ಇಂದಿನ ದಿನ ಆರಂಭಿಸುವ ಮುನ್ನ ನಿಮ್ಮ ರಾಶಿ ಫಲಗಳನ್ನು ನೋಡಿ ಬಿಡಿ

July 10 th horoscope
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದು , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ವೃಷಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ನಿಮ್ಮ ತಾಯಿಯಿಂದ ನಿಮಗೆ ಧನ ಲಾಭವಿದೆ. ಆರೋಗ್ಯವೃದ್ಧಿಯೂ ಇದೆ. ಸಹೋದರ ಹಾಗೂ ತಂದೆಯಿಂದ ಉತ್ತಮ ಸಹಕಾರ ಸಿಗಲಿದೆ. ಒಂದು ಸಮಸ್ಯೆ ಎಂದರೆ ತಲೆಗೆ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ಇದೆ. ಎಚ್ಚರವಾಗಿರಿ.

ದೋಷಪರಿಹಾರ : ಗಣಪತಿಗೆ ಗರಿಕೆ ಹಾಗೂ ಬೆಲ್ಲವನ್ನು ಸಮರ್ಪಣೆ ಮಾಡಿ.

ವೃಷಭ : ಆತ್ಮೀಯರೇ ಇಂದು ನಿಮ್ಮ ಮನಸ್ಸಿಗೆ ಸಮಾಧಾನದ ದಿನ, ರಾಜಕಾರಣಿಗಳಿಂದ ಅಥವಾ ಸರ್ಕಾರಿ ಕೆಲಸಗಳಲ್ಲಿ ಸಹಾಯವಾಗಲಿದೆ. ಸುಖ ಹಾನಿಯಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ ಕಾಲಿಗೆ ಸ್ವಲ್ಪ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆ ಇರಲಿ.   

ದೋಷ ಪರಿಹಾರ : ಶನಿ ದೇವರಿಗೆ ಕಪ್ಪು ವಸ್ತ್ರ ದಾನ ಮಾಡಿದರೆ ಒಳಿತು.

ಮಿಥುನ : ಆತ್ಮೀಯರೇ ಇಂದು ನಿಮ್ಮ ತಂದೆ ನಿಮಗೆ ರಕ್ಷಣೆಯಾಗಿ ನಿಲ್ಲುತ್ತಾರೆ. ಸ್ತ್ರೀಯರಿಂದ ಹಣ ನಷ್ಟ ನಷ್ಟವಾಗುವ ಸಂಭವ ಇದೆ. ಮುಖ್ಯ ವಿಚಾರವೆಂದರೆ ದಾಂಪತ್ಯದಲ್ಲಿ ಸ್ವಲ್ಪ ಕಲಹ ಸಂಭವಿಸುವ ಸಾಧ್ಯತೆ ಇದೆ. ಸಣ್ಣಪುಟ್ಟ ವಿಷಯಗಳಿಗೆ ಕೋಪ ಸಂಭವಿಸುತ್ತದೆ. ಶಾಂತತೆ ಇರಲಿ. 

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಅಕ್ಕಿ ಅಥವಾ ಹಾಲನ್ನು ಸಮರ್ಪಿಸಿ

ಕಟಕ : ಪ್ರಿಯರೇ ಇಂದು ಜಲ ವ್ಯಾಪಾರಿಗಳಿಗೆ ಲಾಭದ ದಿನ, ಅಷ್ಟೇ ಅಲ್ಲ ರಸ ವ್ಯಾಪಾರಿಗಳಿಗೆ ಲಾಭದ ದಿನ, ಸ್ವಲ್ಪ ಧನ ನಷ್ಟವೂ ಇದೆ. ಗಂಡ-ಹೆಂಡಿರಲ್ಲಿ ಸ್ವಲ್ಪ ಸಾಮರಸ್ಯ ಸಮಸ್ಯೆ ಕಾಣುವ ಸಾಧ್ಯತೆ ಇದೆ. ಜಗಳಕ್ಕೆ ಆಸ್ಪದ ಕೊಡಬೇಡಿ.
  
ದೋಷ ಪರಿಹಾರ : ಸುಬ್ರಹ್ಮಣ್ಯ ಹಾಗೂ ಗಣಪತಿ ಆರಾಧನೆ ಮಾಡಿ

ಸಿಂಹ : ಪ್ರೀಯ ಓದುಗರೇ ನಿಮ್ಮ ರಾಶಿಯ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಲಿದೆ. ಬೆಳಗ್ಗೆ ಎದ್ದ ಕೂಡಲೇ ಒಂದು ಹಿಡಿ ಗೋಧಿಯನ್ನು ಹಿಡಿದು ಸೂರ್ಯನನ್ನು ನೋಡುತ್ತಾ ಮನೋ ಪ್ರಾರ್ಥನೆ ಸಲ್ಲಿಸಿ ಆ ಗೋಧಿಯನ್ನು ಶಿವ ದೇವಸ್ಥಾನಕ್ಕೆ ಕೊಟ್ಟು ಬನ್ನಿ. ಎಲ್ಲವೂ ಸರಿಹೋಗಲಿದೆ.

ದೋಷ ಪರಿಹಾರ : ಶಿವನ ಆರಾಧನೆ, ಬಿಲ್ವಪತ್ರೆ ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಈ ರಾಶಿಯ ಸ್ತ್ರೀಯರಿಗೆ ಇಂದು ಉತ್ತಮ ದಿನ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿದೆ. ಸ್ವಲ್ಪ ಹಣ ನಷ್ಟವಾಗಲಿದೆ.ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಉಲ್ಬಣವಾಗಲಿದೆ. ಗಂಧರ್ವರ ಆರಾಧನೆಯಿಂದ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. 
  
ದೋಷ ಪರಿಹಾರ : ಗಂಧರ್ವ ಯಂತ್ರ ಮಾಡಿಸಿಕೊಳ್ಳಿ. 

ತುಲಾ :  ಸ್ನೇಹಿತರೇ ಇಂದು ಶತ್ರುಗಳಿಂದ ಲಾಭವಾಗುವ ಸಾಧ್ಯತೆ ಇದೆ. ಅಂದ್ರೆ ಅವರು ನಿಮ್ಮ ಮೇಲೆ ಮಾಡುವ ಯಾವುದೇ ದುಷ್ಟ ಯೋಜನೆ ನಿಮ್ಮ ಪಾಲಿಗೆ ವರವಾಗಲಿದೆ. ನೀವು ಇಂದು ಗುರು-ಸುಬ್ರಹ್ಮಣ್ಯ-ಲಕ್ಷ್ಮೀ ಈ ಮೂರೂ ದೇವರ ಅನುಗ್ರಹ ಪಡೆಯುವುದರಿಂದ ಲಾಭವಾಗಲಿದೆ 

ದೋಷ ಪರಿಹಾರ : ಮೇಲೆ ಹೇಳಿರುವ ಮೂರೂ ದೇವಸ್ಥಾನಕ್ಕೆ ಹೋಗಿಬನ್ನಿ. 

ವೃಶ್ಚಿಕ : ಇಂದು ನಿಮ್ಮ ಅಣ್ಣ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಬಾಯಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳುತ್ತದೆ. ಹುಣ್ಣು ಈ ರೀತಿಯ ಸಮಸ್ಯೆಗಳು ಬಾಧಿಸಬಹುದು. ಸ್ತ್ರೀಯರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಾಧ್ಯತೆಯೂ ಇದೆ.

ದೋಷ ಪರಿಹಾರ : ಶನಿದೇವರ ಆರಾಧನೆ ಜೊತೆಗೆ ಸುಬ್ರಹ್ಮಣ್ಯ ದೇವರನ್ನೂ ಪೂಜಿಸಿ 

ಧನಸ್ಸು : ಇಂದು ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ. ಅದಕ್ಕೆ ಆಸ್ಪದ ಕೊಡಬಾರದು ಎಂದರೆ ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ. ಎಲ್ಲರಿಗೂ ಈ ಸಮಸ್ಯೆ ಇಲ್ಲ ಕೆಲವರಿಗೆ ಮಾತ್ರ. ಉಳಿದವರಿಗೆ ಮನೆಯಲ್ಲಿ ಬಾಧೆಯಂತೂ ಇದ್ದೇ ಇರಲಿದೆ. ಸ್ವಲ್ಪ ಸಮಾಧಾನ ಇರಲಿ. 

ದೋಷ ಪರಿಹಾರ : ಶಿವ ಧ್ಯಾನ ಮಾಡಿ

ಮಕರ :  ಸುಖ ಅಭಿವೃದ್ಧಿ, ಇಂದು ಪಾತ್ರೆ ವ್ಯಾಪಾರಿಗಳಿಗೆ ಉತ್ತಮ ದಿನ, ಗುರು ನಿಮಗೆ ಅನುಕೂಲಕರವಾಗಿರುವುದರಿಂದ ಉದ್ಯೋಗದಲ್ಲಿ ಶೇಯಸ್ಸು ಬಡ್ತಿ ಹೊಂದುವ ಸಾಧ್ಯತೆ ಇದೆ. ಸ್ವಲ್ಪ ಧನ ನಷ್ಟ ಸಂಭವ.
  
ದೋಷ ಪರಿಹಾರ : ಶನಿ ಪ್ರಾರ್ಥನೆ ಮಾಡಿ

ಕುಂಭ :  ಪ್ರಿಯ ಸ್ನೇಹಿತರೇ,  ಇಂದು ಸುಖ ಸ್ಥಾನದಲ್ಲಿರುವ ಚಂದ್ರ ಮನೋಬಲವನ್ನೂ ನಿಶ್ಚಿಂತೆಯನ್ನೂ ತರಲಿದ್ದಾನೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ಆದರೆ ಆತಂಕವೇನೂ ಇಲ್ಲ. ಇಂದು ಓರ್ವ ಹಿರಿಯರು ನಿಮಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ.   

ದೋಷ ಪರಿಹಾರ : ಇಂದು ನೀವು ಮಾಡಬೇಕಾದದ್ದು ಸುಬ್ರಹ್ಮಣ್ಯ ಜಪ. ಓಂ ಕಾರ್ತಿಕೇಯಾಯ ನಮ: ಮಂತ್ರವನ್ನು 18 ಬಾರಿ ಪಠಿಸಿ 
  
ಮೀನ : ಸಹೋದರಿಯರಿಂದ ಸಹಾಯದ ದಿನ, ಸರ್ಕಾರಿ ಕೆಲಸಗಳಲ್ಲಿ ಸಹಾಯವಾಗುವ ಸಾಧ್ಯತೆ ಇದೆ. ಹೆಣ್ಣು ಮಕ್ಕಳು ನಿಮಗೆ ಸಹಾಯವನ್ನು ಮಾಡುತ್ತಾರೆ.
  
ದೋಷ ಪರಿಹಾರ : ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

loader