- Home
- Business
- ಇವರೇ ಶ್ರೀಮಂತಿಕೆಯಲ್ಲಿ ನಾರಾಯಣ ಮೂರ್ತಿ, ಪ್ರೇಮ್‌ಜಿ, ಪಿಚೈರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಐಟಿ ಉದ್ಯಮಿ!
ಇವರೇ ಶ್ರೀಮಂತಿಕೆಯಲ್ಲಿ ನಾರಾಯಣ ಮೂರ್ತಿ, ಪ್ರೇಮ್‌ಜಿ, ಪಿಚೈರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಐಟಿ ಉದ್ಯಮಿ!
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ಮುಂದುವರೆಯುತ್ತಿದೆ. ಭಾರತವು ಈಗ ಅಂತರರಾಷ್ಟ್ರೀಯ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆಯು ಸ್ಥಿರವಾಗಿ ಏರಿಕೆಯತ್ತ ಸಾಗುತ್ತಿದೆ. ಮತ್ತು ಪ್ರತಿ ವರ್ಷ ಹೊಸ ಮುಖಗಳು ಬಿಲಿಯನೇರ್‌ಗಳ ಪಟ್ಟಿಗೆ ಸೇರುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಟಾಪ್ ಬಿಸಿನೆಸ್ ಮ್ಯಾಗಜೀನ್ ಫೋರ್ಬ್ಸ್ ತನ್ನ ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ 2023 ಅನ್ನು ಬಿಡುಗಡೆ ಮಾಡಿತು ಮತ್ತು ಪಟ್ಟಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆದಿದ್ದಾರೆ.
2022 ರಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ಶ್ರೀಮಂತ ಭಾರತೀಯ ಕಿರೀಟ ಪಟ್ಟವನ್ನು ಪಡೆದುಕೊಳ್ಳುವ ಮೂಲಕ ಮುಖೇಶ್ ಅಂಬಾನಿ 2022 ರಲ್ಲಿ ಎರಡನೇ ಸ್ಥಾನದಲ್ಲಿದ್ದರು ಎಂಬುದು ಗಮನಿಸಬೇಕಾದ ಸಂಗತಿ.
IT ಕ್ಷೇತ್ರದ ಶ್ರೀಮಂತ ಭಾರತೀಯನಾಗಿ HCL ಟೆಕ್ ಸಂಸ್ಥಾಪಕ ಶಿವ ನಾಡಾರ್ ಅವರು ಸ್ಥಾನ ಪಡೆದಿದ್ದಾರೆ. 29.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಸಾಫ್ಟ್‌ವೇರ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಂತರದ ಸ್ಥಾನ ಪಡೆದಿದ್ದಾರೆ.
ಶಿವ ನಾಡಾರ್ ಎರಡು ಸ್ಥಾನ ಜಿಗಿತ ಕಂಡು ಮೂರನೇ ಶ್ರೀಮಂತ ಭಾರತೀಯರಾಗಿದ್ದಾರೆ. ಕಳೆದ ವರ್ಷದಲ್ಲಿ ಹೆಚ್‌ಸಿಎಲ್ ಟೆಕ್ನಾಲಜೀಸ್‌ನ ಶೇಕಡ 42 ರಷ್ಟು ಭಾರಿ ಏರಿಕೆಯಿಂದಾಗಿ ನಾಡಾರ್‌ನ ಸಂಪತ್ತಿನ ಹೆಚ್ಚಳವಾಗಿದೆ.
ಕಳೆದ ಒಂದು ವರ್ಷದಲ್ಲಿ ಶಿವ ನಾಡಾರ್ ಅವರ ಸಂಪತ್ತು 7.9 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಶಿವ ನಾಡಾರ್ ಒಬ್ಬ ಪರೋಪಕಾರಿ ಮತ್ತು ಶಿಕ್ಷಣ ಸಂಬಂಧಿತ ಉದ್ದೇಶಗಳಿಗಾಗಿ 662 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅವರ ನಿವ್ವಳ ಮೌಲ್ಯ 243,746.70 ಕೋಟಿ ರೂ.
ಶಿವ ನಾಡಾರ್ ಅವರು ತಮಿಳುನಾಡಿನ ಮೂಲೈಪೋಜಿಯಲ್ಲಿ 1945 ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಅನ್ನು ಪ್ರತಿಷ್ಠಿತ PSG ಕಾಲೇಜ್ ಆಫ್ ಟೆಕ್ನಾಲಜಿ, ಕೊಯಮತ್ತೂರಿನಲ್ಲಿ ಪೂರ್ಣಗೊಳಿಸಿದರು.
ಶಿವ ನಾಡಾರ್ ಅವರಿಗೆ 21 ನೇ ವಯಸ್ಸಿನವರೆಗೆ ಅವರಿಗೆ ಇಂಗ್ಲಿಷ್ನಲ್ಲಿ ಮಾತನಾಡಲು ಬರುತ್ತಿರಲಿಲ್ಲ. 1967 ರಲ್ಲಿ ಅವರು ಪುಣೆಯ ಕೂಪರ್ ಇಂಜಿನಿಯರಿಂಗ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.