಯಿಲ್ಲದ ದಿನ.
  
ದೋಷ ಪರಿಹಾರ : ಅನ್ನಪೂರ್ಣೇ ಸದಾಪೂರ್ಣೆ ಮಂತ್ರವನ್ನು 5 ಬಾರಿ ಪಠಿಸಿ

ಸಿಂಹ : ಈ ದಿನ ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ. ಶಾಲೆಗಳಲ್ಲಿ ಟೀಚರ್ಸ್ ನಿಮ್ಮ ಮಕ್ಕಳಮೇಲೆ ಕಂಪ್ಲೆಂಟ್ ಮಾಡಬಹುದು.  ಮಕ್ಕಳ ಮೇಲೆ ರೇಗಾಡುವುದು ಬೇಡ. ಸಮಾಧಾನವಾಗಿ ಎಚ್ಚರಿಸಿ. ನಿಮ್ಮ ದಿನವಾಗಿದೆ.

ದೋಷ ಪರಿಹಾರ : ನಿಮ್ಮ ತೂಕದ ಗೋಧಿಯನ್ನು ದಾನ ಮಾಡಿದರೆ ಈ ದಿನ ಅತ್ಯಂತ ಶುಭದಾಯಕವಾಗಿರುತ್ತದೆ.

ಕನ್ಯಾ : ಸ್ತ್ರೀಯರೇ ನಿಮ್ಮ ಪಾಲಿಗೆ ಈ ದಿನ ಶುಭದಾಯಕ ದಿನ. ನೀವು ಅರಿಯದ ಮೂಲದಿಂದ ಲಾಭ. ನೀವು ಯಾವುದೋ ಒಂದು ಯೋಚನೆಯಲ್ಲಿದ್ದೀರಿ ಆ ಯೋಚನೆ ನಿಮ್ಮದಾಗುತ್ತದೆ ಯೋಚಿಸಬೇಡಿ. ಆದರೆ ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತದೆ. ಎಚ್ಚರವಾಗಿರಿ.
  
ದೋಷ ಪರಿಹಾರ : ವಾಹನದಲ್ಲಿ ಓಡಾಡುವಾಗ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ ಅದಕ್ಕಾಗಿ ಎಚ್ಚರವಿರುವ ಜೊತೆಗೆ ಶನಿ ದೇವರಿಗೆ ದೀಪ ಹಚ್ಚಿ. 

ತುಲಾ :  ಇಂದು ನಿಮ್ಮ ಮಗಳು ನಿಮಗೆ ಸಹಾಯ ಮಾಡುತ್ತಾಳೆ. ನೀವು ಅಂದುಕೊಂಡ ಕಾರ್ಯ ನೆರವೇರುವ ಮುನ್ನ ಗುರುವರ್ಯರಿಗೆ ಪಾದ ಪೂಜೆ ಮಾಡಿದಲ್ಲಿ ಕಾರ್ಯ ಯಶಸ್ವಿಯಾಗಲಿದೆ. ನೀವು ಕಚೇರಿಗೆ ಹೊರಡುವ ಮುನ್ನ ತಾಯಿಗೆ ನಮಸ್ಕಾರ ಮಾಡಿ ಹೊರಡಿ. 

ದೋಷ ಪರಿಹಾರ : ಸಾಧ್ಯವಾದರೆ ನಿಮ್ಮಕೈಲಾದಷ್ಟು ಕಡಲೆಬೇಳೆ ದಾನ ಮಾಡಿ. 

ವೃಶ್ಚಿಕ : ಆತ್ಮೀಯರೇ ನಿಮ್ಮ ರಾಶಿಯ ಅಧಿಪತಿ ಉಚ್ಚನಾಗಿದ್ದಾನೆ ಅತ್ಯಂತ ಶುಭ ಫಲವಿದೆ. ಆದರೆ ಕೇತು ಯುಕ್ತನಾಗಿರುವುದರಿಂದ  ನಿಮಗೆ ಆಗುವ ಶುಭದಲ್ಲಿ ಸ್ವಲ್ಪ ತೊಡಕು ಕೂಡ ಇದೆ. ಮುಖ್ಯವಾಗಿ ಕಚೇರಿಯಲ್ಲಿ ನಿಮ್ಮ ಬಾಸ್ ನಿಂದ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಆದಷ್ಟು ಎಚ್ಚರವಾಗಿರಿ. 

ದೋಷ ಪರಿಹಾರ : ಒಂದು ಸಣ್ಣ ಪರಿಹಾರವೆಂದರೆ 5 ಎಲೆ 5 ಅಡಿಕೆ ಯನ್ನು ಹತ್ತಿರದ ದೇವಸ್ಥಾನಕ್ಕೆ ಕೊಟ್ಟುಬನ್ನಿ. 

ಧನಸ್ಸು : ಸ್ವಲ್ಪ ಸದೃಢವಾಗುವ ಮನಸ್ಸು ಮಾಡುತ್ತೀರಿ. ಮನೆಯಲ್ಲಿ ಇರುವವರು ಹಲವು ಚಿಂತೆಗೆ ಗುರಿಯಾಗುತ್ತೀರಿ, ಇನ್ನು ಕಚೇರಿಗೆ ಹೋಗುವವರು ಶತ್ರುಗಳಿಂದ ಉಪದ್ರವಕ್ಕೆ ಗುರಿಯಾಗುತ್ತೀರಿ. ಅಷ್ಟೇ ಅಲ್ಲ ಮಾನಸಿಕವಾಗಿ ನೋವು ಉಂಟಾಗಬಹುದು. 

ದೋಷ ಪರಿಹಾರ : ಅನನ್ಯ ಭಕ್ತಿಯಿಂದ ನಿಮ್ಮ ಇಷ್ಟ ದೇವರನ್ನು ಸ್ಮರಿಸಿ. 

ಮಕರ : ಪ್ರಿಯರೇ ಇಂದು ನಿಮ್ಮ ಪಾಲಿಗೆ ಲಾಭದ ದಿನ, ನಿಮ್ಮ ಮಾತೇ ನಿಮಗೆ ಎಲ್ಲವನ್ನೂ ತಂದುಕೊಡುತ್ತದೆ. ಸ್ತ್ರೀಯರೊಂದಿಗೆ ಕಾಲಹರಣ ಮಾಡುವ ದಿನ, ಮಾತು ಜೋರಾಗಿರುತ್ತದೆ. ಆದರೆ ಮಾತಾಡುವಾಗ ಎಚ್ಚರವಿರಲಿ. ಮುಖ್ಯ ವಿಷಯವೆಂದರೆ ನೀವು ಜರ್ನಿ ಮಾಡುವಾಗ ಓರ್ವರು ನಿಮ್ಮ ಜೀವನದ ಭಾಗವಾಗುವ ಸಾಧ್ಯತೆ ಇದೆ.
  
ದೋಷ ಪರಿಹಾರ : ಶಿವ ದೇವಸ್ಥಾನದಲ್ಲಿರುವ ಸುಬ್ರಹ್ಮಣ್ಯನಿಗೆ 6 ನಮಸ್ಕಾರ ಮಾಡಿ

ಕುಂಭ :   ಇಂದು ಚಂದ್ರ ನಿಮ್ಮದೇ ರಾಶಿಯಲ್ಲಿದ್ದಾನೆ ಹಾಗಾಗಿ ಈ ದಿನ ಉತ್ತಮ ದಿನವಾಗಿರಲಿದೆ. ಒಳ್ಳೇ ಊಟ ನಿಮ್ಮಪಾಲಿಗಿದೆ.  ಆತುರಾತುರವಾಗಿ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮಿತ್ರರು ನಿಮ್ಮನ್ನು  ಸಂತೈಸುತ್ತಾರೆ. ಮನೆಯಲ್ಲಿ ನಿಮ್ಮ ಬಗ್ಗೆ ಕನಿಕರ ಮೂಡಿ ಸಹಾಯಕ್ಕೆ ಬರುತ್ತಾರೆ.

ದೋಷ ಪರಿಹಾರ : ನೀವಿಂದು ಓಂ ವಾಮದೇವಾಯ ನಮ: ಎಂಬ ಮಂತ್ರವನ್ನ 5 ಬಾರಿ ಪಠಿಸಿ.
  
ಮೀನ :  ಕಚೇರಿಗೆ ಹೊರಡುವ ಮುನ್ನ ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿಕೊಳ್ಳಿ. ವಸ್ತುಗಳನ್ನು ಮರೆತುಹೋಗುವ ಸಾಧ್ಯತೆ ಇದೆ. ನಿಮ್ಮ ಮಕ್ಕಳು ಶಾಲೆಯಲ್ಲಿ ಎಡವಟ್ಟು ಮಾಡಿಕೊಂಡುಬರುವ ಸಾಧ್ಯತೆ ಇದೆ. ಎಚ್ಚರವಹಿದಿ ಕಳಿಸಿ. ತಂದೆಯಿಂದ ವಾಹನ ಸಹಾಯ. ಸಾಮಾನ್ಯ ದಿನ 
  

loader