Asianet Suvarna News Asianet Suvarna News

ನಾನ್-ಸ್ಟಿಕ್‌ ಪಾತ್ರೇಲಿ ಅಡುಗೆ, ಆರೋಗ್ಯಕ್ಕೆ ಮಾರಕ

ಪುರುಸೊತ್ತಿಲ್ಲದ ಈ ಜೀವನಶೈಲಿಯಲ್ಲಿ ಬೇಗ ಬೇಗ, ಸುಲಭವಾಗಿ ಅಡುಗೆ ಮುಗಿಸಲು ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಹೆಚ್ಚುತ್ತಿದೆ. ಇಂಥ ಪಾತ್ರೆಗಳು ಆರೋಗ್ಯಕ್ಕೆ ಹಾನಿಕರವೆಂದು ಒಂದು ಬಳಗ ವಾದಿಸಿದರೆ, ಮತ್ತೊಂದು ಬಳಗ ಇದರಿಂದ ಯಾವುದೇ ಹಾನಿಯೂ ಇಲ್ಲವೆಂಬುದನ್ನು ವಾದಿಸುತ್ತದೆ.

Is Nonstick Cookware Safe to Use

ಪುರುಸೊತ್ತಿಲ್ಲದ ಈ ಜೀವನಶೈಲಿಯಲ್ಲಿ ಬೇಗ ಬೇಗ, ಸುಲಭವಾಗಿ ಅಡುಗೆ ಮುಗಿಸಲು ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಹೆಚ್ಚುತ್ತಿದೆ. ಇಂಥ ಪಾತ್ರೆಗಳು ಆರೋಗ್ಯಕ್ಕೆ ಹಾನಿಕರವೆಂದು ಒಂದು ಬಳಗ ವಾದಿಸಿದರೆ, ಮತ್ತೊಂದು ಬಳಗ ಇದರಿಂದ ಯಾವುದೇ ಹಾನಿಯೂ ಇಲ್ಲವೆಂಬುದನ್ನು ವಾದಿಸುತ್ತದೆ.

ಯಾರು ಏನೇ ಹೇಳಿದರೂ, ಇಂಥ ಪಾತ್ರಗಳ ಓವರ್ ಹೀಟ್ ಖಂಡಿತಾ ಆರೋಗ್ಯಕ್ಕೆ ಮಾರಕ. ಮೊಟ್ಟೆಯಂಥ ಸೂಕ್ಷ್ಮ ಪದಾರ್ಥಗಳಿಂದ ಅಡುಗೆ ತಯಾರಿಸಲು, ನಾನ್ ಸ್ಟಿಕ್ ಪಾತ್ರೆಗಳು ಸಹಕಾರಿಯಾದರೂ, ಹೆಚ್ಚು ಬಿಸಿಯಾಗದಂತೆ ಎಚ್ಚರ ವಹಿಸಲೇ ಬೇಕು.

ಈ ಪಾತ್ರೆಗಳು 300 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಕಾದರೆ, ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೂ ಕಾರಣವಾಗಬಲ್ಲದು. ಅದೂ ಅಲ್ಲದೇ ಇದರ ಮೇಲಿನ ಪದರ ಉದರದಂತೆ ಎಚ್ಚರವಹಿಸಬೇಕು. ಹಾಳಾದ ಪಾತ್ರೆಯನ್ನು ಬಳಸದಿದ್ದರೆ ಒಳಿತು.

ನಾನ್‌ಸ್ಟಿಕ್ ಪಾತ್ರೆ ಎಂದರೇನು?

ಪಾತ್ರೆಯ ಮೇಲಿನ ಪದರವನ್ನು ಪಾಲಿಟೆಟ್ರಾಫ್ಲೋರಿಥೈಲೀನ್ ಎಂಬ ಲೋಹದಿಂದ ಮಾಡಿರುವ ಪಾತ್ರೆಯನ್ನು ನಾನ್‌ಸ್ಟಿಕ್ ಪಾತ್ರೆಗಳೆನ್ನುತ್ತೇವೆ. ಸಾಮಾನ್ಯವಾಗಿ ಇದನ್ನು ಟೆಫ್ಲಾನ್ ಎಂದೂ ಕರೆಯುತ್ತಾರೆ.

ಅಪಾಯವನ್ನು ತಡೆಯೋದು ಹೇಗೆ?

ಕೆಲವೊಂದು ಸರಳ ಸೂತ್ರಗಳಿಂದ ಆರೋಗ್ಯದ ಮೇಲೆ ಈ ಪಾತ್ರೆಗಳು ದುಷ್ಪರಿಣಾಮ ಬೀರದಂತೆ ತಡೆಯಬಹುದು. 

- ಪಾತ್ರೆಯನ್ನು ಮೊದಲೇ ಕಾಯಿಸಿಕೊಳ್ಳಬಾರದು. ಖಾಲಿ ಪಾತ್ರೆ ಬೇಗ ಬಿಸಿಯಾಗುವುದರಿಂದ ಪಾಲಿಮರ್ ಹೊಗೆ ಬೇಗ ಬಿಡುಗಡೆಯಾಗುತ್ತದೆ. ಪಾತ್ರೆಯೊಳಗೆ ನೀರು ಅಥವಾ ಎಣ್ಣೆ ಹಾಕಿ ಬಿಸಿ ಮಾಡಬೇಕು.

- ಸದಾ ಮಧ್ಯಮ ಅಥವಾ ಕಡಿಮೆ ಉರಿಯಲ್ಲಿ ಅಡುಗೆ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು, ಗ್ಯಾಸ್ ಸಹ ಉಳಿಯುತ್ತದೆ. ಅಗತ್ಯದಷ್ಟು ಮಾತ್ರ ಆಹಾರ ಬೇಯಿಸಿ.

- ಅಡುಗೆ ಮಾಡುವಾಗ, ಕರಿಯುವಾಗ ಎಕ್ಸಾಸ್ಟ್ ಫ್ಯಾನ್ ಹಾಕಿ ಅಥವಾ ಕಿಟಕಿಗಳು ತೆರೆದಿರಲಿ.

- ನಾನ್‌ಸ್ಟಿಕ್ ಪಾತ್ರೆಗಳಿಗೆ ಮರ, ಸಿಲಿಕಾನ್ ಅಥವಾ ಪ್ಲಾಸ್ಟಿಕ್ ಸೌಟ್‌ಗಳನ್ನು ಬಳಸಿ. ಲೋಹದ ಸೌಟುಗಳು ಪಾತ್ರೆಗಳನ್ನು ಸ್ಕ್ಯಾಚ್ ಮಾಡಿ, ಬೇಗ ಹಾಳಾಗುವಂತೆ ಮಾಡುತ್ತದೆ. ಹಾಳಾದ ಪಾತ್ರೆ ಬಳಕೆ ಆರೋಗ್ಯಕ್ಕೆ ಹಾನಿಕರ.

- ಸ್ಪಾಂಜ್ ಮತ್ತು ಸೋಪ್ ಬಳಸಿ, ಬೆಚ್ಚಗಿನ ನೀರಲ್ಲಿ ಈ ಪಾತ್ರೆಗಳನ್ನು ಕೈಯಲ್ಲಿಯೇ ತೊಳೆಯಬೇಕು. ಮೆಟಲ್ ಸ್ಕ್ರಬ್ಬರ್ ಅಥವಾ ಸ್ಟೀಲ್ ವೂಲ್ನ್ನು ನಾನ್‌ಸ್ಟಿಕ್ ಪಾತ್ರೆಗಳನ್ನು ತೊಳೆಯಲು ಬಳಸಬಾರದು.

- ಟೆಫ್ಲಾನ್ ಕೋಟಿಂಗ್ ಹಾಳಾಗಲು ಆರಂಭವಾದಂತೆ, ಬೇರೆ ಪಾತ್ರೆಗಳನ್ನು ಕೊಳ್ಳುವುದೊಳಿತು.
 

Follow Us:
Download App:
  • android
  • ios