ಈ ಹಾವಿನ ಡ್ರಾಮಾ ನೋಡಿದ್ರೆ ದಂಗಾಗ್ತೀರಿ!
ಮನುಷ್ಯನಿಗೆ ನಾಟಕ ಮಾಡೋದನ್ನು ಹೇಳಿಕೊಡ್ಬೇಕಾಗಿಲ್ಲ. ಆದ್ರೆ ಪ್ರಾಣಿಗಳೂ ನಾಟಕ ಆಡುತ್ವೆ, ಅದ್ರಲ್ಲೂ ಹಾವು ಅಂದ್ರೆ ನೀವು ನಂಬ್ತೀರಾ? ಅದ್ಭುತವಾಗಿ ನಾಟಕ ಮಾಡುವ ಹಾವೊಂದು ನಮ್ಮಲ್ಲಿದೆ.
ಪ್ರಪಂಚದಾದ್ಯಂತ ಅನೇಕ ಜಾತಿಯ ಹಾವು (Snake)ಗಳಿವೆ. ವಿಷಕಾರಿ ಹಾವಿನಿಂದ ಹಿಡಿದು ಹಾರುವ ಹಾವಿನವರೆಗೆ ಅನೇಕ ರೀತಿಯ ಹಾವುಗಳನ್ನು ನೀವು ನೋಡ್ಬಹುದು. ಆದ್ರೆ ವಿಶ್ವದಲ್ಲಿರುವ ಹಾವೊಂದು ಅಚ್ಚರಿ ಹುಟ್ಟಿಸುವಂತಿದೆ. ಅದನ್ನು ಅತ್ಯಂತ ನಾಟಕೀಯ ಹಾವೆಂದೇ ಹೇಳಲಾಗುತ್ತದೆ. ಸತ್ತಂತೆ ನಾಟಕ ಮಾಡುವ ಈ ಹಾವಿನ ನಟನೆಗೆ ನೀವು ಬೆಚ್ಚಿ ಬೀಳ್ತೀರಿ. ಎಷ್ಟೇ ಪ್ರಯತ್ನಿಸಿದ್ರೂ ಹಾವು ತನ್ನ ನಟನೆ ಬಿಡೋದಿಲ್ಲ. ತನ್ನ ರಕ್ಷಣೆಗಾಗಿ ಸತ್ತಂತೆ ನಾಟಕ ಮಾಡುವ ಈ ಹಾವಿಗೆ ನಟನೆಯಲ್ಲಿ ಆಸ್ಕರ್ ನೀಡಿದ್ರೂ ತಪ್ಪೇನಿಲ್ಲ. ಆ ಹಾವಿನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಸತ್ತಂತೆ ನಟಿಸುವ ಈ ಹಾವು ಯಾವುದು? : ಯಾರೇ ಮುಟ್ಟಿದ್ರೂ ಸತ್ತಂತೆ ನಾಟಕ ಆಡುವ ಈ ಹಾವಿನ ಹೆಸರು ಹಾಗ್ನೋಸ್ ಸ್ನೇಕ್ (Hognose Snake). ಇದು ವಿಷಕಾರಿ ಹಾವುಗಳಲ್ಲಿ ಒಂದು. ಆದ್ರೆ ಅದ್ರ ವಿಷ ಮನುಷ್ಯನ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಅದು ಕಚ್ಚಿದ್ರೆ ಮನುಷ್ಯ ಸಾಯೋದಿಲ್ಲ. ಆದ್ರೆ ಸ್ವಲ್ಪ ಸಮಯ ಸುಟ್ಟಂತೆ ಭಾಸವಾಗುತ್ತದೆ. ಇದು ಸೌಮ್ಯವಾದ ವಿಷ (Poison)ವನ್ನು ಉತ್ಪಾದಿಸುತ್ತದೆ. ದವಡೆಯ ಹಿಂಭಾಗದಲ್ಲಿ ಎರಡು ಹಲ್ಲುಗಳಿಂದ ಇದು ವಿಷವನ್ನು ಹೊರಗೆ ಹಾಕುತ್ತದೆ. ಆದ್ರೆ ಇದು ಕಚ್ಚೋದು ಬಹಳ ಅಪರೂಪ.
ರತ್ನದಂತೆ ಮಿನುಗುವ ಈ ಕಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?
ಹಾಗ್ನೋಸ್ ಸ್ನೇಕ್ ಹಾವು 20 ರಿಂದ 30 ಇಂಚು ಉದ್ದವಿರುತ್ತದೆ. ಈ ಹಾವು ಸಣ್ಣ ಕೀಟದಿಂದ ಹಿಡಿದು ಸಣ್ಣ ಹಕ್ಕಿಗಳ ಮೇಲೆ ದಾಳಿ ಮಾಡುತ್ತದೆ. ಸತ್ತಂತೆ ನಾಟಕವಾಡುವ ಈ ಹಾಡಿನ ವರ್ತನೆ ಮಾತ್ರ ತುಂಬಾ ವಿಚಿತ್ರವಾಗಿದೆ. ಯಾವುದೇ ವಸ್ತು ಅಥವಾ ಯಾವುದೇ ಪ್ರಾಣಿ ಅದನ್ನು ಟಚ್ ಮಾಡಿದಾಗ ಅದು ಸತ್ತಂತೆ ಬಿದ್ದಿರುತ್ತದೆ. ಆಗ ಭೇಟೆಗಾರ ಅದು ಸತ್ತಿದೆ ಎಂದು ಭಾವಿಸುತ್ತಾನೆ. ಅಷ್ಟೇ ಅಲ್ಲ ಈ ಹಾವಿನಿಂದ ದುರ್ವಾಸನೆ ಬರುತ್ತದೆ. ಆರಂಭದಲ್ಲಿ ತನ್ನ ಕತ್ತನ್ನು ತಿರುಗಿಸಿ ಸೇಡು ತೀರಿಸಿಕೊಳ್ಳುವಂತೆ ಮಾಡುವ ಹಾವು, ತಿರುಗಿ ಬೀಳುತ್ತದೆ. ನೋಡೋರಿಗೆ ಇದು ಸತ್ತಿದೆ ಎಂದು ಭಾಸವಾಗುತ್ತದೆ. ವಾಸನೆ ಕೂಡ ಬರೋದ್ರಿಂದ ಮುಂದಿರುವವರು ಮೋಸ ಹೋಗ್ತಾರೆ.
ಹಾಗ್ನೋಸ್ ಹಾವು, ಹಳದಿ, ಕಂದು, ಬೂದು, ಆಲಿವ್ ಮತ್ತು ಕಪ್ಪು ಬಣ್ಣದಲ್ಲಿ ಇರುತ್ತದೆ. ಕೆಲ ಹಾವುಗಳ ಕಣ್ಣುಗಳ ಹಿಂದೆ ಕಪ್ಪು ಕಲೆ ಇರುತ್ತದೆ. ಇನ್ನು ಕೆಲ ಹಾವುಗಳ ಬೆನ್ನಿನ ಮೇಲೆ ಗಾಢ ಕಂದು ಬಣ್ಣದ ಚುಕ್ಕೆ ಇರುತ್ತದೆ. ಹಾಗ್ನೋಸ್ ನ ಹೆಣ್ಣು ಹಾವುಗಳು ಸಾಮಾನ್ಯವಾಗಿ ಗಂಡು ಹಾವಿಗಿಂತ ದೊಡ್ಡದಾಗಿರುತ್ತವೆ. ಹಾಗ್ನೋಸ್ ಹಾವುಗಳು ಸುಮಾರು 10-15 ವರ್ಷಗಳವರೆಗೆ ಬದುಕಬಲ್ಲವು.
ಆಧುನಿಕತೆಯಿಂದ ದೂರವಿರುವ ರಹಸ್ಯ ಗ್ರಾಮ, 200 ವರ್ಷ ಹಿಂದಿನ ಬದುಕು!
ಹಾಗ್ನೋಸ್ ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತವೆ. ಸದ್ಯದ ಒಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕೈನಿಂದ ಎತ್ತಿ ಹಾಕ್ತಾನೆ. ಅದು ತಕ್ಷಣ ತಿರುಗಿ ಬೀಳುತ್ತದೆ. ಎಷ್ಟೇ ಬಾರಿ ಹಾವನ್ನು ಮಗುಚಿ ಹಾಕಿದ್ರೂ ಅದು ಉಲ್ಟಾ ಬೀಳುತ್ತದೆ. ಪ್ರತಿ ಬಾರಿಯೂ ಸತ್ತಂತೆ ವರ್ತಿಸುತ್ತದೆ. ಕೆಲ ಬಾರಿ ನಾಲಿಗೆಯನ್ನು ಹೊರಗೆ ಹಾಕಿ ಅದು ಸತ್ತಂತೆ ವರ್ತಿಸುತ್ತದೆ.