ದೇಹಕ್ಕೆ ರಾಗಿ ಬೇಕು, ಮುದ್ದೆ ಬೇಜಾರು, ದೋಸೆ ಟ್ರೈ ಮಾಡಿ

Instant Ragi Dosa
Highlights

ರಾಗಿ ಬಾಯಿಗೆ ಅಷ್ಟು ರುಚಿ ಎನಿಸದೇ ಹೋದರೂ, ಆರೋಗ್ಯಕಾರಿ. ಮುದ್ದೆ ಸಾಮಾನ್ಯವಾಗಿ ಎಲ್ಲರಿಗೂ ಸೇರೋಲ್ಲ. ಆದರೆ, ವಿಧ ವಿಧ ಮಸಾಲೆ ಹಾಕಿ ರಾಗಿ ದೋಸೆ ಮಾಡಿದರೆ ರುಚಿ ರುಚಿಯಾಗಿರುತ್ತದೆ. ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.

ದೇಹಕ್ಕೆ ರಾಗಿ ಬೇಕು, ಮುದ್ದೆ ಬೇಜಾರು, ದೋಸೆ ಟ್ರೈ ಮಾಡಿ

ರಾಗಿ ಬಾಯಿಗೆ ಅಷ್ಟು ರುಚಿ ಎನಿಸದೇ ಹೋದರೂ, ಆರೋಗ್ಯಕಾರಿ. ಮುದ್ದೆ ಸಾಮಾನ್ಯವಾಗಿ ಎಲ್ಲರಿಗೂ ಸೇರೋಲ್ಲ. ಆದರೆ, ವಿಧ ವಿಧ ಮಸಾಲೆ ಹಾಕಿ ರಾಗಿ ದೋಸೆ ಮಾಡಿದರೆ ರುಚಿ ರುಚಿಯಾಗಿರುತ್ತದೆ. ಮಾಡೋದು ಹೇಗೆ? ಇಲ್ಲಿದೆ ರೆಸಿಪಿ..

ಬೇಕಾಗುವ ಸಾಮಾಗ್ರಿಗಳು

- 1 ಕಪ್ ರಾಗಿ

- 1 ಕಪ್ ರವೆ

- ಅರ್ಧ ಕಪ್ ಮೊಸರು

- 1 ಹೆಚ್ಚಿದ ಮೆಣಸಿನ ಕಾಯಿ

- ಸ್ವಲ್ಪ ಶುಂಠಿ

- ಸಣ್ಣಗೆ ಹೆಚ್ಚಿರುವ 1 ಚಮಚ ಕೊತ್ತಂಬರಿ ಮತ್ತು ಕರಿಬೇವು

- 1 ಸಣ್ಣಗೆ ಹಚ್ಚಿರುವ  ಈರುಳ್ಳಿ 

-1 ಚಮಚ ಜೀರಿಗೆ

- ಅರ್ಧ ಚಮಚ ಕಾಳುಮೆಣಸಿನ ಪುಡಿ

- ಸ್ವಲ್ಪ ಉಪ್ಪು

- 1 ಕಪ್ ನೀರು

ಮಾಡುವ ವಿಧಾನ:

    -  ರಾಗಿ, ರವೆ,  ಮೊಸರು, ಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು, ಈರುಳ್ಳಿ, ಮೆಣಸಿನ ಪುಡಿ, ಉಪ್ಪು ಹಾಗೂ ನೀರನ್ನು ಮಿಕ್ಸ್ ಮಾಡಿ. 15 ನಿಮಿಷ ಹಾಗೆಯೇ ಬಿಡಿ. ಹದವಾಗಿರುವಂತೆ ನೀರು ಸೇರಿಸಿಕೊಳ್ಳಿ.

- ಕಾದ ಬಾಣಲೆ ಮೇಲೆ ದೋಸೆ ಮಾಡಿ. ರುಚಿ ರುಚಿಯಾದ, ಆರೋಗ್ಯಕಾರಿ ದೋಸೆ ರೆಡಿ.

loader