ಮಹಿಳೆಯರಿಗೆ ಪ್ರತಿ ತಿಂಗಳು ಉಂಟಾಗುವ ಋತುಸ್ರಾವದ ಸಂದರ್ಭದಲ್ಲಿ ಹೊಟ್ಟೆ ನೋವು, ಇನ್ಫೆಕ್ಷನ್, ಬೆನ್ನು ನೋವು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಈ ಸಂದರ್ಭದಲ್ಲಿ ಮಹಿಳೆಯರ ತುಂಬಾ ಹೈಜಿನ್ ಆಗಿರುವುದು ಮುಖ್ಯ. ಈ ಕೆಳಗಿನ ವಿಷಯಗಳ ಬಗ್ಗೆ ಗಮನ ಹರಿಸಿದರೆ ಉತ್ತಮ... 

- ಋತುಸ್ರಾವದ ಸ೦ದರ್ಭದಲ್ಲಿ ಸ್ವಿಮ್ಮಿಂಗ್ ಮಾಡಿದರೆ ಓಕೆ. ಆದರೆ, ಟ್ಯಾಂಪೂನ್ ಬಳಸಿದ್ದರೆ ಸೇಫ್.

- ಋತುಸ್ರಾವದ ಸಂದರ್ಭದಲ್ಲಿ ಮೂಡ್ ಸ್ವಿಂಗ್ ಆಗುವುದು ಸಾಮಾನ್ಯ. ಈ ಸಮಯದಲ್ಲಿ ಸ್ಟ್ರೆಸ್, ಖಿನ್ನತೆ, ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾರ್ಮೋನ್ ಬದಲಾವಣೆಯಿಂದಾಗು ಈ ಸಮಸ್ಯೆಯನ್ನು ಪ್ರಿ ಮೆನ್ಸ್ಟ್ರುಯಲ್ ಸಿಂಡ್ರೋಮ್ ಎನ್ನುತ್ತಾರೆ. ಇದರೆಡೆಗೆ ಗಮನವಿರಲಿ.

- ಪಿರಿಯಡ್ಸ್ ಆಗುವ ಮುನ್ನ ಹಾಗೂ ನ೦ತರ ಬಿಳಿ ದ್ರವ ಸ್ರವಿಸುವುದೂ ಕಾಮನ್. ಓವುಲೇಶನ್ ಸ೦ದರ್ಭದಲ್ಲಿ ಹೀಗಾಗುತ್ತದೆ. ಸುಖಾ ಸುಮ್ನೆ ಭಯ ಬೇಡ. 

- ಕೆಲವೊಮ್ಮೆ ಪಿರಿಯಡ್ಸ್ ಬೇಗ ಆಗುತ್ತದೆ, ಇನ್ನು ಕೆಲವೊಮ್ಮೆ ಒತ್ತಡ, ಬದಲಾದ ಜೀವನ ಶೈಲಿಯಿಂದ ತಡವಾಗುತ್ತದೆ. ಅದಕ್ಕಾಗಿ ಟೆನ್ಶನ್ ಬೇಡ.

- ಕೆಲವರಿಗೆ ಈ ಸಮಯದಲ್ಲಿ ವಿಪರೀತ ಹೊಟ್ಟೆ, ಬೆನ್ನು ನೋವಿನೊಂದಿಗೆ ವಾಂತಿಯಾಗುತ್ತದೆ. ಒಂದೆರಡು ದಿನದಲ್ಲಿ ಇದು ಕಡಿಮೆಯಾಗುತ್ತದೆ. ಒಂದು ವೇಳೆ ವಿಪರೀತವಾಗಿದೆ ಎಂದೆನಿಸಿದರೆ ವೈದ್ಯರನ್ನು ನೋಡಿ. 

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಯಾವ ಆಹಾರ ಬೇಡ?

- ಚಾಕೋಲೇಟ್‌, ಕೆಫೆನೇಟೆಡ್‌ ಸೋಡಾ, ಟೀ ಮತ್ತು ಕಾಫಿಯಂತಹ ಕೆಫೆನ್‌ಯುಕ್ತ ಆಹಾರಗಳಿಂದ ದೂರವಿರಿ. 

- ಹೆಚ್ಚು ಮಸಾಲೆ ಪದಾರ್ಥಗಳ ಸೇವನೆಯಿಂದ ಸಮಸ್ಯೆ ಹೆಚ್ಚುತ್ತದೆ. 

- ಕೊಬ್ಬಿನಾಂಶ ಹೊಂದಿರುವ ಆಹಾರ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥ ಬೇಡ. 

- ರೆಡ್ ಮೀಟ್ ಸೇವಿಸಬೇಡಿ. 

- ಫಾಸ್ಟ್ ಫುಡ್ ಸೇವನೆಗೆ ಕಡಿವಾಣ ಹಾಕಿ. 

- ಚೀಸ್, ಕ್ರೀಮ್ ಮೊದಲಾದ ಡೈರಿ ಉತ್ಪನ್ನಗಳನ್ನು ಅವಾಯ್ಡ್ ಮಾಡಿ. 

ಪಿರಿಯಡ್ಸ್ ಬಗ್ಗೆ ಹೆಣ್ಣಿಗಿರಲಿ ಹೆಮ್ಮೆ

ಯಾವ ಆಹಾರ ಸೇವನೆ ಉತ್ತಮ : 

- ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ದೇಹ ಹೈಡ್ರೇಟ್ ಆಗಿರುತ್ತದೆ. 

- ಒಮೇಗಾ 3 ಫ್ಯಾಟಿ ಆ್ಯಸಿಡ್ ಹೊಂದಿರುವ ಆಹಾರಗಳಾದ ಸಲ್ಮಾನ್‌ ಫಿಶ್‌, ಟುನಾ, ವಾಲ್‌ನಟ್‌ ಮತ್ತು ಫ್ಲ್ಯಾಕ್ಸ್‌ ಸೀಡ್ಸ್‌ ಸೇವಿಸಿ.

- ತಾಜಾ ಹಣ್ಣುಗಳ ಜ್ಯೂಸ್ ಕುಡಿಯಿರಿ. 

- ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಹೊಂದಿರುವ ಆಹಾರಗಳೂ ಡಯಟ್ಟಲ್ಲಿರಲಿ. 

- ಸಾಧ್ಯವಾದಷ್ಟು ಹೆಲ್ದಿ ಆಹಾರಗಳನ್ನು ಸೇವಿಸಿ. 

- ವಿಟಾಮಿನ್‌ ಸಿ ಹೆಚ್ಚಾಗಿರುವ ಹಸಿರು ತರಕಾರಿಗಳು, ಟೊಮ್ಯಾಟೊ, ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಸ್ಟ್ರಾಬೆರಿ ತಿನ್ನಿ.