Asianet Suvarna News Asianet Suvarna News

ಅಕ್ಕಿ ದೋಸೆ ಹಿಟ್ಟು ರೆಡಿ ಇಲ್ವಾ? ಗೋಧಿ ದೋಸೆ ಟ್ರೈ ಮಾಡಿ

ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಬೆಂಗಳೂರಲ್ಲಂತೂ ಒಂದೊಂದು ಹೊಟೇಲ್, ಒಂದೊಂದು ದೋಸೆಗೆ ಫೇಮಸ್. ವಿದ್ಯಾರ್ಥಿ ಭವನ್ ಮಸಾಲ ದೋಸೆಗೆ, ಕೃಷ್ಣ ಭವನ್ ಬೆಣ್ಣೆ ಮಸಾಲೆಗೆ, ಜನಾರ್ದನ  ಈರುಳ್ಳಿ ದೋಸೆಗೆ, ಹೊಟೇಲ್ ದ್ವಾರಕಾ ಖಾಲಿ ದೋಸೆಗೆ, ರಾಮಕೃಷ್ಣ ರಾಗಿ ದೋಸೆಗೆ ಮತ್ತು ಶಾಂತಿ ಸಾಗರ್ ಸೆಟ್ ದೋಸೆಗೆ ಸಿಕ್ಕಾಪಟ್ಟೆ ಫೇಮಸ್.

Instant Wheat Dosa

ಅಕ್ಕಿ ದೋಸೆ ಹಿಟ್ಟು ರೆಡಿ ಇಲ್ವಾ? ಗೋಧಿ ದೋಸೆ ಟ್ರೈ ಮಾಡಿ

ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. 

ಬೆಂಗಳೂರಲ್ಲಂತೂ ಒಂದೊಂದು ಹೊಟೇಲ್, ಒಂದೊಂದು ದೋಸೆಗೆ ಫೇಮಸ್. ವಿದ್ಯಾರ್ಥಿ ಭವನ್ ಮಸಾಲ ದೋಸೆಗೆ, ಕೃಷ್ಣ ಭವನ್ ಬೆಣ್ಣೆ ಮಸಾಲೆಗೆ, ಜನಾರ್ದನ  ಈರುಳ್ಳಿ ದೋಸೆಗೆ, ಹೊಟೇಲ್ ದ್ವಾರಕಾ ಖಾಲಿ ದೋಸೆಗೆ, ರಾಮಕೃಷ್ಣ ರಾಗಿ ದೋಸೆಗೆ ಮತ್ತು ಶಾಂತಿ ಸಾಗರ್ ಸೆಟ್ ದೋಸೆಗೆ ಸಿಕ್ಕಾಪಟ್ಟೆ ಫೇಮಸ್. 

ನಿಮ್ಮ ಮನೆಯಲ್ಲಿಯೂ ವಿಧವಿಧವಾಗಿ ದೋಸೆ ಮಾಡಿ, ಸವಿಯಬಹುದು ಗೊತ್ತಾ? ಇಲ್ಲಿವೆ ವಿಶೇಷ ದೋಸೆಗಳ ರಿಸಿಪಿ...

ಗೋಧಿ ದೋಸೆ ವಿಧಾನ:

ಬೇಕಾಗುವ ಸಾಮಾಗ್ರಿಗಳು

- ಅರ್ಧ ಕಪ್ ಗೋಧಿ ಇಟ್ಟು

- ಅರ್ಧ ಕಪ್ ಅಕ್ಕಿಹಿಟ್ಟು

- 2 ಚಮಚ ರವೆ

- 1 ಚಮಚ ಮೊಸರು

- 2 ಕಪ್ ನೀರು

- ಅರ್ಧ ಸಣ್ಣಗೆ ಹೆಚ್ಚಿರುವ  ಈರುಳ್ಳಿ

- ಸ್ವಲ್ವ  ಶುಂಠಿ

- 1 ಮೆಣಸಿನ ಕಾಯಿ

- ಸಣ್ಣಗೆ ಹೆಚಿರುವ 2 ಚಮಚ ಕೊತ್ತಂಬರಿ ಮತ್ತು ಕರಿಬೆೇವು

- 1 ಚಮಚ ಜೀರಿಗೆ 

- ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

- ಅರ್ಧ ಕಪ್ ಅಕ್ಕಿಹಿಟ್ಟು, 2 ಚಮಚ ಮೊಸರು, 1 ಕಪ್ ನೀರು ಸೇರಿಸಿ. 

-ಸಣ್ಣಗೆ ಹೆಚ್ಚಿರುವ ಅರ್ಧ ಈರುಳ್ಳಿ, ಸ್ವಲ್ಪ ಶುಂಠಿ, ಮೆಣಸಿನ ಕಾಯಿ,  ಸಣ್ಣ ಹೆಚ್ಚಿರುವ 2 ಚಮಚ ಕೊತ್ತಂಬರಿ ಮತ್ತು ಕರಿಬೇವು ,1 ಚಮಚ ಜೀರಿಗೆ,  ಉಪ್ಪು 

ಸೇರಿಸಿ ಕಲಸಿ 20 ನಿಮಿಷ ಹಾಗೆ ಬಿಡಬೇಕು. ಬೇಕಾದರೆ ಸರಿ ಹೋಗುವಷ್ಟು ನೀರು ಸೇರಿಸಿಕೊಳ್ಳಿ. 

-ಕಾದ ಕಾವಲಿ ಮೇಲೆ ದೋಸೆ ಹುಯ್ಯಿರಿ. ರುಚಿ ರುಚಿಯಾದ, ಸುಲಭವಾಗಿ ಮಾಡುವ ಗೋಧಿ ದೋಸೆ ರೆಡಿ.

Follow Us:
Download App:
  • android
  • ios